Site icon Vistara News

Vikram Film | ಒಟಿಟಿಗೆ ಬರಲಿದೆ ವಿಕ್ರಮ್‌ ಸಿನಿಮಾ: ಪಂಚ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ

Vikram Film

ಬೆಂಗಳೂರು : ಕಮಲ್‌ ಹಾಸನ್‌ ಅವರ ಹಿಟ್‌ ಸಿನಿಮಾ ವಿಕ್ರಮ್‌ (Vikram Film) ಇದೀಗ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ವಿಕ್ರಮ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಲಾಗಿದೆ.

ಜುಲೈ 8ಕ್ಕೆ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಮೂಲಕ ವೀಕ್ಷಣೆಗೆ ಇದು ಲಭ್ಯವಾಗಲಿದೆ. ಪ್ರೀಮಿಯರ್‌ನಲ್ಲಿ ಪ್ರಕಟಿಸುವ ಪ್ರೋಮೋವನ್ನು ಈಗಾಗಲೇ ಹಾಟ್‌ ಸ್ಟಾರ್‌ ಬಿಡುಗಡೆ ಮಾಡಿದ್ದು, ದಿನಾಂಕವನ್ನು ರಿವೀಲ್‌ ಮಾಡಿದೆ. ಚಿತ್ರ ರಿಲೀಸ್‌ ಆದ ನಂತರ ಐದನೇ ವಾರವೂ ಅತಿ ಹೆಚ್ಚು ಗಳಿಕೆಯನ್ನು ರಾಜ್ಯದಲ್ಲಿ ಮಾಡಿದ್ದು, ಈ ವರ್ಷದ ತಮಿಳಿನ ಅತ್ಯಂತ ನೆಚ್ಚಿನ ಹಾಗೂ ಅತಿ ಹೆಚ್ಚಿನ ಗಳಿಕೆ ಮಾಡಿರುವ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ.

ಇದನ್ನೂ ಓದಿ | ಕರ್ನಾಟಕದಲ್ಲಿ ಬಾಯ್ಕಾಟ್‌ ಆಗಲಿದೆಯಾ Vikram movie?

ಥಿಯೇಟರ್‌ನಲ್ಲಿ ಕೇವಲ ತಮಿಳಿನಲ್ಲಿ ಮಾತ್ರ ಸಿನಿಮಾ ರಿಲೀಸ್‌ ಆಗಿತ್ತು. ಇದೀಗ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದ್ದು, ಜನರಿಗೆ ಇನ್ನಷ್ಟು ರೀಚ್‌ ಆಗಲಿದೆ ವಿಕ್ರಮ್‌ ಸಿನಿಮಾ. ವಿಶ್ವಾದ್ಯಂತ 400 ಕೋಟಿ ರೂ. ಗಳಿಸಿದ್ದು, ಒಟಿಟಿಯಲ್ಲೂ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.

172 ಕೋಟಿ ರೂ. ತಮಿಳುನಾಡಿನಲ್ಲಿ ಹಾಗೂ 39 ಕೋಟಿ ರೂ. ಕೇರಳ, 38 ಕೋಟಿ ರೂ. ಆಂಧ್ರಪ್ರದೇಶ ಹಾಗೂ 24 ಕೋಟಿ ರೂ. ಕರ್ನಾಟಕ ಮತ್ತು 16.5 ಕೋಟಿ ರೂ. ಹಿಂದಿ ಬೆಲ್ಟ್‌ನಲ್ಲಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು.

ʼವಿಕ್ರಮ್‌ʼ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ವಿಜಯ್‌ ಸೇತುಪತಿ, ಫಹಾದ್‌ ಫಾಸಿಲ್‌ ಕೂಡ ಮಿಂಚಿದ್ದರು.

ಇದನ್ನೂ ಓದಿ | Vikram Film: ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ʼವಿಕ್ರಮ್‌ʼ ಸೋರಿಕೆ ಆಗಿದ್ದು ಹೇಗೆ?

Exit mobile version