ಬೆಂಗಳೂರು: ‘ವಿಕ್ರಾಂತ್ ರೋಣ’ ಅಬ್ಬರಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ನಟ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ವುಡ್ ಸಿನಿಮಾ ಈ ಮೂಲಕ ಹೊಸ ದಾಖಲೆ ಸೃಷ್ಟಿಮಾಡಿತ್ತು. ‘ವಿಕ್ರಾಂತ್ ರೋಣ’ ಸುಲಭವಾಗಿ ₹150 ಕೋಟಿ ಕ್ಲಬ್ಗೆ ಸೇರಿತ್ತು. ಹೀಗೆ ಚಿತ್ರಮಂದಿರದ ಬಿಗ್ ಸ್ಕ್ರೀನ್ನಲ್ಲಿ ಮೋಡಿ ಮಾಡಿದ್ದ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಒಟಿಟಿ ಪ್ಲಾಟ್‌ಫಾರಂನಲ್ಲೂ ದಾಖಲೆಯ ಮೂಲಕ ತನ್ನ ಅಬ್ಬರವನ್ನು ಮುಂದುವರಿಸಿದೆ.
‘ವಿಕ್ರಾಂತ್ ರೋಣ’ ಚಿತ್ರ ರಿಲೀಸ್ ಆಗಿ 1 ತಿಂಗಳು ತುಂಬಿದ ಹೊತ್ತಲ್ಲೇ ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಈ ಮೂಲಕ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿತ್ತು. ಇದೀಗ ಇದೇ ಸಿನಿಮಾ ಒಟಿಟಿ ಅಖಾಡದಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ಸಿಹಿಸುದ್ದಿ ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.
ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ
ಟಾಪ್ 3ರಲ್ಲಿ ಸ್ಥಾನ
ಕಿಚ್ಚ ಸುದೀಪ್ & ಅನೂಪ್ ಭಂಡಾರಿ ಕಾಂಬಿನೇಷನ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಿತ್ತು. ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಚಿತ್ರ ರಿಲೀಸ್ ಆಗಿ, ಹಾಲಿವುಡ್ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದ ಕನ್ನಡ ಸಿನಿಮಾ ಇದಾಗಿತ್ತು. ಹಾಗೇ ಕಿಚ್ಚನ ಅಭಿಮಾನಿ ಬಳಗಕ್ಕೂ ಸಿನಿಮಾ ಹಿಡಿಸಿತ್ತು. ಹೀಗಾಗಿಯೇ 1 ಸಾವಿರ ಮಿಲಿಯನ್ ನಿಮಿಷಕ್ಕೂ ಹೆಚ್ಚು ಹೊತ್ತು ಸ್ಟ್ರೀಮಿಂಗ್ ಕಂಡು, ಒಟಿಟಿ ಪ್ಲಾಟ್‌ಫಾರಂನಲ್ಲೂ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಒಟಿಟಿಯ ಟಾಪ್ 3 ಸಿನಿಮಾಗಳ ಪೈಕಿ ವಿಕ್ರಾಂತ್ ರೋಣ ಕೂಡ ಸ್ಥಾನ ಪಡೆದಿದೆ.
ಅದ್ಧೂರಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ‘ವಿಕ್ರಾಂತ್ ರೋಣ’ನಿಗೆ ಜಾಕ್ ಮಂಜು ಬಂಡವಾಳ ಹೂಡಿದ್ದರು. ಕಿಚ್ಚ ಸುದೀಪ್, ಅನೂಪ್ ಭಂಡಾರಿ, ನೀತಾ, ಮಿಲನಾ ನಾಗರಾಜ್, ಜಾಕ್ವೆಲಿನ್, ಮಧುಸೂದನ್ ರಾವ್, ರವಿಶಂಕರ್ ಗೌಡ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಡೈರೆಕ್ಷನ್ನಲ್ಲಿ ಬಂದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಜತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದ ‘ರಾ ರಾ ರಕ್ಕಮ್ಮ..’ ಸಾಂಗ್ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಇದನ್ನೂ ಓದಿ: Sudeep birthday | ಹುಟ್ಟುಹಬ್ಬದ ದಿನವೇ ಜಗ ಮೆಚ್ಚುವ ಕಾರ್ಯಕ್ಕೆ ಕಿಚ್ಚ ಸುದೀಪ್ ಸಿದ್ಧ!