Site icon Vistara News

Vikrant Rona | ನಿರ್ಮಾಪಕ ಜಾಕ್ ಮಂಜುಗೆ ಅನಾರೋಗ್ಯ: ಟ್ವೀಟ್‌ನಲ್ಲಿ ಸುದೀಪ್‌ ಹೇಳಿದ್ದೇನು?

Vikrant Rona

ಬೆಂಗಳೂರು : ʼವಿಕ್ರಾಂತ್‌ ರೋಣಾʼ (Vikrant Rona) ಚಿತ್ರದ ನಿರ್ಮಾಪಕ ಹಾಗೂ ಕಿಚ್ಚ ಸುದೀಪ್‌ ಅವರ ಆಪ್ತ ಜಾಕ್‌ ಮಂಜು ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಇವರು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದ್ದು, ಆರೋಗ್ಯ ಸಮಸ್ಯೆ ಕುರಿತಂತೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಇದೀಗ ಎಲ್ಲ ಅಂತೆ ಕಂತೆಗಳಿಗೆ ಸುದೀಪ್‌ ಅವರು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

ಟ್ವೀಟ್‌ ಮೂಲಕ ಜಾಕ್‌ ಮಂಜು ಆರೋಗ್ಯ ಕುರಿತು ವಿವರಿಸಿರುವ ಸುದೀಪ್‌ ʼನನ್ನ ಆತ್ಮೀಯ ಸ್ನೇಹಿತ ಹಾಗೂ ನನ್ನ ಸಹೋದರ ಜಾಕ್‌ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಆಗುತ್ತಿದ್ದಾರೆ. ಅವರ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆಯಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರವಾದದ್ದು ಏನು ಇಲ್ಲ. ಅವರು ಮಲಗಿರುವಾಗ ಸಿಬ್ಬಂದಿ ತೆಗೆದ ಪೋಟೋಗಳು ಲೀಕ್‌ ಆಗಿದ್ದರಿಂದ ಗಂಭೀರ ಸಮಸ್ಯೆ ಇರಬಹುದೇನೋ ಎಂಬಂತೆ ಬಿಂಬಿತವಾಗಿದೆ ಅಷ್ಟೇ. ನಿಮ್ಮೆಲ್ಲರ ಹಾರೈಕೆ, ಪ್ರಾರ್ಥನೆಗೆ ಧನ್ಯವಾದಗಳುʼ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Vikrant Rona Movie: ‘ರಾ ರಾ ರಕ್ಕಮ್ಮ’ ಸಾಂಗ್‌ ರಿಲೀಸ್‌

ರಾರಾ ರಕ್ಕಮ್ಮ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್‌

ಸುದೀಪ್‌ ಅವರು ಮುಂಬರುವ ಚಿತ್ರ ʼವಿಕ್ರಾಂತ್‌ ರೋಣಾʼ ಸಿನಿಮಾವನ್ನು ಜಾಕ್‌ ಮಂಜು ನಿರ್ಮಾಣ ಮಾಡಿದ್ದು, ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ಜುಲೈ 28ರಂದು ತೆರೆಗೆ ಬರಲಿದೆ. ವಿಕ್ರಾಂತ್‌ ರೋಣಾಗೆ ಅನೂಪ್‌ ಭಂಡಾರಿ ನಿರ್ದೇಶನ ಮಾಡಿದ್ದು, ಕನ್ನಡ, ಇಂಗ್ಲಿಷ್‌, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಜಾಕ್‌ ಮಂಜು ನಿರ್ಮಾಣದ ‘ವಿಂಡೋ ಸೀಟ್’ ಸಿನಿಮಾ ಜುಲೈ 1ಕ್ಕೆ ತೆರೆಗೆ ಬರುತ್ತಿದೆ.

ಇದನ್ನೂ ಓದಿ | Vikrant Rona Film: ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ ನಟ ಸಲ್ಮಾನ್‌ ಖಾನ್‌

Exit mobile version