ಬೆಂಗಳೂರು: 12th ಫೇಲ್’ ಸಿನಿಮಾ (12th Fail Movie) ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ವಿಧು ವಿನೋದ್ ಚೋಪ್ರಾ ನಿರ್ದೇಶನ ಮತ್ತು ವಿಕ್ರಾಂತ್ ಮೆಸ್ಸಿ ನಾಯಕನಾಗಿ ನಟಿಸಿರುವ ಚಿತ್ರ ಇದೀಗ ಒಟಿಟಿಗೆ ಲಗ್ಗೆ ಇಡುತ್ತಿದೆ. 12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಡಿಸೆಂಬರ್ 29 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.
12th ಫೇಲ್’ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅಕ್ಟೋಬರ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಚಿತ್ರದಲ್ಲಿ ಮನೋಜ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ ಮತ್ತು ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. 12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.
ಮೇಧಾ ಶಂಕರ್, ಅನಂತ್ ವಿ ಜೋಶಿ, ಅಂಶುಮಾನ್ ಪುಷ್ಕರ್ ಮತ್ತು ಪ್ರಿಯಾಂಶು ಚಟರ್ಜಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ವಾಣಿಜ್ಯಾತ್ಮಕವಾಗಿ, ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆಯಿತು.
ʻಪರಿಂದಾ’, ‘1942 ಎ ಲವ್ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಮುನ್ನಾಭಾಯ್, ತಾರೇ ಜಮೀನ್ ಪರ್, 3 ಈಡಿಯೆಟ್ಸ್ ಸಿನಿಮಾಗಳನ್ನು ನೀಡಿದ ಬಾಲಿವುಡ್‌ನ ವಿಧು ವಿನೋದ್ ಚೋಪ್ರಾ ಅವರೊಂದಿಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಸ್ಟುಡಿಯೋಸ್ ಕೈಜೋಡಿಸಿತ್ತು.
ಇದನ್ನೂ ಓದಿ: 12th Fail Movie: ‘12th ಫೇಲ್’ ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನ!
ಈ ಸಿನಿಮಾ ಸ್ವತಂತ್ರ ನಾಮನಿರ್ದೇಶನವಾಗಿ ಆಸ್ಕರ್‌ಗೆ ಸಲ್ಲಿಸಲ್ಪಟ್ಟಿತ್ತು. ವಿಕ್ರಾಂತ್ ಮೆಸ್ಸಿ ಸ್ವತಃ ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದರು ಎಂದು ವರದಿಯಾಗಿತ್ತು. ವಿಕ್ರಾಂತ್ ಮೆಸ್ಸಿ ಅವರು ಸಿನಿಮಾ ಕುರಿತಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.