ಬೆಂಗಳೂರು: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು (Taapsee Pannu) ತಮ್ಮ ನಟನೆಯಿಂದ ಸಾಕಷ್ಟು ಜನರ ಮನಸ್ಸನ್ನು ಸೆಳೆದಿದ್ದಾರೆ. ಅವರು ಅಭಿನಯಿಸಿದ ‘ತಪ್ಪಡ್’ ಸಿನಿಮಾವಂತೂ ಎಲ್ಲರ ಮನಮುಟ್ಟುವ ಹಾಗೇ ಇದೆ. ನಟಿ ತಾಪ್ಸಿ ಪನ್ನು ಸಿನಿಮಾಕ್ಕಿಂತ ವಿವಾದದ ಹೇಳಿಕೆ ನೀಡುವ ಮೂಲಕ ಟ್ರೋಲ್ ಆಗಿದ್ದೇ ಹೆಚ್ಚು. ಇನ್ನು ಸಿನಿಮಾ ನಟಿಯರು ಮದುವೆ ವಿಚಾರ ಬಂದರೆ ಸಾಕಷ್ಟು ಸುದ್ದಿ ಮಾಡುತ್ತಾರೆ. ಬಾಲಿವುಡ್ ಖ್ಯಾತ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಗುಟ್ಟಾಗಿ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದರು. ಯಾವುದೇ ರೀತಿಯಲ್ಲಿ ಮದುವೆಯ ಒಂದೇ ಒಂದು ಚಿತ್ರವೂ ಲೀಕ್ ಆಗದಂತೆ ನೋಡಿಕೊಂಡಿದ್ದರು. ಇದೀಗ ಅಭಿಮಾನಿಗಳು ಖುಷಿ ಪಡುವ ಸಂಗತಿಯೊಂದು ನಡೆದಿದೆ.. ತನ್ನ ಮದುವೆಯ ಪೋಟೋವನ್ನು ಎಲ್ಲಿಯೂ ಲೀಕ್ ಮಾಡದೇ ನಟಿ ಕಾಪಿಟ್ಟುಕೊಂಡಿದ್ದರು. ಇಷ್ಟೆಲ್ಲಾ ಎಚ್ಚರಿಕೆ ವಹಿಸಿದ್ದರೂ ನಟಿ ತಾಪ್ಸಿ ಪನ್ನು ಮದುವೆ ದಿನದಂದು ವೇದಿಕೆ ಏರುತ್ತಿರುವ ವಿಡಿಯೋ ಲೀಕ್ (Viral News)ಆಗಿದ್ದು ಸದ್ಯ ವೈರಲ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಬ್ಯಾಡ್ಮಿಂಟನ್ ಕೋಚ್ ಮಥಾಯಸ್ ಬೋ ಕೊರಳಿಗೆ ಹಾರ ಹಾಕಿದ ತಾಪ್ಸಿ!
ತಾಪ್ಸಿ ಪನ್ನು ಅವರು ತಮ್ಮ ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಕೋಚ್ ಮಥಾಯಸ್ ಬೋ ಜೊತೆ ಉದಯಪುರದಲ್ಲಿ ಹತ್ತು ದಿನಗಳ ಹಿಂದೆ ಹಸೆಮಣೆ ಏರಿದ್ದರು. ಮಥಾಯಸ್ ಬೋ ಅವರನ್ನು ವಿವಾಹವಾಗಿರುವ ತಾಪ್ಸಿ ವಿವಾಹದ ಯಾವುದೇ ವಿಡಿಯೋ ಅಥವಾ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮದುವೆ ಬಗ್ಗೆಯೂ ಅವರು ಎಲ್ಲೂ ಯಾವ ವಿಚಾರವನ್ನೂ ಹಂಚಿಕೊಂಡಿರಲಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತ ವೇದಿಕೆ ಏರಿ ಮಥಾಯಸ್ ಅವರಿಗೆ ಹಾರ ಹಾಕುವ ವಿಡಿಯೋ ಹೊರಬಿದ್ದಿದೆ.
Taapsee Pannu's Simple yet "FAIRYTALE" wedding video with bae Mathias Boe 🥰🫶❤️#TaapseePannu #MathiasBoe #Taapsee #bollywoodactress pic.twitter.com/EKz96Y6TMQ
— cine_sdn (@sdn789_) April 3, 2024
ಕೆಂಪು ಉಡುಗೆ ಹಾಗೂ ಚಿನ್ನಾಭರಣಗಳಲ್ಲಿ ಕಣ್ಮನ ಸೆಳೆದ ನಟಿ
ಸಿಖ್ ಧರ್ಮಕ್ಕೆ ಸೇರಿದ ತಾಪ್ಸಿ ಪನ್ನು ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ಮಥಾಯಸ್ ಇಬ್ಬರ ಪದ್ಧತಿಯಂತೆ ಮದುವೆ ನಡೆದಿದೆ. ಮಾರ್ಚ್ 20ರಿಂದ ಆರಂಭಗೊಂಡ ಮದುವೆ ಸಂಭ್ರಮ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡುವುದರೊಂದಿಗೆ ಅಂತ್ಯಗೊಂಡಿದೆ. ಆಕರ್ಷಕ ಕೆಂಪು ಉಡುಗೆ ಹಾಗೂ ಚಿನ್ನಾಭರಣಗಳಲ್ಲಿ ತಾಪ್ಸಿ ಕಣ್ಮನ ಸೆಳೆದರೆ ಶೇರ್ವಾನಿ ಮತ್ತು ಪಗ್ಡಿ ಧರಿಸಿದ್ದ ಮಥಾಯಸ್ ಮದುಮಗನ ದಿರಿಸಿನಲ್ಲಿ ಮಿಂಚಿದ್ದಾರೆ. ತಾಪ್ಸಿ ಸಹೋದರಿ ಶಗುನ್ ಪನ್ನು ಹಾಗೂ ತನ್ನ ಗೆಳತಿಯರ ಗ್ಯಾಂಗ್ ನೊಂದಿಗೆ ಮಂಟಪದತ್ತ ನಡೆದು ಬರುತ್ತಿರುವ ದೃಶ್ಯಗಳು ಸದ್ಯ ವೈರಲ್ ಆಗಿವೆ.
ಇದನ್ನೂ ಓದಿ:Priyanka Chopra: ಸಹೋದರ ಸಿದ್ಧಾರ್ಥ ಎಂಗೇಜ್‌ಮೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕ ದಂಪತಿ
ಜಗಜಿತ್ ಸಿಂಗ್ ಮತ್ತು ಚಿತ್ರಾ ಸಿಂಗ್ ಹಾಡಿದ “ ಕೊಥೆ ತೇ ಆ ಮಹಿಯಾ” ಹಾಡಿನೊಂದಿಗೆ ದಂಪತಿಗಳಿಬ್ಬರು ನಗುತ್ತಾ ನೃತ್ಯ ಮಾಡುತ್ತಾ, ಪರಸ್ಪರ ತಬ್ಬಿಕೊಳ್ಳುತ್ತಾ, ಚುಂಬಿಸಿದ ವಿಡಿಯೋ ತುಣುಕೊಂದು ಹರಿದಾಡುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮದುವೆಯ ವಿಡಿಯೋವನ್ನು ಕಣ್ತುಂಬಿಸಿಕೊಂಡಿದ್ದಾರೆ. ಹಾಗೇ ಹೊಸ ಬದುಕಿಗೆ ಕಾಲಿಟ್ಟಿರುವ ನಟಿಗೆ ಶುಭ ಹಾರೈಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ