ಬೆಂಗಳೂರು: ಉತ್ತರ ಕರ್ನಾಟಕದ ಖಡಕ್ ಭಾಷೆ, ಪವರ್ ಫುಲ್ ಹಿನ್ನೆಲೆ ಸಂಗೀತ, ಪಂಚಿಂಗ್ ಡೈಲಾಗ್ ಮೂಲಕ ಮೊದಲ ನೋಟದಲ್ಲೇ ಥ್ರಿಲ್ ನೀಡುತ್ತದೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ವಿಜಯಾನಂದ (Vijay Sankeshwar) ಟೀಸರ್. ಸಾರಿಗೆ, ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಆನಂದ ಸಂಕೇಶ್ವರ. ಇದೀಗ ವಿಆರ್‌ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ ʻವಿ.ಆರ್.ಎಲ್ʼ ಫಿಲ್ಮ್ಸ್ ಪ್ರೊಡಕ್ಷನ್ ಹೆಸರಿನಲ್ಲಿ ಸ್ವಂತ ನಿರ್ಮಾಣದ ಸಂಸ್ಥೆಯ ಮೂಲಕ ವಿಜಯಾನಂದ ಚಿತ್ರ ನಿರ್ಮಿಸುತ್ತಿದ್ದಾರೆ. ಅದರ ಟೀಸರ್ ಬಿಡುಗಡೆಗೊಂಡಿದ್ದು ಕೆಲವೇ ದಿನದಲ್ಲಿ ೨ ಕೋಟಿ ಮಂದಿ ಇದನ್ನು ವೀಕ್ಷಿಸಿದ್ದಾರೆ. ಟೀಸರ್ ನೋಡಿದ ಜನರು ಕಮೆಂಟ್ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ʻʻಇತಿಹಾಸ ಸೃಷ್ಟಿಸಿದವರೆಲ್ಲರೂ ಅವರ ಅಪ್ಪನ ವಿರುದ್ಧ ಹೋದವರುʼʼ ಎಂಬ ಡೈಲಾಗ್ ಮೂಲಕ ವಿಜಯ ಸಂಕೇಶ್ವರ ಅವರ ಒಟ್ಟು ಜೀವನದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ ಟೀಸರ್. ಹುಬ್ಬಳ್ಳಿ ಭಾಷೆ ಸೊಗಡು ಟೀಸರ್‌ನಲ್ಲಿ ಖದರ್ ಸೃಷ್ಟಿ ಮಾಡಿದೆ.
ಇದನ್ನೂ ಓದಿ | Liger | ಲೈಗರ್ ಸಿನಿಮಾದ ಥೀಮ್ ಸಾಂಗ್ ರಿಲೀಸ್: ಸಖತ್ ಮಾಸ್ ಸಾಂಗ್ ಎಂದ ಫ್ಯಾನ್ಸ್
ವಿಜಯ್ ಸಂಕೇಶ್ವರ್ ಅವರ ಜೀವನಾಧರಿತ ಚಿತ್ರ
ಇದು ವಿಜಯ ಸಂಕೇಶ್ವರ ಅವರ ಜೀವಾನಾಧರಿತ ಚಿತ್ರ ಆಗಿದ್ದು,1976ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರು ಎಂದೆನಿಸಿಕೊಳ್ಳುವ ಕಥಾ ಹಂದರ ಹೊಂದಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಆನಂದ ಸಂಕೇಶ್ವರ ಅವರು ಲಾಜಿಸ್ಟಿಕ್ಸ್ ಕಂಪನಿ ಕಟ್ಟಲು ಮಾಡಿದ ಹೋರಾಟ, ಬದ್ಧತೆ, ಪತ್ರಿಕೆ ಮತ್ತು ಮಾಧ್ಯಮದ ಸಕ್ಸಸ್‌ಫುಲ್ ಪ್ರಯಾಣದ ಕಥೆಯನ್ನು ಒಳಗೊಂಡಿದೆ. ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ತೆಲುಗು ಮತ್ತು ಮಲಯಾಳಂಗಳಿಗೆ ಡಬ್ ಆಗಲಿದೆ. ಹಾಗಾಗಿ ಸಿನಿಮಾದ ಟ್ರೈಲರ್ ಅಷ್ಟೂ ಭಾಷೆಯಲ್ಲಿ ಬಿಡುಗಡೆ ಆಗಿದೆ.
ಪ್ರಮುಖ ಪಾತ್ರದಲ್ಲಿ ತಾರಾಗಣ
ಈ ಹಿಂದೆ ʻಟ್ರಂಕ್ʼ ಎಂಬ ಹಾರರ್ ಥ್ರಿಲರ್ ಸಿನಿಮಾಗೆ ರಿಷಿಕಾ ಶರ್ಮಾ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಟ್ರಂಕ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ನಿಹಾಲ್ ಅವರು ವಿಜಯ್ ಸಂಕೇಶ್ವರ್ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ಪ್ರಮುಖ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ತಂದೆಯ ಪಾತ್ರದಲ್ಲಿ ಅನಂತ್ ನಾಗ್, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ, ಶರಣ್ಯ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ʼವಿಜಯಾನಂದʼ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ | Laal Singh Chaddha | ದಯವಿಟ್ಟು ನನ್ನ ಸಿನಿಮಾ ಬಹಿಷ್ಕರಿಸಬೇಡಿ: ಮನವಿ ಮಾಡಿದ ಆಮಿರ್ ಖಾನ್