ಬೆಂಗಳೂರು : ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಸಿನಿಮಾ ʻವಿಜಯಾನಂದʼ (Vijayananda Film ) ಡಿಸೆಂಬರ್ 9 ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಸಂತೋಷ್ ಥಿಯೇಟರ್‌ನಲ್ಲಿ ಕಟೌಟ್‌ಗಳು ರಾರಾಜಿಸುತ್ತಿವೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಿದ್ದು, ಕನ್ನಡದ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಸಿನಿಮಾ ಇದಾಗಿದೆ.
ವಿಶ್ವದಾದ್ಯಂತ 1200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ನಗರದ ಸಂತೋಷ್ , ನವರಂಗ್, ಪ್ರಸನ್ನ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ವೆಲ್ ಕಮ್ ಆಗಿದ್ದು, ಓವರ್‌ಸೀಸ್‌ನಲ್ಲಿ 350 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಜಯಾನಂದ ಆರ್ಭಟ ಶುರುವಾಗಿದೆ. ಪ್ರಸನ್ನ ಚಿತ್ರಮಂದಿರದ ಮುಂದೆ ಕಟೌಟ್‌ಗಳು ರಾರಾಜಿಸುತ್ತಿವೆ. ಪ್ರಸನ್ನ ಚಿತ್ರಮಂದಿರದಲ್ಲಿ ಒಟ್ಟು ಮೂರು ಶೋ ಪ್ರದರ್ಶನಗೊಳ್ಳುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಟೀಸರ್‌ನಿಂದ ಸಿನಿಪ್ರಿಯರನ್ನು ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಈ ಸಿನಿಮಾದಲ್ಲಿ ನಟ ನಿಹಾಲ್ ಹಾಗೂ ನಟಿ ಸಿರಿ ಪ್ರಹ್ಲಾದ್ ಜೋಡಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ | Vijayananda Film | ಯಾವ ಯಾವ ದೇಶಗಳಲ್ಲಿ ವಿಜಯಾನಂದ ಸಿನಿಮಾ ಬಿಡುಗಡೆ?
ಡಾ. ವಿಜಯ ಸಂಕೇಶ್ವರರ ಬಯೋಪಿಕ್ ಅನ್ನು ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿದ್ದಾರೆ. ‘ಟ್ರಂಕ್’ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರರ ಪಾತ್ರದಲ್ಲಿ ನಿಹಾಲ್ ರಜಪೂತ್, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ವಿಜಯ ಸಂಕೇಶ್ವರರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ʻವಿಜಯಾನಂದ’ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 9ರಂದು ಬಿಡುಗಡೆಯಾಗಿದೆ.
ಇದನ್ನೂ ಓದಿ | Vijayananda Film | ʻಐಐಎಂ ವಿದ್ಯಾರ್ಥಿಗಳಿಗೆ ವಿಜಯ ಸಂಕೇಶ್ವರ ಜೀವನದ ಬಗ್ಗೆ ಪಠ್ಯವಾಗಬೇಕುʼ: ಸಿಎಂ ಬೊಮ್ಮಾಯಿ