ಬೆಂಗಳೂರು: ಸೆಪ್ಟೆಂಬರ್ 18ರಂದು ಸಾಹಸಸಿಂಹ ವಿಷ್ಣುವರ್ಧನ್ (Vishnuvardhan Birthday) ಅವರ ಜನುಮದಿನ. ಈಗಾಗಲೇ ವಿಷ್ಣು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ನಟನ ಫೋಟೊ ಜತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ (kichcha sudeepa) ಸಾಥ್ ಕೊಟ್ಟಿದ್ದಾರೆ. ಹೌದು, ವಿಷ್ಣು ಅವರ ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿ ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಇದನ್ನು ಡಿಪಿಗೆ ಹಾಕಿಕೊಂಡು ವಿಷ್ಣು ಫ್ಯಾನ್ಸ್ ಖುಷ್ ಆಗಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್ ಜತೆಗೆ ʻʻನಮ್ಮ ಪ್ರೀತಿಯ ವಿಷ್ಣು ಸರ್ ಅವರ ಡಿಪಿ (ಸಿಡಿಪಿ) ಬಿಡುಗಡೆ ಮಾಡಲು ತುಂಬಾ ಗೌರವವಾಗಿದೆ. ಅವರ ಎಲ್ಲಾ ಅಭಿಮಾನಿಗಳಿಗೆ ಉತ್ತಮ ದಿನ ಇವತ್ತುʼʼ ಎಂದು ಬರೆದುಕೊಂಡಿದ್ದಾರೆ. ವಿಷ್ಣುವರ್ಧನ್ ಮಹಾರಾಜನಂತೆ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೊದಲ್ಲಿ ʻʻಹ್ಯಾಪಿ ಬರ್ತಡೇ ಯಜಮಾನ್ರೆʼʼ ಎಂಬುದು ಪ್ರಮುಖ ಹೈಲೈಟ್.
ನಟ ಕಿಚ್ಚ ಸುದೀಪ್ ಕೂಡ ವಿಷ್ಣು ಅವರ ಅಭಿಮಾನಿ. ‘ವಿಷ್ಣುವರ್ಧನ್’ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ಇದಲ್ಲದೆ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನಿಮಾ ‘ಕೋಟಿಗೊಬ್ಬ’ ಸಿನಿಮಾ ಮಾಡಿದ್ದರು. ಕೋಟಿಗೊಬ್ಬ 2 ಮತ್ತು ಕೋಟಿಗೊಬ್ಬ 3 ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು.
ಇದನ್ನೂ ಓದಿ: Sandalwood Stars Birthday: ಇಂದು ಮೂವರು ಸ್ಯಾಂಡಲ್‌ವುಡ್ ಸ್ಟಾರ್‌ಗಳ ಹುಟ್ಟಿದ ದಿನ!
Extremely honored to release the CDP of our beloved Vishnu sir.
— Kichcha Sudeepa (@KicchaSudeep) September 17, 2023
♥️♥️♥️
A great day to alllll his fans. pic.twitter.com/e9RgOs1iJX
1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟ ಚಿತ್ರ. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಹಬ್ಬ’, ‘ಜೀವನದಿ’, ‘ಯಜಮಾನ’, ‘ಸಿಂಹಾದ್ರಿಯ ಸಿಂಹ’, ‘ಆಪ್ತಮಿತ್ರ’ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಡಾ. ವಿಷ್ಣುವರ್ಧನ್ ನೀಡಿದರು. ಡಾ. ವಿಷ್ಣುವರ್ಧನ್ ಅವರಿಗೆ ರಾಜ್ಯ ಪ್ರಶಸ್ತಿ, ಡಾ. ರಾಜ್‌ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿಗಳು ಲಭಿಸಿವೆ.