Site icon Vistara News

Vikrant Rona | ಬಾಹುಬಲಿಯ ಮಾಂತ್ರಿಕನನ್ನೇ ಫಿದಾ ಮಾಡಿದ ರೋಣ!

Vikrant Rona

ಬೆಂಗಳೂರು: ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕೂಡ ಸಖತ್‌ ಆಗಿ ಮಾಡಿದ್ದು, ರೋಣನನ್ನು ನೋಡಲು ಭಾನುವಾರ (ಜು.31) ಪ್ರೇಕ್ಷಕರು ಲಗ್ಗೆ ಇಟ್ಟಿದ್ದಾರೆ.

ಜು.28ರಂದು ಸಿನಿಮಾ ಬಿಡುಗಡೆಗೊಂಡು ಸೋಷಿಯಲ್‌ ಮೀಡಿಯಾದಲ್ಲಿ ರೋಣ ಟ್ರೆಂಡ್‌ ಸೃಷ್ಟಿಯಾಗಿತ್ತು. ಚಿತ್ರಮಂದಿರಗಳ ಮುಂದೆ ಕಿಚ್ಚನ ಕಟೌಟ್‌ಗಳೇ ರಾರಾಜಿಸುತ್ತಿವೆ. ಇದೀಗ ಬಾಹುಬಲಿ ಖ್ಯಾತಿಯ, ತ್ರಿಬಲ್‌ ಆರ್‌ ಸಿನಿಮಾ ನಿರ್ದೇಶಕ ಎಸ್‌ ಎಸ್‌ ರಾಜ್‌ಮೌಳಿ ಅವರು ಕಿಚ್ಚನಿಗೆ ಶುಭ ಹಾರೈಸಿದ್ದಾರೆ.

ಟ್ವೀಟ್‌ ಮೂಲಕ ʻʻಇಂತಹ ಹೆಜ್ಜೆ ಇಡಲು ತುಂಬಾ ಧೈರ್ಯ ಬೇಕು. ಅದರ ಪ್ರತಿಫಲ ಸಿನಿಮಾ‌ ಸಕ್ಸಸ್ ಆಗಿದೆ. ಅದರಲ್ಲಿಯೂ ಗುಡ್ಡಿ ಮತ್ತು ಭಾಸ್ಕರ್‌ ಪಾತ್ರ ಚೆನ್ನಾಗಿದೆ. ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ 15 ನಿಮಿಷ ರೋಚಕವಾಗಿದೆʼʼ ಎಂದು ಟ್ವೀಟ್‌ ಮಾಡಿ ಕಿಚ್ಚನಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Vikrant rona collection | ವಿಕ್ರಾಂತ್‌ ರೋಣ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ

ಪ್ರಪಂಚದಾದ್ಯಂತ 2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕದ 400 ಸ್ಕ್ರೀನ್‌ನಲ್ಲಿ 2500 ಶೋಗಳು, ಬೆಂಗಳೂರಿನ 110 ಸ್ಕ್ರೀನ್‌ಗಳಲ್ಲಿ 1200 ಶೋಗಳು, ಆಂಧ್ರ, ತೆಲಂಗಾಣಗಳ 350 ಸ್ಕ್ರೀನ್‌ಗಳಲ್ಲಿ 1400 ಶೋಗಳು, ತಮಿಳುನಾಡಿನ 250 ಸ್ಕ್ರೀನ್‌ಗಳಲ್ಲಿ 1000 ಶೋಗಳು, ಕೇರಳದ 110 ಸ್ಕ್ರೀನ್‌ಗಳಲ್ಲಿ 600 ಶೋಗಳು, ಉತ್ತರ ಭಾರತದ 690 ಸ್ಕ್ರೀನ್‌ಗಳಲ್ಲಿ 2800 ಶೋ, ವಿದೇಶಗಳ 600 ಸ್ಕ್ರೀನ್‌ಗಳಲ್ಲಿ 1500 ಶೋ, 900 3ಡಿ ಸ್ಕ್ರೀನ್‌ ಮತ್ತು 1600 2ಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗಿತ್ತು. ಮೊದಲ ದಿನ ಈ ಚಿತ್ರ 35 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ | Vikrant Rona | ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್

Exit mobile version