Site icon Vistara News

Vikrant Rona | ವಿಕ್ರಾಂತ್ ರೋಣ ಚಿತ್ರದ ʼಹೇ ಫಕೀರಾʼ ಲಿರಿಕಲ್ ಸಾಂಗ್‌ ಔಟ್‌

Vikrant Rona

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್‌ ವರ್ಲ್ಡ್‌ ವೈಡ್‌ ಸಿನಿಮಾ ವಿಕ್ರಾಂತ್‌ ರೋಣ (Vikrant Rona) ಈಗಾಗಲೇ ಗುಲ್ಲು ಎಬ್ಬಿಸಿದೆ. ಚಿತ್ರತಂಡ ಎರಡು ಹಾಡನ್ನು ರಿವೀಲ್‌ ಮಾಡುವುದರ ಮೂಲಕ ಸಿನಿಪ್ರಿಯರ ಮನ ಗೆದ್ದಿದೆ. ಇದೀಗ ನಿರೂಪ್ ಭಂಡಾರಿ ಕಾಣಿಸಿಕೊಳ್ಳಲಿರುವ ಮೂರನೇ ಹಾಡು ʻಹೇ ಫಕೀರಾʼ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಈ ಹಾಡು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಗೊಂಡಿದೆ.

ಹಾಡಿನಲ್ಲಿ ವಿಭಿನ್ನವಾಗಿ ನಿರೂಪ್‌ ಭಂಡಾರಿ ಕಾಣಿಸಿಕೊಂಡಿದ್ದು, ತಾಯಿ – ಮಗನ ಬಾಂಧವ್ಯ ಮತ್ತು ಟ್ರಾವೆಲ್‌ ಸ್ಟೋರಿಯನ್ನು ಹೇಳುವಂತೆ ಇದೆ. ಅಜನೀಶ್ ಲೋಕನಾಥ್ ಸಂಗೀತವಿದೆ. ಸಂಜೀತ್‌ ಹೆಗ್ಡೆ , ಚಿನ್ಮಯಿ ಶ್ರೀಪಾದ, ಅಜನೀಶ್ ಲೋಕನಾಥ್ ಮತ್ತು ಅನೂಪ್‌ ಭಂಡಾರಿ ಈ ಹಾಡನ್ನು ಹಾಡಿದ್ದಾರೆ.

ಇದನ್ನೂ ಓದಿ | Vikrant Rona | ವಿಕ್ರಾಂತ್‌ ರೋಣ ಎರಡನೇ ಹಾಡು ರಿಲೀಸ್‌: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ

ಈ ಹಿಂದೆ ಚಿತ್ರತಂಡ ʻತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿʼ ಲಿರಿಕಲ್‌ ಸಾಂಗ್‌ ಬಿಡುಗಡೆ ಮಾಡಿತ್ತು. ಕನ್ನಡದಲ್ಲಿ ಬಿಡುಗಡೆಗೊಂಡಿರುವ ಈ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ.

ವಿಕ್ರಾಂತ್‌ ರೋಣ ಸಿನಿಮಾ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಮೊದಲು ಬಿಡುಗಡೆಗೊಂಡ ʻರಾ ರಾ ರಕ್ಕಮ್ಮʼ ಹಾಡು ಸೂಪರ್‌ ಹಿಟ್‌ ಆಗಿತ್ತು. ಈಗ ಎಲ್ಲ ಕಡೆ ಅದರದ್ದೇ ಗುಂಗು. ಅಭಿಮಾನಿಗಳು ರೀಲ್ಸ್‌ ಮಾಡಿ ಖುಷಿಪಟ್ಟರೆ, ಕೆಲವರು ಮನಸಲ್ಲೇ ಹಾಡಿ ಕುಣಿಯುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರಕ್ಕಮ್ಮ.. ಇನ್ನೂ ಕುಣಿಯುತ್ತಿರುವಾಗಲೇ ಇನ್ನೊಂದು ಹಿತವಾದ ಹಾಡನ್ನು ಬಿಡುಗಡೆ ಮಾಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ. ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ | ವಿಸ್ತಾರ TOP 10 NEWS | ವಿಕ್ರಾಂತ್‌ ಟ್ರೈಲರ್‌ನಿಂದ ʼಮಹಾʼ ಕ್ಲೈಮ್ಯಾಕ್ಸ್‌ವರೆಗಿನ ಪ್ರಮುಖ ಸುದ್ದಿಗಳು

Exit mobile version