Site icon Vistara News

Vikrant Rona | ಜೀ 5 ಒಟಿಟಿಯಲ್ಲಿ ವಿಕ್ರಾಂತ್ ರೋಣ ಧಮಾಕ: 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್‌!

ZEE5

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನ ವಿಕ್ರಾಂತ್ ರೋಣ ಸಿನಿಮಾ (Vikrant Rona) ಬ್ಲಾಕ್ ಬಸ್ಟರ್ ಹಿಟ್ ಸೇರಿದೆ. ಕಿಚ್ಚನ ಸಿನಿ ಪಯಣದಲ್ಲಿ ವಿಭಿನ್ನ ಸಿನಿಮಾ ಎನಿಸಿಕೊಂಡ ವಿಕ್ರಾಂತ್‌ ರೋಣ ಜುಲೈ 28ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಸಿನಿಮಾಗೆ ಚಿತ್ರರಸಿಕರು ಜೈಕಾರ ಹಾಕಿದ್ದರು. ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಹೆಸರು ಮಾಡಿದ್ದ ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಅವರ ಜನುಮದಿನ ಸೆ.2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿತ್ತು.

ಇದೀಗ ವಿಕ್ರಾಂತ್ ರೋಣ ಕೇವಲ 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ಹೊಸ ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ಇದನ್ನೂ ಓದಿ | Kichcha Sudeep | ಕಿಚ್ಚನ ಜನುಮದಿನಕ್ಕೆ ಕಾಮನ್ ಡಿಪಿ: ಸಾಥ್ ನೀಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌!

ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್​ ಅವರು ಸುದೀಪ್ ಜತೆಗೆ ಹೆಜ್ಜೆ ಹಾಕಿದ್ದ ʻರಾ ರಾ ರಕ್ಕಮ್ಮʼ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿತ್ತು. ಸ್ಪೆಷಲ್ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಜಾಕಿಗೆ ಕನ್ನಡಿಗರು ಮನಸೋತಿದ್ದರು.

ನಿರೂಪ್​ ಭಂಡಾರಿ, ನೀತಾ ಅಶೋಕ್​, ಮಿಲನ ನಾಗರಾಜ್​, ​ ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಕುಳಿತು ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ | Vikrant Rona | ಕಿಚ್ಚನ ಹುಟ್ಟುಹಬ್ಬಕ್ಕೆ ಜೀ5ನಿಂದ ಸ್ಪೆಷಲ್‌ ಗಿಫ್ಟ್‌: ಮನೆಗೆ ಗುಮ್ಮನ ಆಗಮನ!

Exit mobile version