ಬೆಂಗಳೂರು : ‘ತ್ರಿವಿಕ್ರಮ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ಈ ಬಾರಿ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಚಿತ್ರದ ಮುಹೂರ್ತ ನೆರವೇರಿದೆ.
ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್
ರಾಜನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಗ್ಯಾಂಗ್‌ಸ್ಟರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಕಥೆ ಕೇಳಿ ವಿಕ್ರಮ್ ರವಿಚಂದ್ರನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ತಮ್ಮ ಎರಡನೇ ಸಿನಿಮಾದಲ್ಲಿ ಮಾಸ್ ಹೀರೊ ಆಗಿ ವಿಕ್ರಮ್ ತೆರೆ ಮೇಲೆ ಮಿಂಚಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಕನ್ನಡದಲ್ಲಿ ‘ಹೆಡ್ ಬುಷ್’ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಾರ್ತಿಕ್ ರಾಜನ್ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.
ಇದನ್ನೂ ಓದಿ | Manoranjan Ravichandran | ಸಂಗೀತಾಗೆ ಮಾಂಗಲ್ಯಧಾರಣೆ ಮಾಡಿದ ಮನೋರಂಜನ್: ಇಲ್ಲಿದೆ ವಿಡಿಯೊ!
ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಟೈಟಲ್, ತಾರಾಬಳಗ, ತಂತ್ರಜ್ಞರು ಹಾಗೂ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ದೇಶಕ ಕಾರ್ತಿಕ್ ರಾಜನ್ ತಿಳಿಸಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಎಸ್.ತಮನ್ ಜತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.
ಇದನ್ನೂ ಓದಿ | Manoranjan Ravichandran | ಮನೋರಂಜನ್ ವಿವಾಹೋತ್ಸವ: ಹೇಗಿದೆ ಕ್ರೇಜಿ ಸ್ಟಾರ್ ಡ್ಯಾನ್ಸ್!