Site icon Vistara News

Vijay Raghavendra: ʻಡಿಕೆಡಿʼಯಲ್ಲಿ ವಿಜಯ್‌ ರಾಘವೇಂದ್ರ; ʻಚಿನ್ನಾರಿ ಮುತ್ತ ನಮಗೆಲ್ಲ ಮಾದರಿʼಅಂದ್ರು ಫ್ಯಾನ್ಸ್‌!

Vijay Raghavendra in Dance Karnataka Dance7

ಬೆಂಗಳೂರು: ವಿಜಯ್‌ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana Vijay Raghavendra) ಹಠಾತ್‌ ಹೃದಯಾಘಾತದಿಂದ ನಿಧನರಾದರು. ನೋವಿನಲ್ಲಿ ಇದ್ದರೂ ವಿಜಯ್‌ ಅವರು ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಈಗಾಗಲೇ ಅವರ ಕದ್ದ ಚಿತ್ರ (Kadda Chitra Cinema) ಸಿನಿಮಾ ಪ್ರಮೋಷನ್‌ನಲ್ಲಿಯೂ ತೊಡಗಿದ್ದಾರೆ. ಜತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ (Dance Karnataka Dance7) ಜಡ್ಜ್​ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ʻʻಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿʼʼಎಂದು ಅವರ ಅಭಿಮಾನಿಗಳು ವಿಜಯ್‌ ಅವರನ್ನು ಹೊಗಳುತ್ತಿದ್ದಾರೆ.

ಈಗಾಗಲೇ ವಿಜಯ್‌ ಅವರು ಮಾಧ್ಯಮಗಳ ಸಂದರ್ಶನದಲ್ಲಿ ʻʻನಾನು ಸುಮ್ಮನೇ ಕೂರುವುದು ಸ್ಪಂದನಾಗೆ ಇಷ್ಟವಿರಲಿಲ್ಲʼʼಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಈ ವಾರದ ಪ್ರೋಮೊ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಜಡ್ಜ್​​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಒಬ್ಬರು ʻʻರಾಘು ಸರ್ ನೀವು ಬಂದಿದ್ದು ತುಂಬಾ ಖುಷಿ ಆಯ್ತು. ನೋವುಗಳ ಜತೆ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವುದು ಮುಖ್ಯ ಎನ್ನುವುದನ್ನು ಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿ ಸರ್ʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻನೀವು ಮತ್ತೆ ಡಿಕೆಡಿ ಗೆ ಬಂದಿರುವುದು ತುಂಬಾ ಖುಷಿ ಇದೆʼʼಎಂದು ಕಮೆಂಟ್‌ ಮಾಡಿದ್ದಾರೆ. ಈ ಎಪಿಸೋಡ್‌ ಸೆಪ್ಟೆಂಬರ್ 2ರಂದು ರಾತ್ರಿ 7:30ಕ್ಕೆ ಪ್ರಸಾರ ಆಗಲಿದೆ. ಶಿವರಾಜ್​ಕುಮಾರ್, ರಕ್ಷಿತಾ ಪ್ರೇಮ್, ಚಿನ್ನಿ ಮಾಸ್ಟರ್​, ವಿಜಯ್ ರಾಘವೇಂದ್ರ ಜಡ್ಜ್ ಸ್ಥಾನದಲ್ಲಿದ್ದಾರೆ.

ವಿಸ್ತಾರದೊಂದಿಗೆ ವಿಜಯ್‌ ರಾಘವೇಂದ್ರ ಅವರು ಸ್ಪಂದನಾ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಮಗ ಶೌರ್ಯ ಕೂಡ ಈಗ ಸುಧಾರಿಸಿದ್ದಾನೆ. ಅವನು ಅಮ್ಮನ ರೀತಿ ಗಟ್ಟಿ. ಮಗನ ಎದುರು ನಾನು ಧೈರ್ಯದಿಂದ ಇರಬೇಕು. ಒಬ್ಬನೇ ಇದ್ದಾಗ ಅತ್ತು ಬಿಡುತ್ತೇನೆ. ಆದರೆ ಮಗನಿಗೆ ಅಮ್ಮ ಇಲ್ಲದಿರುವುದು ಬಹಳ ಕಷ್ಟ ಆಗುತ್ತಿದೆ. ಆದರೆ ಸುಧಾರಿಸಿದ್ದಾನೆʼʼಎಂದು ಹೇಳಿಕೊಂಡರು.

ಇದನ್ನೂ ಓದಿ: Vijay Raghavendra: ವಿಜಯ್‌ ರಾಘವೇಂದ್ರ ʻಜೋಗ್ 101ʼ ಚಿತ್ರದ ಫಸ್ಟ್ ಲುಕ್ ಔಟ್‌!

ವಿಜಯ್‌ ರಾಘವೇಂದ್ರ (Vijay Raghavendra) ನಾಯಕನಾಗಿ ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ವಿಜಯ್‌ ಅವರ ಪತ್ನಿ ಸ್ಪಂದನಾ ಹಠಾತ್‌ ನಿಧನದಿಂದಾಗಿ ಸಿನಿಮಾ ಮುಂದೂಡಲಾಗಿತ್ತು. ಈಗಾಗಲೇ ‘ಕದ್ದ ಚಿತ್ರ’ ಟ್ರೈಲರ್‌ (Kadda Chitra Trailer Release) ರಿಲೀಸ್‌ ಆಗಿದೆ. ಇದೀಗ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್‌ ಮಾಡಿದೆ. ಇದೇ ಸೆಪ್ಟೆಂಬರ್‌ 8ರಂದು ರಾಜ್ಯಾದ್ಯಂತ ʻಕದ್ದ ಚಿತ್ರʼ ಸಿನಿಮಾ ತೆರೆ ಕಾಣಲಿದೆ.

Exit mobile version