ಬೆಂಗಳೂರು: ಆರಂಭದಿಂದಲೂ ವಿಭಿನ್ನ ಕಥಾನಕದ ಸುಳಿವು ನೀಡುವ ಮೂಲಕ ಚಿತ್ರಾಭಿಮಾನಿಗಳಿಗೆ ನಿರೀಕ್ಷೆ ಮೂಡಿಸಿರುವ ʻರಾಘುʼ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಇದೇ 28ಕ್ಕೆ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ಸೋಲೋ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಒಂದಿಷ್ಟು ಕೌತುಕಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ರಾಘು ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಕಾಣಿಸಿಕೊಳ್ಳಲಿದ್ದಾರೆ.
ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆ್ಯಕ್ಟಿಂಗ್ ಸಿನಿಮಾ ಎನ್ನಬಹುದು. ಆನ ಹಾಗೂ ಬ್ಯಾಂಗ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆನಂದ್ ಅವರಿಗೆ ರಾಘು ಚೊಚ್ಚಲ ಹೆಜ್ಜೆ. ಮೊದಲ ಹೆಜ್ಜೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: Vijay Raghavendra: ʻರಾಘು’ ಟ್ರೈಲರ್ ರಿಲೀಸ್: ಸೋಲೋ ಆ್ಯಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್
ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನಸೆಳೆಯುತ್ತಿದೆ.ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್‌ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ (ಆಲ್ ಒಕೆ) all ok ಧ್ವನಿಯಾಗಿದ್ದಾರೆ.