Site icon Vistara News

Vikranth Rona : ಸಪ್ತಪದಿ ತುಳಿದ ವಿಕ್ರಾಂತ್​ ರೋಣ ಸಿನಿಮಾದ ನಟಿ ನೀತಾ ಅಶೋಕ್​

Neeta Ashok

ಬೆಂಗಳೂರು: ಕಿಚ್ಚ ಸುದೀಪ್​ ನಟನೆಯ ವಿಕ್ರಾಂತ್​ ರೋಣ (Vikranth Rona) ಸಿನಿಮಾ ಇತ್ತೀಚೆಗೆ ಜೋರು ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಪರ್ಣಾ ಬಲ್ಲಾಳ್​ ಎಂಬ ಪಾತ್ರದಲ್ಲಿ ಮಿಂಚಿದ್ದ ನಟಿ ನೀತಾ ಅಶೋಕ್​ (Neeta Ashok) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಲೇಜಿನಲ್ಲಿ ಓದುವಾಗಲೇ ಇಬ್ಬರ ನಡುವೆ ಲವ್‌ ಆಗಿತ್ತು ಎಂದು ನೀತಾ ಇಂಟರ್‌ವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು. ಹುಟ್ಟೂರು ಉಡುಪಿಯಲ್ಲಿ ನಡೆದ ಶುಭ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದಾರೆ. ಕುಟುಂಬ ಸದಸ್ಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಅವರು ಮದುವೆಯಾಗಿದ್ದು ಸಮಾರಂಭದ ಬಗ್ಗೆ ಹಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ, ಪನ್ನಾ ಅಲಿಯಾಸ್​ ನೀತಾ ಅವರ ವಿವಾಹಕ್ಕೆ ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನೀತಾ ಅಶೋಕ್‌ ಮತ್ತು ಸತೀಶ್ ಮೆಸ್ತಾ 2022ರ ಡಿಸೆಂಬರ್‌ನಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಅದರ ಫೋಟೋಗಳು ಆಗ ವೈರಲ್​ ಆಗಿದ್ದವು. ಮದುವೆ ಡೇಟ್​​ ಫಿಕ್ಸ್‌ ಆಗುತ್ತಿದ್ದಂತೆ ಆಹ್ವಾನ ಪತ್ರಿಕೆ ಕೂಡಾ ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದವು. ಇದೀಗ ಅವರು ಮದುವೆಯಾಗಿದ್ದಾರೆ.

ನೀತಾ ಅಶೋಕ್ ಅವರು ಯಶೋಧ ಸೀರಿಯಲ್​ ಮೂಲಕ ಕನ್ನಡಿಗರ ಮನೆ ತಲುಪಿದ್ದರು. ಬಳಿಕ ಅವರು ನಾ ನಿನ್ನ ಬಿಡಲಾರೆ ಎಂಬ ಸೀರಿಯಲ್​ನಲ್ಲೂ ಕಾಣಿಸಿಕೊಂಡಿದ್ದರು. ಹಿಂದಿ ಸೀರಿಯಲ್​ನಲ್ಲಿ ನಟಿಸುವ ಸದವಕಾಶವನ್ನೂ ಪಡೆದುಕೊಂಡಿದ್ದರು. ಅದೇ ರೀತಿ ವಿಕ್ರಾಂತ್​ ರೋಣ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚುವ ಚಾನ್ಸ್ ಪಡೆದರು. ನಿರೂಪ್​ ಭಂಡಾರಿ ಜತೆಯಾಗಿ ಕಾಣಿಸಿಕೊಂಡ ಅವರು ಅಪರ್ಣಾ ಬಲ್ಲಾಳ್​ ಎಂಬ ಪಾತ್ರವನ್ನು ಜನ ಮೆಚ್ಚುವಂತೆ ನಿಭಾಯಿಸಿದ್ದರು.

ನೀತಾ ಅಶೋಕ್ ಅವರು ಉಡುಪಿಯವರಾಗಿದ್ದು, ಸತೀಶ್​ ಮೆಸ್ತಾ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಕಾಲೇಜಿನಲ್ಲಿದ್ದ ವೇಳೆ ಅವರ ಪ್ರೀತಿ ಮೊಳಕೆಯೊಡೆದಿತ್ತು. ವೃತ್ತಿ ಆರಂಭಿಸಿ ಬಳಿಕವೂ ಅವರು ಪ್ರೀತಿ ಮುಂದುವರಿದು ಬಳಿಕ ಮದುವೆಯಾಗಲು ನಿರ್ಧರಿಸಿದ್ದರು.

ಇದನ್ನೂ ಓದಿ : Kichcha Sudeep : ಕಿಚ್ಚ, ಕುಮಾರ್ ಗಲಾಟೆ ಮಧ್ಯೆ ರೆಹಮಾನ್​ ಎಂಟ್ರಿ; ಮತ್ತೊಂದು ಮೋಸದ ಆರೋಪ

ನೀತಾ ಹಾಗೂ ಅಶೋಕ್ ಅವರ ಮದುವೆ ಸರಳವಾಗಿ ನಡೆದಿದೆ. ಎರಡೂ ಕುಟುಂಬಗಳ ಸದಸ್ಯರು ಹಾಗೂ ಆತ್ಮೀಯರು ಮಾತ್ರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ವಿವಾಹದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಫೋಟೋಗಳು ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಚಿತ್ರಗಳು ಸಿಗಬಹುದು ಎಂದು ಹೇಳಲಾಗಿದೆ.

Exit mobile version