Site icon Vistara News

The Vaccine War: ‘ಬೈ ಒನ್‌ ಗೆಟ್‌ ಒನ್‌ ಫ್ರೀ’; ಸಿನಿಪ್ರೇಮಿಗಳೇ ಇದು ವಿವೇಕ್ ಅಗ್ನಿಹೋತ್ರಿ ಸ್ಪೆಷಲ್‌ ಗಿಫ್ಟ್‌!

Vivek Agnihotri

ಬೆಂಗಳೂರು: ವಿವೇಕ್ ಅಗ್ನಿಹೋತ್ರಿ (The Vaccine War) ಅವರ ‘ದಿ ವ್ಯಾಕ್ಸಿನ್ ವಾರ್‘ ಸೆಪ್ಟೆಂಬರ್ 28ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ 3.25 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ವಿಶೇಷ ಗಿಫ್ಟ್‌ ನೀಡಿದ್ದಾರೆ. ಒಂದು ಟಿಕೆಟ್‌ ಪಡೆದರೆ ಇನ್ನೊಂದು ಟಿಕೆಟ್‌ ಫ್ರೀ ಎಂಬ ಆಫರ್‌ ಕೊಟ್ಟಿದ್ದಾರೆ ವಿವೇಕ್ ಅಗ್ನಿಹೋತ್ರಿ.

ವಿವೇಕ್ ಅಗ್ನಿಹೋತ್ರಿ ತಮ್ಮ ಇನ್‌ಸ್ಟಾದಲ್ಲಿ ಈ ಬಗ್ಗೆ ಘೋಷಿಸಿದ್ದಾರೆ. ʻʻಸ್ನೇಹಿತರೇ, ಇಂದು (ಅ.1) ಭಾನುವಾರ ಮತ್ತು ಗಾಂಧಿ ಜಯಂತಿ ರಜೆಯ ಸಂದರ್ಭದಲ್ಲಿ, ಚಿತ್ರಮಂದಿರಕ್ಕೆ ಭೇಟಿ ನೀಡಿ. ಉಚಿತ ಟಿಕೆಟ್ ಪಡೆಯಿರಿ. ಈ ಉಚಿತ ಟಿಕೆಟ್‌ಅನ್ನು ಮನೆಗೆಲಸದವರಿಗೋ ಅಥವಾ ಮಹಿಳೆಯರಿಗೋ ನೀಡಿ. ಸಿನಿಮಾ ನೋಡಿ ಆನಂದಿಸಿʼʼ ಎಂದು ಬರೆದುಕೊಂಡಿದ್ದಾರೆ. ಈ ರೀತಿ ಆಫರ್ ನೀಡಿರುವುದು ವಿವೇಕ್ ಅಗ್ನಿಹೋತ್ರಿ ಮಾತ್ರವಲ್ಲ. ಈ ಹಿಂದೆ ಅಟ್ಲೀ ನಿರ್ದೇಶನದ ‘ಜವಾನ್’ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂಪಾಯಿಗಳನ್ನು ದಾಟಿದ ನಂತರ ಶಾರುಖ್ ಖಾನ್ ಸಹ ಇದೇ ತರಹ ಆಫರ್ ಘೋಷಿಸಿದ್ದರು. .

ಟ್ರೇಡ್‌ ವಿಶ್ಲೇಷಕ ತರಣ್‌ ಆದರ್ಶ್‌ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವ್ಯಾಕ್ಸಿನ್ ವಾರ್ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ಇದು ಪ್ರಬುದ್ಧ ಮತ್ತು ಸ್ಫೂರ್ತಿದಾಯಕ ಕಥೆ. ಇಲ್ಲಿನ ವೀರರು ನಮ್ಮ ವಿಜ್ಞಾನಿಗಳು ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ತಮ್ಮ ತ್ಯಾಗ ಮತ್ತು ಶಕ್ತಿಯನ್ನು 2 ಗಂಟೆ 40 ನಿಮಿಷಗಳಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಈ ಸಿನಿಮಾ ವೀಕ್ಷಿಸಲು ಮರೆಯಬೇಡಿ” ಎಂದು ಹೇಳಿಕೊಂಡಿದ್ದರು. ಲಸಿಕೆಗಳ ಅಭಿವೃದ್ಧಿಯ ಹಿಂದೆ ಭಾರತೀಯ ವಿಜ್ಞಾನಿಗಳ ಹೋರಾಟದ ಕುರಿತು ‘ದಿ ವ್ಯಾಕ್ಸಿನ್ ವಾರ್’ ಕಥೆ ಇದೆ.‌ ಸುಮಾರು 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: The Vaccine War Box Office: ಮೊದಲ ದಿನ ಕೇವಲ 1 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಗ್ನಿಹೋತ್ರಿ ಸಿನಿಮಾ!

ಪಲ್ಲವಿ ಜೋಶಿ ಮತ್ತು ಐ ಆ್ಯಮ್‌ ಬುದ್ಧ ನಿರ್ಮಿಸಿದ ಈ ಸಿನಿಮಾ ಸೆಪ್ಟೆಂಬರ್ 28 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಹಿಳಾ ವಿಜ್ಞಾನಿಗಳು ಕೋವ್ಯಾಕ್ಸಿನ್‌ಗೋಸ್ಕರ ಹೇಗೆಲ್ಲ ಶ್ರಮಿಸುತ್ತಾರೆ ಎಂಬ ಬಗ್ಗೆ ಸಿನಿಮಾವಿದೆ.

Exit mobile version