Site icon Vistara News

Vishnuvardhan: ಸ್ಮಾರಕ ಸರ್ಕಾರದ ಯೋಜನೆ, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು: ನಟ ಅನಿರುದ್ಧ

CM Bommai inaugurates Vishnuvardhan Memorial: Fans demand Karnataka Ratna Award

ಮೈಸೂರು: ವಿಷ್ಣುವರ್ಧನ್‌ (Vishnuvardhan) ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಮೈಸೂರಿನ ಎಚ್‌.ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸ್ಮಾರಕವನ್ನು ಜನವರಿ 29ರಂದು (ಭಾನುವಾರ) ಉದ್ಘಾಟಿಸಲಾಗುತ್ತದೆ. ಸ್ಮಾರಕ ಸರ್ಕಾರದ ಯೋಜನೆಯಾಗಿದ್ದು, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು ಎಂದು ನಟ ಅನಿರುದ್ಧ್ ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

ವಿಸ್ತಾರ ನ್ಯೂಸ್‌ಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ನಟ ಅನುರುದ್ಧ ಮಾತನಾಡಿ ʻʻಸ್ಮಾರಕ ಸರ್ಕಾರದ ಯೋಜನೆಯಾಗಿದ್ದು, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು.ಮುಂದಿ‌ನ ದಿನಗಳಲ್ಲಿ ಎಂಟ್ರಿ ಟಿಕೆಟ್ ಜಾರಿಯಾಗಲಿದೆ. ವಿಷ್ಣುವರ್ಧನ್ ಪ್ರತಿಷ್ಠಾನದ ಮೂಲಕ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿಷ್ಠಾನಕ್ಕೆ ಮುಖ್ಯಮಂತ್ರಿ ಅಧ್ಯಕ್ಷರು. ನಾನು ಮತ್ತು ಭಾರತಿ ವಿಷ್ಣುವರ್ಧನ್ ಸದಸ್ಯರಾಗಿದ್ದೇವೆ. ಸ್ಮಾರಕ ನಿರ್ಮಾಣವಾಗಿರುವುದಕ್ಕೆ ಖುಷಿ ಪಡುತ್ತೇವೆ.‌ ಸರ್ಕಾರಕ್ಕೆ ತಲೆ ಬಾಗಿ ಕೃತಜ್ಞತೆ ಸಲ್ಲಿಸುತ್ತೇನೆ.‌ 13 ವರ್ಷ ಅಭಿಮಾನಿಗಳು ಮನಸ್ಸಿನಲ್ಲಿ ವಿಷ್ಣುವರ್ಧನ್ ಅವರನ್ನು ಇರಿಸಿಕೊಂಡಿದ್ದಾರೆ. ಈ ರೀತಿಯ ಅಭಿಮಾನವನ್ನು ನಾನು ಎಲ್ಲೂ ನೋಡಿಲ್ಲʼʼಎಂದರು.

ಇದನ್ನೂ ಓದಿ: Vishnuvardhan Memorial : ಬೆಂಗಳೂರಿನಿಂದ ಮೈಸೂರಿಗೆ ವಿಷ್ಣುವರ್ಧನ್‌ ಅಭಿಮಾನಿಗಳ ಪ್ರಯಾಣ ಆರಂಭ

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಸ್ಮಾರಕದ ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ನಾನಾ ಕಾರಣಗಳಿಂದ ನನೆಗುದಿಯಲ್ಲಿತ್ತು. ಕೊನೆಗೂ ಮೈಸೂರಿನಲ್ಲಿ ಅನಾವರಣಗೊಳ್ಳುತ್ತಿದೆ. ದಾದಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. (Vishnuvardhan Memorial in Mysore) ಮಧ್ಯಾಹ್ನ 12.30ಕ್ಕೆ ಉದ್ಘಾಟನೆಯಾಗಲಿದೆ. ವಿಷ್ಣುವರ್ಧನ್‌ ಪತ್ನಿ ಭಾರತಿ ಮತ್ತು ಕುಟುಂಬದವರು ಭಾಗವಹಿಸಲಿದ್ದಾರೆ. ವಿಷ್ಣುವರ್ಧನ್‌ ಅವರ ಕಟೌಟ್‌ಗಳನ್ನು ಹಾಕಲಾಗಿದ್ದು, ಭಾನುವಾರ ಪ್ರತಿಮೆಯೂ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: Vishnuvardhan : ಸಾಹಸಸಿಂಹ ವಿಷ್ಣುವರ್ಧನ್‌ ಸ್ಮಾರಕ ಉದ್ಘಾಟನೆ ಇಂದು, ಏನೇನಿವೆ ಅಲ್ಲಿ?

Exit mobile version