Site icon Vistara News

Tamannaah Bhatia: ತಮನ್ನಾಗೆ ನಟ ವಿಜಯ್ ವರ್ಮಾ ಇಟ್ಟ ಮುದ್ದಾದ ನಿಕ್‌ನೇಮ್‌ ಏನು?

Vijay Varma lovingly calls Tamannaah Bhatia

ಬೆಂಗಳೂರು: ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma) ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ಗಳು ಕೆಲವು ದಿನಗಳಿಂದ ಹರಿದಾಡುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇಬ್ಬರೂ ಲಿಪ್‌ ಕಿಸ್‌ ಕೊಟ್ಟಿದ್ದಾರೆ ಎಂಬ ವದಂಂತಿಗಳು ಹಬ್ಬಿತ್ತು. ಕೆಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದೂ ಇದೆ. ಪ್ರೇಮಿಗಳ ದಿನದಂದು ವಿಶೇಷವಾಗಿ ವಿಶ್ ಮಾಡುವ ಮೂಲಕ ತನ್ನ ಪ್ರೇಮಿಯ ಜತೆಗಿನ ಫೋಟೊವನ್ನು ವಿಜಯ್ ವರ್ಮಾ ಶೇರ್ ಮಾಡಿಕೊಂಡಿದ್ದರು. ಇದೀಗ ವಿಜಯ್ ವರ್ಮಾ ಅವರು ತಮನ್ನಾಗೆ ಮುದ್ದಾದ ನಿಕ್‌ ನೇಮ್‌ ಅನ್ನು ನೀಡಿದ್ದಾರೆ.

ವಿಜಯ್‌ ತಮನ್ನಾ ಅವರನ್ನು ಪ್ರೀತಿಯಿಂದ ಟೊಮ್ಯಾಟೋ ಎಂದು ಕರೆಯುತ್ತಾರೆ. ವಿಜಯ್ ವರ್ಮಾ ಸದ್ಯ ದಹಾದ್ ಸೀರೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ದಹಾದ್ ಸರಣಿಗಾಗಿ ಇಡೀ ತಂಡ 73ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಸರಣಿಯನ್ನು ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ನಿರ್ದೇಶಿಸಿದ್ದಾರೆ. 73ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.

ಇದರ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, ‘ನಾವು ಇಲ್ಲಿ ಘರ್ಜಿಸಿದ್ದೇವೆ. ದಹಾದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ. ವಿಜಯ್ ಶೇರ್ ಮಾಡಿದ್ದ ಫೋಟೋವನ್ನು ತಮನ್ನಾ ಶೇರ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೊ ಹಂಚಿಕೊಂಡು, ‘ದಹಾದ್ ತಂಡಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ. ತಮನ್ನಾ ಸ್ಟೇಟಸ್ ಅನ್ನು ವಿಜಯ್ ವರ್ಮಾ ಶೇರ್ ಮಾಡಿ, ‘ಧನ್ಯವಾದಗಳು ಟೊಮ್ಯಾಟೋ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Tamannaah Bhatia: ಪ್ರೇಮಿಗಳ ದಿನದಂದು ವಿಶೇಷ ಫೋಟೊ ಹಂಚಿಕೊಂಡ ವಿಜಯ್ ವರ್ಮಾ: ತಮನ್ನಾ ಕಾಲು ಎಂದ ನೆಟ್ಟಿಗರು!

ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೊ ಮತ್ತು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಬಳಿಕ ಪ್ರೇಮಿಗಳ ದಿನ ವಿಜಯ್‌ ವರ್ಮಾ ಶೇರ್‌ ಮಾಡಿರುವ ಫೋಟೊದಲ್ಲಿ, ಶೂ ಮತ್ತು ಜರ್ಕಿನ್ ನೋಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂಬ ಗಾಸಿಪ್‌ಗಳು ಹರಿದಾಡಿದವು.

ಇದನ್ನೂ ಓದಿ: Tamanna Bhatia | ಡೇಟಿಂಗ್‌ ಸುದ್ದಿ ಬೆನ್ನಲೇ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ?

ʻಲವ್‌ ಸ್ಟೋರಿಸ್‌ 2ʼ ಶೂಟಿಂಗ್‌ ವೇಳೆ ತಮನ್ನಾ ಅವರು ವಿಜಯ್‌ ವರ್ಮಾ ಅವರನ್ನು ಭೇಟಿಯಾಗಿದ್ದರು. ಆಲಿಯಾ ಭಟ್‌ ʻಡಾರ್ಲಿಂಗ್ಸ್‌ʼ ಸಿನಿಮಾದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

Exit mobile version