Site icon Vistara News

Vijay Varma: ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌; ವಿಜಯ್ ವರ್ಮಾ ʻಅತ್ಯುತ್ತಮ ನಟʼ!

Vijay Varma

ಬೆಂಗಳೂರು; ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ನಿರ್ದೇಶನದ ‘ದಹಾದ್’ ವೆಬ್‌ ಸಿರೀಸ್‌ನಲ್ಲಿ ಸೋನಾಕ್ಷಿ ಸಿನ್ಹಾ, ವಿಜಯ್ ವರ್ಮಾ (Vijay Varma:), ಗುಲ್ಶನ್ ದೇವಯ್ಯ ಮತ್ತು ಸೋಹುಮ್ ಶಾ ನಟಿಸಿದ್ದಾರೆ. 73ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು. ಅಷ್ಟೇ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಿತು. ಚಿತ್ರ ಕೂಡ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ರೆಸ್‌ಪಾನ್ಸ್‌ ಪಡೆದಿತ್ತು. ಇದೀಗ ವಿಜಯ್ ವರ್ಮಾ ಅವರು ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌ ಭಾರತದಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು (Best Actor India for Dahaad) ಈ ಸಿರೀಸ್‌ಗಾಗಿ ಗೆದ್ದಿದ್ದಾರೆ.

ಕ್ರೈಮ್ ಥ್ರಿಲ್ಲರ್ ಡ್ರಾಮಾ ಸಿರೀಸ್ ಇದಾಗಿದ್ದು, ಸೋನಾಕ್ಷಿ ಸಿನ್ಹಾ ಪಾತ್ರ ಕೂಡ ಪ್ರಮುಖವಾಗಿದೆ. ಇದರಲ್ಲಿ ಅವರು ಪೊಲೀಸ್‌ ಪಾತ್ರವನ್ನು ನಿರ್ವಹಿಸಿದ್ದರು. ವಿಜಯ್ ವರ್ಮಾ ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ನಟಿಸಿದ್ದಾರೆ. ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌ನಲ್ಲಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. ಇದೀಗ ವಿಜಯ್‌ ವರ್ಮಾ ಕೂಡ ಈ ಪೋಸ್ಟ್‌ಅನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿ ʻʻಇಂತಹ ದೊಡ್ಡ ಗೌರವಕ್ಕೆ ಧನ್ಯವಾದಗಳು ಏಷ್ಯನ್ ಅಕಾಡೆಮಿʼʼಎಂದು ಬರೆದುಕೊಂಡಿದ್ದಾರೆ.

ತಮನ್ನಾ ಜತೆ ವಿಜಯ್‌ ಬ್ಯುಸಿ

ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧರಾಗಿರುವ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ನಟ ವಿಜಯ್‌ ವರ್ಮಾ ಅವರೊಂದಿಗೆ ಕೆಲ ತಿಂಗಳುಗಳಿಂದ ಪ್ರೀತಿಯಲ್ಲಿರುವ ವಿಚಾರ ಬಹಿರಂಗವಾಗಿದೆ. ಸದ್ಯ ಬಾಲಿವುಡ್‌ನ ಹಾಟ್‌ ಟಾಪಿಕ್‌ ಆಗಿರುವ ಈ ಜೋಡಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಲಸ್ಟ್‌ ಸ್ಟೋರಿಸ್‌ 2 ಸಿನಿಮಾದಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. 

ಇದನ್ನೂ ಓದಿ: IFFM Awards 2023: ಫಿಲ್ಮ್‌ ಫೆಸ್ಟಿವಲ್‌ ಆಫ್‌ ಮೆಲ್ಬೋರ್ನ್‌ನಲ್ಲಿ ಪ್ರಶಸ್ತಿ ಪಡೆದ ʻಸೀತಾ ರಾಮಂʼ, ʻಪಠಾಣ್‌ʼ!

ಸುಜೋಯ್‌ ಘೋಷ್‌ ಅವರು ನಿರ್ದೇಶನ ಮಾಡಿರುವ ಲಸ್ಟ್‌ ಸ್ಟೋರಿಸ್‌ 2 ಸಿನಿಮಾದ ಒಂದು ಭಾಗದಲ್ಲಿ ವಿಜಯ್‌ ವರ್ಮಾ ಮತ್ತು ತಮನ್ನಾ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಮೊದಲೇ ತಮನ್ನಾ ಅವರು ತಮ್ಮ ಮತ್ತು ವಿಜಯ್‌ ನಡುವೆ ಪ್ರೀತಿ ಇರುವುದಾಗಿ ಬಹಿರಂಗಪಡಿಸಿದ್ದರು.

Exit mobile version