Site icon Vistara News

Vikrant Rona | ವಿಕ್ರಾಂತ್‌ ರೋಣ ಎರಡನೇ ಹಾಡು ರಿಲೀಸ್‌: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ

Vikrant Rona

ಬೆಂಗಳೂರು : ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ವರ್ಲ್ಡ್‌ ವೈಡ್‌ ಸಿನಿಮಾ ವಿಕ್ರಾಂತ್‌ ರೋಣದ(Vikrant Rona ) ಎರಡನೇ ಹಾಡು ʻತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿʼ ಲಿರಿಕಲ್‌ ಸಾಂಗ್‌ ಬಿಡುಗಡೆಗೊಂಡಿದೆ. ಕನ್ನಡದಲ್ಲಿ ಬಿಡುಗಡೆಗೊಂಡಿರುವ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ.

ಮಲಯಾಳಂನಲ್ಲಿ (ಜು.3) ತೆಲುಗಿನಲ್ಲಿ (ಜು.4), ಹಿಂದಿಯಲ್ಲಿ (ಜು. 5) ಹಾಗೂ ತಮಿಳಿನಲ್ಲಿ (ಜು. 6) ಸಂಜೆ 5:02ಕ್ಕೆ ಬಿಡುಗಡೆಗೊಳ್ಳಲಿದೆ. ಈ ಹಾಡಿನ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದು, ‘ನನ್ನ ಇಷ್ಟವಾದ ಹಾಡು’ ಎಂದು ಬರೆದುಕೊಂಡಿದ್ದರು. ಈ ಕಾರಣದಿಂದಲೂ ಹಾಡಿನ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಹಾಡನ್ನು ಕೇಳಿ ಕಿಚ್ಚನ ಅಭಿಮಾನಿಗಳು ಮೆಲೋಡಿಯಸ್‌ ಸಾಂಗ್‌ ಎಂದು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಇದನ್ನೂ ಓದಿ | ‌Vikrant Rona | ರಾ ರಾ ರಕ್ಕಮ್ಮ ಹಾಡಿಗೆ ಜಪಾನ್‌ ಹುಡುಗಿಯ ಮೋಹಕ ಡ್ಯಾನ್ಸ್

ವಿಕ್ರಾಂತ್‌ ರೋಣ ಸಿನಿಮಾ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಮೊದಲು ಬಿಡುಗಡೆಗೊಂಡ ʻರಾ ರಾ ರಕ್ಕಮ್ಮʼ ಸೂಪರ್‌ ಹಿಟ್‌ ಆಗಿತ್ತು. ಈಗ ಎಲ್ಲ ಕಡೆ ಅದರದ್ದೇ ಗುಂಗು. ಅಭಿಮಾನಿಗಳು ರೀಲ್ಸ್‌ ಮಾಡಿ ಖುಷಿಪಟ್ಟರೆ, ಕೆಲವರು ಮನಸಲ್ಲೇ ಹಾಡಿ ಕುಣಿಯುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರಕ್ಕಮ್ಮ.. ಇನ್ನೂ ಕುಣಿಯುತ್ತಿರುವಾಗಲೇ ಇನ್ನೊಂದು ಹಿತವಾದ ಹಾಡನ್ನು ಬಿಡುಗಡೆ ಮಾಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ. ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Vikrant Rona | ರಾ ರಾ ರಕ್ಕಮ್ಮ ಹುಚ್ಚೆಬ್ಬಿಸಿದ ಬಳಿಕ ಈಗ ಬರ್ತಿದೆ ಹಿತವಾದ ಲಾಲಿ ಹಾಡು

Exit mobile version