ಬೆಂಗಳೂರು: ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ಆಗಸ್ಟ್ 6ರಂದು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸ್ಪಂದನಾ ಅವರು ಮೃತಪಟ್ಟು ಆಗಸ್ಟ್ 18ಕ್ಕೆ 13 ದಿನಗಳು ಕಳೆದಿವೆ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲ ಸದಸ್ಯರು ದುಃಖದಲ್ಲಿದ್ದಾರೆ. ಇದೀಗ ಮೊದಲ ಬಾರಿಗೆ ವಿಜಯ್ ರಾಘವೇಂದ್ರ (Vijay Raghavendra) ಅವರು ಪತ್ನಿಯನ್ನು ನೆನೆದು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.
ʻʻಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ, ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ! ನಾನೆಂದೂ ನಿನ್ನವ.. ಕೇವಲ ನಿನ್ನವ” ಹೀಗೆ ವಿಜಯ್ ರಾಘವೇಂದ್ರ ಅವರು (Vijay Raghavendra voice Note) ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್
ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಲೇ ಬಂದ ಶ್ರೀ ಮುರುಳಿ!
ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆ
ಹೃದಯಾಘಾತದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಮರಣೋತ್ತರ ಸಂಸ್ಕಾರ ಕ್ರಿಯೆಗಳು ಆಗಸ್ಟ್ 16ರಂದು ಮಲ್ಲೇಶ್ವರಂ ನಿವಾಸದಲ್ಲಿ ನೆರವೇರಿತ್ತು. ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಶಾಂತಿ ಹೋಮದಲ್ಲಿ ಶಿವ ರಾಜ್‌ಕುಮಾರ್ (Shiva rajkumar) ದಂಪತಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಭಾಗಿಯಾಗಿದ್ದರು. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಅನು ಪ್ರಭಾಕರ್- ರಘು ಮುಖರ್ಜಿ ದಂಪತಿ, ಲಹರಿ ವೇಲು ಕೂಡ ಭಾಗಿಯಾಗಿದ್ದರು.