Site icon Vistara News

ಮಿನಿ ಟೈಗರ್ ನಟನೆಯ ಲಂಕಾಸುರ ಟೈಟಲ್ ಟ್ರ್ಯಾಕ್ ಔಟ್!

Lankasura

ಬೆಂಗಳೂರು: “ಮಿನಿ ಟೈಗರ್‌’ ಇದೀಗ “ಲಂಕಾಸುರʼ ಆಗಿ ಅಬ್ಬರಿಸುತ್ತಿದ್ದಾರೆ. ಚಿತ್ರದ ಟೈಟಲ್‌ ಟ್ರ್ಯಾಕ್‌ ಈಗ ಬಿಡುಗಡೆಗೊಂಡಿದೆ. ವಿನೋದ್‌ ಪ್ರಭಾಕರ್‌ ನಾಯಕನಾಗಿ ನಟಿಸಿದರೆ, ಅವರ ಪತ್ನಿ ನಿಶಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮಾಸ್‌ ಆಕ್ಷನ್‌ ಸಿನಿಮಾ ಇದಾಗಿದ್ದು, ಪ್ರಮೋದ್‌ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.‌ ಸೆನ್ಸಾರ್‌ ಸರ್ಟಿಫಿಕೇಟ್ ಬರುತ್ತಿದ್ದಂತೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಲಿದೆ. ಈಗಾಗಲೇ ಈ ಚಿತ್ರದ ಒಟಿಟಿ ಹಕ್ಕು ನೀಡಲಾಗಿದೆ. ಭೂಗತ ಲೋಕದ “ಲಂಕಾಸುರʼನ ಕತೆ ಶೀಘ್ರದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ | Dollu Teaser| ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಡೊಳ್ಳು ಸಿನಿಮಾ ಟೀಸರ್‌ ಔಟ್‌

ಟೈಟಲ್‌ ಟ್ರ್ಯಾಕ್‌ನ ಸಾಹಿತ್ಯ ಮತ್ತು ಹಿನ್ನೆಲೆ ಧ್ವನಿಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಸಿನಿಮಾ ಟ್ರೈಲರ್‌ ಯಾವಾಗ ಎಂದು ವಿನೋದ್‌ ಪ್ರಭಾಕರ್‌ ಅಭಿಮಾನಿಗಳು ಕೇಳುತ್ತಿದ್ದಾರೆ. ವಿನೋದ್‌ ಪ್ರಭಾಕರ್‌ ಅವರು ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೊದಲ್ಲಿ ಮೇಕಿಂಗ್‌ ವಿಡಿಯೊ ಝಲಕ್‌ ಸಿನಿರಸಿಕರನ್ನು ರಂಜಿಸಿದೆ.

ಲಂಕಾಸುರದಲ್ಲಿ ಲೂಸ್‌ ಮಾದ ಯೋಗೀಶ್‌ ನಟಿಸುತ್ತಿರುವುದು ಮತ್ತೊಂದು ವಿಶೇಷ. ಈ ಚಿತ್ರಕ್ಕೆ ಚೇತನ್‌ ಕುಮಾರ್‌ ಸಾಹಿತ್ಯ ಬರೆದಿದ್ದು, ವಿಜೇತ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ | Driver Jamuna Movie |ನಟಿ ಐಶ್ವರ್ಯಾ ರಾಜೇಶ್ ನಟನೆಯ ‘ಡ್ರೈವರ್ ಜಮುನಾ’ ಟ್ರೈಲರ್‌ ಔಟ್‌

Exit mobile version