ಬೆಂಗಳೂರು: ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಅತ್ಯುತ್ತಮ ಪ್ರಶಸ್ತಿಯೆಂದು ಕರೆಯಲ್ಪಡುವ ಎಮ್ಮಿ ಪ್ರಶಸ್ತಿಗೆ ((International Emmy Awards 2023) ಕಾಮಿಡಿಯನ್ ವೀರ್ ದಾಸ್ ಭಾಜನರಾಗಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಮಾತ್ರವಲ್ಲ ಭಾರತೀಯ ಟೆಲಿವಿಷನ್ ಜಗತ್ತಿನ ಸಾಧನೆಗಾಗಿ ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಏಕ್ತಾ ತನ್ನ ಗೆಲುವಿನ ಕ್ಷಣವನ್ನು ವಿವರಿಸಿ, ‘ಶಾಕಿಂಗ್ ಹಾಗೂ ಸರ್‌ಪ್ರೈಸ್ʼʼನನಗೆ. ಈ ಪ್ರಶಸ್ತಿ ನನ್ನ ಭಾರತಕ್ಕಾಗಿ. ಎಮ್ಮಿಯನ್ನು ಮನೆಗೆ ತರುತ್ತಿದ್ದೇನೆ” ಎಂದು ಹೇಳಿದರು. ಶೆಫಾಲಿ ಶಾ ಕೂಡ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ದೆಹಲಿ ಕ್ರೈಮ್ ಅಭಿನಯಕ್ಕಾಗಿ ಶೆಫಾಲಿ ಶಾ ಅತ್ಯುತ್ತಮ ನಟಿ ವಿಭಾಗದಲ್ಲಿ ಎಮ್ಮಿ ಪ್ರಶಸ್ತಿಯನ್ನು ಕಳೆದುಕೊಂಡರು. ಡೈವ್ (Dive) ಚಿತ್ರದಲ್ಲಿನ ಪಾತ್ರಕ್ಕಾಗಿ ಮೆಕ್ಸಿಕನ್ ನಟ ಕಾರ್ಲಾ ಸೋಜಾ ಅವರಿಗೆ ಪ್ರಶಸ್ತಿ ಬಂದಿದೆ.
ಡ್ಯಾನಿಶ್ ಪ್ರಾಜೆಕ್ಟ್ ದಿ ಡ್ರೀಮರ್ – ಬಿಕಮಿಂಗ್ ಕರೆನ್ ಬ್ಲಿಕ್ಸೆನ್‌ನಲ್ಲಿ ಕೋನಿ ನೀಲ್ಸನ್ ಮತ್ತು ಐ ಹೇಟ್ ಸುಜಿ ಟೂನಲ್ಲಿ ಯುಕೆಯ ಬಿಲ್ಲಿ ಪೈಪರ್ ಈ ವಿಭಾಗದಲ್ಲಿ ಇತರ ನಾಮನಿರ್ದೇಶಿತರಾಗಿದ್ದರು. 51 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳನ್ನು ನ್ಯೂಯಾರ್ಕ್‌ನಲ್ಲಿ ನಡೆಸಲಾಯಿತು. ಜಿಮ್ ಸರ್ಬ್ ಅವರು ಸಹ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಲಿಲ್ಲ.
ಇದನ್ನೂ ಓದಿ; Actor MohanLal: ಮೋಹನ್ ಲಾಲ್ ಸಿನಿಮಾಗೆ ಕನ್ನಡದ ನಂದಕಿಶೋರ್ ಆ್ಯಕ್ಷನ್ ಕಟ್; ಏಕ್ತಾ ಕಪೂರ್ ಸಹ ನಿರ್ಮಾಣ!
We have a Tie! The International Emmy for Comedy goes to "Vir Das: Landing” produced by Weirdass Comedy / Rotten Science / Netflix#iemmyWIN pic.twitter.com/XxJnWObM1y
— International Emmy Awards (@iemmys) November 21, 2023
ವೀರ್ ದಾಸ್ ಭಾರತದ ಜನಪ್ರಿಯ ಕಾಮಿಡಿಯನ್ ಹಲವು ದೇಶಗಳಲ್ಲಿ ಕಾಮಿಡಿ ಶೋಗಳನ್ನು ನೀಡಿದ್ದಾರೆ. ಅವರ ಕೆಲವು ಶೋಗಳು ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ವಿದೇಶಗಳಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ವೀರ್ ದಾಸ್ ವಿರುದ್ಧ ಆರೋಪ ಮಾಡಲಾಗಿತ್ತು. ದೂರು ಸಹ ದಾಖಲಾಗಿತ್ತು. ಭಾರತದ ವಿರುದ್ಧ ವಿದೇಶದಲ್ಲಿ ಅಪಪ್ರಚಾರ, ಹಿಂದೂ ಧರ್ಮದ ಹಾಗೂ ಹಿಂದೂ ಮಹಿಳೆಯರ ವಿರುದ್ಧ ಈ ಶೋದಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈಗ ಅವರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಲಭಿಸಿದೆ.