Site icon Vistara News

Vikrant Rona Movie | VR ಅಂದರೆ ವಿಕ್ರಾಂತ್‌ ರೋಣ ಅಲ್ಲ: V. ರವಿಚಂದ್ರನ್‌ ಅಂತೆ!

Vikrant Rona Movie

ಬೆಂಗಳೂರು : ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ವರ್ಲ್ಡ್‌ ವೈಡ್‌ ಸಿನಿಮಾ ವಿಕ್ರಾಂತ್‌ ರೋಣ (Vikrant Rona Movie) ಟ್ರೈಲರ್‌ ಲಾಂಚ್‌ ಇವೆಂಟ್‌ (Vikrant Rona Trailer) ಒರಯಾನ್‌ ಮಾಲ್‌ನಲ್ಲಿ ಹಮ್ಮಿಕೊಂಡಿದೆ. ಕಿಚ್ಚ ಸುದೀಪ್‌ ಸಿನಿ ಜರ್ನಿ ಮೆಲುಕು ಹಾಕುವ ವಿಡಿಯೋ ಅನಾವರಣ ಮಾಡುವ ಮೂಲಕ ವಿಕ್ರಾಂತ್‌ ರೋಣ ಟ್ರೈಲರ್‌ ಇವೆಂಟ್‌ ಶುರು ಮಾಡಿದೆ.

VR ಅಂದರೆ ರವಿಚಂದ್ರನ್‌ ಅಂತೆ

ಆರು ಅಡಿ ಕಟೌಟ್‌ 3ಡಿ ಮೂಲಕ ನೋಡುವಾಗ ಸ್ಟಾರ್‌ ನಟರು ಸಿನಿಮಾ ನೆಕ್ಸ್ಟ್‌ ಲೆವೆಲ್‌ಗೆ ಕಂಡೊಯ್ಯುತ್ತದೆ ಎಂದು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಇವೆಂಟ್‌ನಲ್ಲಿ ರವಿಚಂದ್ರನ್‌ ಹಾಗೂ ಶಿವಣ್ಣ ಮುಖ್ಯ ಅತಿಥಿಗಳಾಗಿದ್ದು, ರವಿಚಂದ್ರನ್‌ ವೇದಿಕೆ ಮೇಲೆ ಬರುವಾಗ ಕಿಚ್ಚ ಸುದೀಪ್‌ ಅವರನ್ನು ಕರೆದುಕೊಂಡು ವೇದಿಕೆ ಮೇಲೆ ಬಂದರು. ಅನೂಪ್‌ ಭಂಡಾರಿ ಅವರಿಗೆ ʼಸುದೀಪ್‌ಗೆ ಭಯ ಅನ್ನುವುದೇ ಗೊತ್ತಿಲ್ಲ. ಅವನಿಗೆ ಭಯ ಅಂತೀರಾ ನೀವು ಟ್ರೈಲರ್ ಅಲ್ಲಿʼ ಎಂದು ಟ್ರೈಲರ್‌ನಲ್ಲಿ ಇರುವ ಭಯದ ಕುರಿತು ಮಾತನಾಡಿದರು. VR ಅಂದರೆ ವಿಕ್ರಾಂತ್‌ ರೋಣ ಒಂದೇ ಅಲ್ಲ. ಅದರಲ್ಲಿ ನನ್ನ ಹೆಸರೂ ಇದೆ. ವಿಕ್ರಾಂತ್‌ ರೋಣ ರಿಲೀಸ್‌ ಆದ ದಿನ ನನಗೆ ತಂದೆ ಸ್ಥಾನ ಬರುತ್ತದೆ ಎಂದು ಸುದ್ದಿಗೋಷ್ಠಿಯ (Vikrant Rona Press Meet) ವೇದಿಕೆಯಲ್ಲಿ ಹೇಳಿಕೊಂಡರು.

ಇದನ್ನೂ ಓದಿ | Vikrant Rona Movie | ರಕ್ತಕ್ಕೆ ರಕ್ತ, ಕ್ರಾಂತಿಯ ಬೆಂಕಿ : Trailer ಇವೆಂಟ್‌ನಲ್ಲಿ ನಿರ್ದೇಶಕರ ದಂಡು

ಸಾಕಷ್ಟು ಬಾರಿ ವೇದಿಕೆ ಹಂಚಿಕೊಂಡ ಕಿಚ್ಚ ಹಾಗೂ ರವಿಚಂದ್ರನ್‌

ಈ ಹಿಂದೆ ರವಿಚಂದ್ರನ್‌ ಅಭಿನಯದ ದೃಶ್ಯ-2 ಸಿನಿಮಾ ಟ್ರೈಲರ್‌ ನವೆಂಬರ್‌ 26ರಂದು ರಿಲೀಸ್‌ ಆಗಿತ್ತು. ಆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್‌ ಆಗಮಿಸಿದ್ದರು. ಕಿಚ್ಚ ನನ್ನ ಕುಟುಂಬದವರು ಎಂದು ವೇದಿಕೆ ಮೇಲೆ ರವಿಚಂದ್ರನ್‌ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸುದೀಪ್‌ ಅವರು ರವಿಚಂದ್ರನ್‌ ನನ್ನ ಅಣ್ಣ ಎಂದು ಹೇಳಿಕೊಂಡಿದ್ದರು. ಮಾಣಿಕ್ಯ ಚಿತ್ರದಲ್ಲಿ ಕೂಡ ಸುದೀಪ್‌ ಮತ್ತು ರವಿಚಂದ್ರನ್‌ ಅಪ್ಪ ಮಗನ ಪಾತ್ರದ ಮೂಲಕ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಮನದ ಮಾತು ತೆರೆದಿಟ್ಟ ಕಿಚ್ಚ

ಸ್ಯಾಂಡಲ್‌ವುಡ್‌ ನಿರ್ದೇಶಕರು ಹಾಗೂ ನಿರ್ಮಾಪಕರು ಇವೆಂಟ್‌ನಲ್ಲಿ ಭಾಗವಹಿಸಿ ವಿಕ್ರಾಂತ್‌ ರೋಣ ಟ್ರೈಲರ್‌ ಕುರಿತು ಮಾತನಾಡಿದರು. ಕಿಚ್ಚ ಸುದೀಪ್‌ ಫ್ಯಾಮಿಲಿ ಜತೆ ಇವೆಂಟ್‌ನಲ್ಲಿ ಭಾಗಿಯಾಗಿ ಮಾತನಾಡಿ ಶಿವಣ್ಣ ಸಿನಿಮಾ ʼವೇದʼ ಟೀಸರ್‌ ಲಾಂಚ್‌ ಇದ್ದರೂ ನಮ್ಮ ಟ್ರೈಲರ್‌ ಲಾಂಚ್‌ಗೆ ಭಾಗಿಯಾದದ್ದಕ್ಕೆ ಧನ್ಯವಾದ ಹೇಳಿದರು.

ರಿಷಭ್ ಮತ್ತು ರಕ್ಷಿತ್ ಇಬ್ಬರು ಕನ್ನಡ ಚಿತ್ರರಂಗದವರಿಗೆ ಪ್ರೇರಣೆ ಆಗುತ್ತಿದ್ದಾರೆ. ಎಲ್ಲಿಂದ ಬಂದಿದ್ದೀರಿ, ಹೇಗೆ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ, ಈಗ ಏನು ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ ಎಂದರು. ನಮ್ಮ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಾರೆ ಆದರೆ ಥಿಯೇಟರ್‌ಗೆ ಮಾತ್ರ ಬರುವುದಿಲ್ಲ. ಪತ್ನಿ ಪ್ರಿಯಾ ಕಥೆ ಕೇಳಿ ಅಂದಿ‌ದ್ದಕ್ಕೆ ನಾನು ಈ ಸಿನಿಮಾ ಒಪ್ಪಿಕೊಂಡೆ. ಇಲ್ಲದಿದ್ದರೆ ಈ ಸಿನಿಮಾ ಮಾಡುತ್ತಿರಲಿಲ್ಲ ಎಂದರು.

ಇದನ್ನೂ ಓದಿ | Vikrant Rona | ನಿರ್ಮಾಪಕ ಜಾಕ್ ಮಂಜುಗೆ ಅನಾರೋಗ್ಯ: ಟ್ವೀಟ್‌ನಲ್ಲಿ ಸುದೀಪ್‌ ಹೇಳಿದ್ದೇನು?

ಡಾಲಿ ಧನಂಜಯ್‌ ಕೂಡ ಇವೆಂಟ್‌ನಲ್ಲಿ ಮಾತನಾಡಿ, ʼನಾನು ಮತ್ತು ಶಿವಣ್ಣ ಅಷ್ಟೇ ಆಕ್ಟರ್ಸ್‌ ಇಲ್ಲಿ ಇರುವುದು ಇನ್ನು ಉಳಿದವರು ಎಲ್ಲಾ ನಿರ್ದೇಶಕರು ಹಾಗೂ ನಿರ್ಮಾಪಕರು ಎಂದು ಹೇಳಿದರು. ಸ್ಯಾಂಡಲ್ ವುಡ್ ಕಲಾವಿದರು ಎಲರೂ ಒಟ್ಟಿಗೆ ಸೇರಬೇಕು ಎನ್ನುವ ಮಾತು ಇತ್ತು. ಆ ಸಂದರ್ಭ ಇತ್ತೀಚೆಗೆ ನಿಜವಾಗುತ್ತಿದೆ. ಸಿನಿಮಾ ಟ್ರೈಲರ್‌ ನೋಡುವಾಗ ನನಗೂ ಇಂತಹ ಸಿನಿಮಾ ಮಾಡಬೇಕು ಎಂದೆನಿಸಿದೆʼ ಎಂದು ಖುಷಿ ಹಂಚಿಕೊಂಡರು.

ರಾ ರಾ ರಕ್ಕಮ್ಮ ಹಾಡಿಗೆ ಸ್ಟೆಪ್ಸ್

ಇವೆಂಟ್‌ ನಂತರದಲ್ಲಿ ರಾ ರಾ ರಕ್ಕಮ್ಮ ಹಾಡಿಗೆ ವಿಕ್ರಾಂತ್ ರೋಣ ಚಿತ್ರತಂಡ ಹಾಗೂ ಸ್ಯಾಂಡಲ್‌ವುಡ್ ಸ್ಟಾರ್ ನಟರು ಸಖತ್ ಸ್ಟೆಪ್ಸ್ ಹಾಕಿದರು.

ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದ್ದರೆ, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Vikrant Rona Movie: ‘ರಾ ರಾ ರಕ್ಕಮ್ಮ’ ಸಾಂಗ್‌ ರಿಲೀಸ್‌

Exit mobile version