ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿ ವಿನಯ್ ಗೌಡ (Vinay Gowda). ಕಿಚ್ಚ ಸುದೀಪ್ (Kichcha sudeep) ಅವರಿಗೆ ವಿನಯ್ ಕಂಡರೆ ಬಹಳ ಅಚ್ಚುಮೆಚ್ಚು. ಈಗ ಸುದೀಪ್ ಕುಟುಂಬದ ಜತೆ ವಿನಯ್ ಅವರು ಊಟ ಸವಿದಿದ್ದಾರೆ. ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜತೆ ಇರುವ ಫೋಟೊವನ್ನು ವಿನಯ್ ಹಂಚಿಕೊಂಡಿದ್ದಾರೆ.
ʻʻವಿನಮ್ರ ಕುಟುಂಬ. ಅದ್ಭುತವಾದ ಊಟ. ಡೆಸರ್ಟ್ ಅತ್ಯುತ್ತಮವಾಗಿತ್ತುʼʼ ಎಂದು ವಿನಯ್ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ಗೆ ಸಾನ್ವಿ ಅವರು ರಿಪ್ಲೈ ಮಾಡಿದ್ದು, ಹಾರ್ಟ್ ಎಮೋಜಿ ಹಾಕಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುಮಾರು 2 ವರ್ಷಗಳ ಕಾಲ ಪ್ರಸಾರವಾದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ವಿನಯ್ ಗೌಡ ಗಮನ ಸೆಳೆದಿದ್ದರು. ಬಳಿಕ ʼಉಘೇ ಉಘೇ ಮಾದೇವ’, ‘ಜೈ ಹನುಮಾನ್’ ʼಯಡಿಯೂರು ಸಿದ್ಧಲಿಂಗೇಶ್ವರ’ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ. ‘‘ಬಿಗ್‌ಬಾಸ್‌ವರೆಗೂ ಒಂದು ಜರ್ನಿ ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ’’ ಅನ್ನೋದು ಅವರ ಮಾತು. ಬಾಡಿ ಬಿಲ್ಡಿಂಗ್ ಪ್ರೀತಿಸುವ ವಿನಯ್, ಜಿಮ್‌ನಲ್ಲಿ ಮಾತ್ರವೇ ನನ್ನದು ‘ಮೀ ಟೈಮ್’ ಅನ್ನುತ್ತಾರೆ. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್ ಅವರಿಗೆ ಪತ್ನಿಯೇ ಸರ್ವಸ್ವ ಹದಿನಾಲ್ಕು ವರ್ಷದ ಮುದ್ದು ರಿಷಭ್ ಎಂದರೆ ಪಂಚಪ್ರಾಣ.
ಇದನ್ನೂ ಓದಿ: Vinaya Kulkarni : 30 ದಿನ ಧಾರವಾಡದಲ್ಲಿರಲು ಬಿಡಿ, ಕೋರ್ಟ್‌ಗೆ ವಿನಯ ಕುಲಕರ್ಣಿ ಮನವಿ, ನಾಳೆ ತೀರ್ಮಾನ ಸಾಧ್ಯತೆ
ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್ ಅವರು ಮೂರನೇ ರನ್ನರ್ ಅಪ್ ಆದರು. ವಿನಯ್ ಗೌಡ ಅವರು ಈ ಸೀಸನ್‌ನಲ್ಲಿ ಮೂಡಿಸಿರುವ ಹೆಜ್ಜೆಗುರುತು ಸಣ್ಣದೇನಲ್ಲ. ಅದು ಅಳಿಸಲಾಗದಂಥ ಛಾಪು. ಬಿಗ್‌ಬಾಸ್ ಈ ಸೀಸನ್‌ನ ಆರಂಭದಲ್ಲಿದ್ದ ಕೋಪಿಷ್ಠ ‘ವಿಲನ್’ ವಿನಯ್ ಮಾಯವಾಗಿ ಪ್ರಬುದ್ಧ, ಸ್ನೇಹಪರ, ಮೃದುಹೃದಯಿ, ಭಾವುಕ ‘ಹೀರೊ’ ವಿನಯ್ ಜನರ ಮನಸಲ್ಲಿ ಸ್ಥಾನ ಪಡೆದುಕೊಂಡಿದ್ದರು. . ಮೂರನೇ ರನ್ನರ್ ಅಪ್ (4ನೇ ಸ್ಥಾನ ಪಡೆದ) ಆಗಿದ ವಿನಯ್ ಗೌಡ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತ್ತು.