ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೆ ಕಿಚ್ಚ ಸುದೀಪ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ನೋಡಲು ಆಹ್ವಾನ ನೀಡಿದ್ದಾರೆ.
ಸುದೀಪ್ ಜತೆ ಪತ್ನಿ ಪ್ರಿಯಾ ಮತ್ತು ನಿರ್ಮಾಪಕ ಜಾಕ್ ಮಂಜು ಜತೆಗಿದ್ದರು. ಗುರುವಾರ (ಜು.28) ದೆಹಲಿಯಲ್ಲಿ ಲವು ಸಂಸದರು ವಿಕ್ರಾಂತ್ ರೋಣ ಸಿನಿಮಾ ವೀಕ್ಷಿಸಿದ್ದಾರೆ. ಸುದೀಪ್ ನಟನೆಯ ಸಿನಿಮಾ ನೋಡಲು ಹಲವು ಗಣ್ಯರು ಕಾತುರರಾಗಿದ್ದಾರೆ.
ದೆಹಲಿಯಲ್ಲಿ ವಿಶೇಷವಾಗಿ ಲೋಕಸಭಾ ಸದಸ್ಯರಿಗೆ ಎಂದು ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ಕಾರಣಕ್ಕೆ ನಟ ಸುದೀಪ್ ಸೇರಿದಂತೆ ‘ವಿಕ್ರಾಂತ್ ರೋಣ’ ತಂಡ ದೆಹಲಿಗೆ ಭೇಟಿ ನೀಡಿತ್ತು.
ಇದನ್ನೂ ಓದಿ | ಜಗದಗಲ ಹವಾ ಹಬ್ಬಿಸಿರುವ ವಿಕ್ರಾಂತ್ ರೋಣ ಹೇಗಿದೆ? ರಿವ್ಯೂವರ್ ರಿಮಾರ್ಕ್
ವಿಕ್ರಾಂತ್ ರೋಣ ಸಿನಿಮಾ ವಿಶ್ವದೆಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗುರುವಾರ (ಜು.28) ಸಿನಿಮಾ ಬಿಡುಗಡೆಗೊಂಡಿದ್ದು, ಬೆಳಗ್ಗೆ 6ರಿಂದಲೇ ಪ್ರದರ್ಶನಗಳು ಶುರುವಾಗಿದ್ದವು. ಮೊದಲ ದಿನದ ಬರೋಬ್ಬರಿ 22 ಕೋಟಿ ರೂ. ಸಂಗ್ರಹ ಆಗಿದೆ ಎಂಬ ಮಾಹಿತಿ ಬಂದಿದೆ.
ಕಿಚ್ಚನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಕ್ರಾಂತ್ ರೋಣ ಸಿನಿಮಾ ಕುರಿತ ವಿಡಿಯೊ ಹಾಗೂ ಟ್ವೀಟ್ ಮಾಡುವುದರ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | ವಿಕ್ರಾಂತ್ ರೋಣ ಬಿಡುಗಡೆ ದಿನವೇ ಕನ್ನಡದಲ್ಲಿ ಬರುತ್ತಿದೆ ದಿ ಲೆಜೆಂಡ್ ಸಿನಿಮಾ : ಸರವಣನ್ ಪ್ರತಿಕ್ರಿಯೆ ಏನು?