ಬೆಂಗಳೂರು: ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಆಗಾಗ ವಿವಾದಾತ್ಮಕ ಪೋಸ್ಟ್ಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಜತೆಗೆ ಎಂಜಾಯ್ ಮಾಡುತ್ತಿರುವ, ವೆಕೇಶನ್ ಮೂಡ್ನಲ್ಲಿರುವ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಫುಡ್ವನ್ನು ತುಂಬ ಇಷ್ಟಪಡುವ ವಿಜಯಲಕ್ಷ್ಮೀ ಅವರು ಈಗ ಕೈಯಲ್ಲಿ ಹಿಡಿಯಲಾಗದಷ್ಟು ದೊಡ್ಡದಾಗಿರುವ ಕಪ್ನಲ್ಲಿ ಕಾಫಿ ಸವಿದಿದ್ದಾರೆ. ಇದರ ಜತೆಗೆ ಕ್ರೋಸೆಂಟ್ (Croissant) ಕೂಡಾ ತಿಂದಿದ್ದಾರೆ. ವಿಶೇಷ ಅಂದರೆ ಈ ಕ್ರೋಸೆಂಟ್ ಎತ್ತಲು ಎರಡು ಕೈ ಕೂಡ ಸಾಕಾಗುವುದಿಲ್ಲ. ಈ ಫೋಟೊ ನೋಡಿ ನೆಟ್ಟಿಗರು ಕಾಫಿಯಿಂದ ಸ್ನಾನ ಕೂಡ ಮಾಡಬಹುದು ಎಂದು ಕಮೆಂಟ್ ಮಾಡಿದ್ದಾರೆ!
ವಿಜಯಲಕ್ಷ್ಮಿ ದರ್ಶನ್ ಅವರ ಈ ಬಕೆಟ್ ಸೈಜ್ ಕಪ್ ಕಾಫಿ ಮತ್ತು ಬಿಗ್ ಸೈಜ್ ಕ್ರೋಸೆಂಟ್ ಫೋಟೊ ವೈರಲ್ ಆಗಿದೆ. ʻಒಂದು ಕಪ್ ಕಾಫಿ ತಗೊಂಡರೆ, ಒಂದು ತಿಂಗಳು ಚಿಂತೆ ಇಲ್ಲʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರುʻ ಕಾಫಿ ಎಷ್ಟು ಬೇಕು ನಿಮಗೆ ಕುಡಿಯಿರಿ. ಹಾಗೆ ನಮ್ಮ ಬಾಸ್ಗೂ ಸ್ವಲ್ಪ ಉಳಿಸಿʼ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರ ಜತೆ ವಿನೀಶ್ ಮತ್ತು ದರ್ಶನ್ ಅವರು ಕೂಡ ಈ ಫೋಟೊದಲ್ಲಿ ಇದ್ದಿದ್ದರೆ ಆಗ ಪರ್ಫೆಕ್ಟ್ ಫ್ಯಾಮಿಲಿ ಫೋಟೊ ಆಗ್ತಿತ್ತು ಅನ್ನುವ ಅಭಿಪ್ರಾಯವನ್ನೂ ಕೂಡ ಇದೇ ಸಮಯದಲ್ಲಿ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Darshan Thoogudeepa: ದರ್ಶನ್ ಜತೆಗಿನ ಫೋಟೊ ಹಂಚಿಕೊಂಡ ಪವಿತ್ರಗೌಡ; ವಿಜಯಲಕ್ಷ್ಮಿ ಕೆಂಡಾಮಂಡಲ!
ಪಾರ್ಟಿಯಲ್ಲಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದ ʻಡಿ ಬಾಸ್ʼ
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ವೈಯಕ್ತಿಕ ಜೀವನ ಆಗಾಗ ಚರ್ಚೆಯಲ್ಲಿ ಇರುತ್ತದೆ. ದರ್ಶನ್ ಜತೆ 10 ವರ್ಷಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದೆ ಎಂದು ಪವಿತ್ರಾ ಗೌಡ ಹೇಳಿಕೆ ನೀಡಿದ್ದರು. ಇದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರಾ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ನಡೆದೇ ಹೋಯ್ತು. ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ಪರೋಕ್ಷವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ಇದೂ ಕೂಡ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದಾದ ನಂತರ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಜತೆ ಸ್ಟೆಪ್ಸ್ ಹಾಕಿರುವ ವಿಡಿಯೊ ವೈರಲ್ ಆಗಿತ್ತು.
ದರ್ಶನ್ ವಿರುದ್ಧ ಹಲವು ಕೇಸ್ಗಳು ದಾಖಲಾಗಿವೆ. ಇಷ್ಟೆಲ್ಲ ರಂಪಾಟ ನಡೆದಿದ್ದರೂ ಸ್ನೇಹಿತರ ಬರ್ತ್ಡೇ ಪಾರ್ಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆ ಕುಣಿದು ಕುಪ್ಪಳಿಸಿದ್ದರು. ವಿಜಯಲಕ್ಷ್ಮಿ ಜತೆ ವೇದಿಕೆ ಏರಿ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ʻಬಾಸ್- ಅತ್ತಿಗೆ ಡ್ಯಾನ್ಸ್ ಸೂಪರ್ʼ ಎಂದು ಅಭಿಮಾನಿಗಳು ಖುಷಿಯಾಗಿದ್ದರು.