Site icon Vistara News

Rashmika Mandanna | ರಶ್ಮಿಕಾ ಜತೆ ಡೇಟಿಂಗ್‌ ಹೋಗಬೇಕು ಎಂದ ನಟ ವಿಶಾಲ್‌!

Rashmika Mandanna

ಬೆಂಗಳೂರು : ರಶ್ಮಿಕಾ ಮಂದಣ್ಣ (Rashmika Mandanna ) ಜತೆ ಸೌತ್‌ ನಟ ವಿಶಾಲ್‌ ಡೇಟಿಂಗ್‌ ಹೋಗುವ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ವಿಶಾಲ್‌ ತಮ್ಮ ʻʻಲಾಠಿʼʼಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ʻಲಾಠಿ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಚಿತ್ರದ ಪ್ರಮೋಷನ್ ವೇಳೆ ಸಂದರ್ಶನದಲ್ಲಿ ನಟಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಈ ಹಿಂದೆ ಅಷ್ಟೇ ಟಾಲಿವುಡ್‌ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ನನ್ನ ಕ್ರಶ್‌ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ | Rashmika Mandanna | ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ: ಬ್ಯಾನ್‌ ಬಗ್ಗೆ ರಶ್ಮಿಕಾ ಮಂದಣ್ಣ ರಿಯಾಕ್ಷನ್‌!

ʻಅನ್‌ಸ್ಟಾಪೆಬಲ್‌ʼ ಎನ್ನುವ ಶೋ ಅನ್ನು ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿದ್ದರು. ಈ ಶೋನಲ್ಲಿ ಮೊದಲ ಸಂಚಿಕೆಯಲ್ಲಿ ತೆಲುಗು ನಟ ವಿಶ್ವಕ್‌ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ನಂದಮೂರಿ ಬಾಲಕೃಷ್ಣರಿಗೆ ನಿಮ್ಮ ಕ್ರಶ್‌ ಯಾರೆಂದು ಕೇಳಿದ್ದಾರೆ. ಉತ್ತರಿಸಿದ ಬಾಲಕೃಷ್ಣ ಅವರು ರಶ್ಮಿಕಾ ಎಂದು ಹೇಳಿದ್ದಾರೆ. ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಮಂದಣ್ಣ ಅವರನ್ನು ಸ್ವತಃ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟವಾಗಿದೆ.

ಇದನ್ನೂ ಓದಿ | Rashmika Mandanna| ಹ್ಯಾಕ್​ ಆಯ್ತಾ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಅಕೌಂಟ್​?-ಉಲ್ಟಾ ಅಕ್ಷರಗಳ ಗುಟ್ಟೇನು?

Exit mobile version