Site icon Vistara News

Vinod Raj: ಮದುವೆಯಾಗಿದ್ದೇನೆ ಏನಿವಾಗ? ಭಯೋತ್ಪಾದನೆ ಮಾಡಿದ್ದೇನಾ?; ವಿನೋದ್‌ ರಾಜ್‌ ಖಡಕ್‌ ಪ್ರತಿಕ್ರಿಯೆ

Vinod Raj Statement about Prakash Raj mehu

ಬೆಂಗಳೂರು: ಕೆಲವು ದಿನಗಳ ಹಿಂದೆ ವಿನೋದ್‌ ರಾಜ್‌ (Vinod Raj) ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಒಬ್ಬ ಮಗನೂ ಇದ್ದಾನೆ ಎಂದು ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಮಾಧ್ಯಮದ ಮುಂದೆ ಹೇಳಿಕೆ ನೀಡಿ, ವಿನೋದ್‌ ರಾಜ್‌ ಕುಟುಂಬದ ಫೋಟೊ ಜತೆ ಸಾಕ್ಷ್ಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ವಿನೋದ್‌ ರಾಜ್‌ ಹಾಗೂ ನಟಿ ಲೀಲಾವತಿ ಈ ಬಗ್ಗೆ ಸಿನಿವುಡ್‌ (Cinewood) ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ. “ನಾನು ಮದುವೆಯಾಗಿದ್ದೇನೆ. ಭಯೋತ್ಪಾದನೆ ಮಾಡಿದ್ದೇನೆಯೇ? ಇದರಿಂದ ಅಲ್ಲೋಲ ಕಲ್ಲೋಲ ಆಗಿದೆಯಾ?” ಎಂದು ವಿನೋದ್‌ ರಾಜ್‌ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ವಿನೋದ್ ರಾಜ್‌ಗೆ ಮದುವೆಯಾಗಿದೆ. ಸೊಸೆಯೂ ಇದ್ದಾಳೆ, ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದಾನೆ ಎಂದಿದ್ದರು. ಇದಕ್ಕೆ ಪೂರಕ ಎನಿಸುವ ಹಲವು ಸಾಕ್ಷಿಗಳನ್ನೂ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಬಹಿರಂಗಪಡಿಸಿದ್ದರು. ಈ ಬಗ್ಗೆ ವಿನೋದ್‌ ರಾಜ್‌ ಆಕ್ರೋಶ ಹೊರಹಾಕಿದ್ದಾರೆ.

ಮದುವೆಯಾಗಿದ್ದೀನ್ರೀ…ಏನ್‌ ಭಯೋತ್ಪಾದನೆ ಆಗಿದೆಯಾ?

ʻʻನಾನು ಮದುವೆಯಾಗಿದ್ದೇನೆ. ಭಯೋತ್ಪಾದನೆ ಆಗಿದೆಯೇ? ಇದರಿಂದ ಅಲ್ಲೋಲ ಕಲ್ಲೋಲ ಆಗಿದೆಯಾ? ನಿಧಿ ಕಂಡು ಹಿಡಿದ ಹಾಗೆ ಆಡುತ್ತಾರಲ್ಲ? ಶ್ರೇಷ್ಠ ಮನಸ್ಸುಗಳನ್ನು ನೋಯಿಸಬೇಡಿ. ಯಾರೂ ತೊಂದರೆ ಕೊಡಬೇಡಿ. ಶ್ರೇಷ್ಠ ವ್ಯಕ್ತಿಗಳಿಗೆ ಈ ರೀತಿ ಹೇಳಿದರೆ ಉದ್ದಾರ ಆಗಲ್ಲ. ಅವತ್ತೇ ಹೇಳಿದ್ದೇನೆ, ಈ ಬಗ್ಗೆ ಮಾತನಾಡಬೇಡಿ ಎಂದಿದ್ದೇನೆ. ಯಾಕೆ? ಇಡೀ ಆರು ಕೋಟಿ ಅಭಿಮಾನಿಗಳಿಗೆ ಅರ್ಥ ಆಗಬೇಕು. ಅಣ್ಣಾವ್ರ ಅಭಿಮಾನಿಗಳಿಗೆ ಇಲ್ಲಿ ಚೆನ್ನಾಗಿ ಅರ್ಥವಾಗಿರುತ್ತದೆ. ಈ ವ್ಯಕ್ತಿ ನನಗೆ ಗೊತ್ತು, ಭಗವಂತನಿಗೆ ಗೊತ್ತು. ಇದು ಗೊತ್ತಾಗಿ ನೀನು ಏನು ಮಾಡೋಕೆ ಹೊರಟಿದ್ದೀಯಾ ಇಲ್ಲಿ? ಯಾರ ಮರ್ಯಾದೆ ಕಳೆಯುವುದಕ್ಕೆ ಹೋಗುತ್ತಿದ್ದೀಯಾ? ನೀನು ಮಾಡುತ್ತಿರುವ ಬಗ್ಗೆ ಯೋಚನೆ ಇದೆಯಾ? ಎಂದು ಗರಂ ಆಗಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Vinod Raj: ತಮಟೆ ಸದ್ದಿಗೆ ಯುವಕರೂ ನಾಚುವಂತೆ ಕುಣಿದು ಕುಪ್ಪಳಿಸಿದ ವಿನೋದ್‌ ರಾಜ್‌

ಕಷ್ಟಪಟ್ಟು ಬೆಳೆಸಿದ್ರು ನನ್ನ ತಾಯಿ!

ʻʻನನಗೂ 55 ವರ್ಷ ಆಗಿದೆ. ಸಮಾಜದಲ್ಲಿ ನನ್ನ ತಾಯಿ ನನ್ನನ್ನು ಹೇಗೆ ಬೆಳೆಸಿದರು? ಕುಗ್ರಾಮದಲ್ಲಿ ಹೇಗೆ ಸೇರಿಕೊಂಡು ಬದುಕು ನಡೆಸಿದರು? ಎಂಬುದು ನನಗೆ ಗೊತ್ತು. ಅವರು ಹಿರಿಯ ಕಲಾವಿದರು. 60ರ ದಶಕದಲ್ಲಿ ಬಂದರು. ಹೀಗಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡಿದ್ದಾರೆ, ಆಸ್ಪತ್ರೆ ಕಟ್ಟಿಸಿದ್ದಾರೆ. ಇನ್ನೊಂದು ಪಶು ಆಸ್ಪತ್ರೆ ಕಟ್ಟಿಸುತ್ತಿದ್ದಾರೆ. ಅಂಥದ್ದನ್ನು ಕೇಳುವುದಕ್ಕೆ ಬರುವುದಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Vinod Raj: ತಮಟೆ ಸದ್ದಿಗೆ ಯುವಕರೂ ನಾಚುವಂತೆ ಕುಣಿದು ಕುಪ್ಪಳಿಸಿದ ವಿನೋದ್‌ ರಾಜ್‌

ವಿನೋದ್ ರಾಜ್ ಬಗ್ಗೆ ಹೆಚ್ಚು ಕಮ್ಮಿ ಮಾತನಾಡಿದರೆ ಪರಿಣಾಮ ಏನಾಗಬಹುದು?

ʻʻನನ್ನ ತಾಯಿಯವರಿಗೆ ನಾನು ಮಾತು ಕೊಟ್ಟಿದ್ದೇನೆ. ಅವರು ಏನು ಹೇಳುತ್ತಾರೋ, ಅದರಂತೆ ನಡೆದು ಈ ಮಣ್ಣಿನಲ್ಲಿ ಹೋಗುವವನು ನಾನು ’’ಲೀಲಾವತಿ, ವಿನೋದ್ ರಾಜ್ ಬಗ್ಗೆ ಹೆಚ್ಚು ಕಮ್ಮಿ ಏನಾದರೂ ಮಾತನಾಡಿದರೆ ಅದರ ಪರಿಸ್ಥಿತಿ, ಪರಿಣಾಮ ಏನಾಗಬಹುದು ಅಂತ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ನಾವು ಸಿನಿಮಾ ಮಾಡುವುದಿಲ್ಲ. ಮಾಡುತ್ತಾ ಕೂಡ ಇಲ್ಲ. ನಾವಿಲ್ಲಿ ಜೀವನ ಮಾಡುವುದಕ್ಕೆ ಬಂದಿದ್ದೇವೆ. ಜೀವನ ಮಾಡುತ್ತಿದ್ದೇವೆ ಅಷ್ಟೇ. ಇಷ್ಟ ಇದ್ದರೆ ಹೊಗಳಿ. ಕಷ್ಟ ಆದರೆ ತೆಗಳಲೇ ಬೇಡಿ. ಇದೆಲ್ಲ ಏತಕ್ಕೆ? ಬೇಕಾಗಿದೆಯಾ ಇದೆಲ್ಲ?” ಎಂದು ಖಡಕ್‌ ಆಗಿಯೇ ಮಾತನಾಡಿದ್ದಾರೆ ವಿನೋದ್‌ ರಾಜ್.‌

ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ವಿಸ್ತಾರ ನ್ಯೂಸ್‌ನೊಂದಿಗೆ ಹೇಳಿದ್ದೇನು?

ಸಾಹಿತಿ, ಚಲನಚಿತ್ರ ನಿರ್ದೇಶಕ -ಪ್ರಕಾಶ್ ರಾಜ್ ಮೆಹೊ ಈ ಹಿಂದೆ ಮಾತನಾಡಿ, ʻʻವರನಟ ರಾಜಕುಮಾರ್ ಅವರ ಮೇಲೆ ಆಪಾದನೆ ಇರುವ ಕಾರಣ ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕುಮಾರ್ ಅವರು ಮೋಸ ಮಾಡಿದ್ದಾರೆ ಎಂದು ಆರೋಪ ಲೀಲಾವತಿ ಮಾಡಿದ್ದರು. ರವಿ ಬೆಳಗೆರೆ ಅವರಿಗೆ ಹೇಳಿ ʻರಾಜ್ ಲೀಲಾ ವಿನೋದʼ ಎಂಬ ಪುಸ್ತಕ ಬರೆಸಿದರು. ನಾನು ರಾಜಕುಮಾರ್ ಅವರಿಗೆ ಈ ವಿಚಾರ ಕೇಳಿದಾಗ ಲೀಲಾವತಿ ಅವರು ಮಹಲಿಂಗ ಭಾಗವತರ್ ಅವರನ್ನು ಮದುವೆ ಆಗಿದ್ದರು ಎಂಬ ಸುದ್ದಿಯನ್ನು ನನಗೆ ಹೇಳಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ವಿನೋದ್ ರಾಜ್ ಮದುವೆ ಆಗಿ ಹೆಂಡತಿ, ಮಗನನ್ನು ಚೆನ್ನೈನಲ್ಲಿ ಇರಿಸಿದ್ದಾರೆʼʼ ಎಂದು ಸಹ ಹೇಳಿ ಹಲವು ಸಾಕ್ಷಿಗಳನ್ನೂ ನೀಡಿ ಬಹಿರಂಗಪಡಿಸಿದ್ದರು.

Exit mobile version