ಬೆಂಗಳೂರು: ವಿನಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ (ondu sarala prema kathe) ಫೆ.9ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಬಿಗ್ ಬಾಸ್’ ಕನ್ನಡ ಸೀಸನ್ 10ರಲ್ಲಿ ವಿನ್ನರ್ ಎನಿಸಿಕೊಂಡಿರುವ ಕಾರ್ತಿಕ್ ಮಹೇಶ್ ಈ ಚಿತ್ರದ ಕಥೆಗೆ ಟ್ವಿಸ್ಟ್ ನೀಡುವಂತಹ ಒಂದು ಪಾತ್ರವನ್ನು ಮಾಡಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ಈ ಸಿನಿಮಾದ ನಾಯಕಿಯರು. ವಿನಯ್ ರಾಜ್ಕುಮಾರ್ ಅವರು ಹೀರೊ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಕಾರ್ತಿಕ್ ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಕಾರ್ತಿಕ್ ಮಹೇಶ್ ಮಾತನಾಡಿ ʻಈಗಷ್ಟೇ ಸಿನಿಮಾ ನೋಡಿದೆ. ಮ್ಯೂಸಿಕಲ್ ಲವ್ ಸ್ಟೋರಿ ಇದು. ಸುನಿ ಸರ್ ಸಿನಿಮಾದಲ್ಲಿ ನಟಿಸಬೇಕೆಂದು ಆಸೆಯಿತ್ತು. ಆ ಕನಸು ನನಸಾಗಿದೆ. ಮೈಸೂರ್ ರಮೇಶ್ ಅವರ ಮೊದಲ ನಿರ್ಮಾಣದ ಸಿನಿಮಾ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಒಟ್ಟಾರೆಯಾಗಿ ಒಳ್ಳೆಯ ಸಿನಿಮಾ. ಎಲ್ಲರೂ ಬಂದು ಸಿನಿಮಾ ನೋಡಿ. ಸಪೋರ್ಟ್ ಮಾಡಿʼʼ ಎಂದರು.
ಇದನ್ನೂ ಓದಿ: Vinay Rajkumar: ‘ಪೆಪೆ’ ಟೀಸರ್ ಔಟ್: ಮಾಸ್ ಅವತಾರದಲ್ಲಿ ವಿನಯ್ ರಾಜ್ಕುಮಾರ್
ಸಿಂಪಲ್ ಸುನಿ ನಿರ್ದೇಶನದ ʻಒಂದು ಸರಳ ಪ್ರೇಮಕಥೆʼ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ನಾಯಕನಾಗಿ, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ , ಸ್ವಾತಿಷ್ಠ ಕೃಷ್ಣನ್ ನಾಯಕಿಯರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ರಾಮ್ ಮೂವೀಸ್ ಬ್ಯಾನರ್ ಅಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.