Site icon Vistara News

Vivek Agnihotri: ಶಾರುಖ್‌ಗೆ ಹೇಳಿ ಟಿಕೆಟ್‌ ಕೊಡಿಸಿ ಪ್ಲೀಸ್‌; ವ್ಯಂಗ್ಯವಾಡಿದ ಮೂರೇ ದಿನಕ್ಕೆ ವಿವೇಕ್ ಅಗ್ನಿಹೋತ್ರಿ ವರಸೆ ಚೇಂಜ್‌!

Vivek Agnihotri Shah Rukh Khan

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಸೆಪ್ಟೆಂಬರ್‌ 2ರಂದು ಟ್ವಿಟರ್‌ನಲ್ಲಿ ‘ಏನು ಬೇಕಾದರೂ ಕೇಳಿ’ (ask me anything) ಸೆಷನ್ ನಡೆಸಿದ್ದರು. ಇಲ್ಲಿಯೂ ಜವಾನ್ ಸಿನಿಮಾ ಪ್ರಸ್ತಾಪವಾಗಿದೆ. ಅಷ್ಟೇ ಅಲ್ಲದೇ ಮುಂದಿನ ಚಿತ್ರ ದಿ ವ್ಯಾಕ್ಸಿನ್ ವಾರ್ ಬಗ್ಗೆ ವಿವರಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವರ ಚಿತ್ರಗಳ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ. ಜವಾನ್ ಟ್ರೈಲರ್ ಬಗ್ಗೆ ನಿಮ್ಮ ಆಲೋಚನೆಗಳು ಎಂಬ ಪ್ರಶ್ನೆಗೆ ʻಅದ್ಭುತ, ಬ್ಲಾಕ್‌ ಬಸ್ಟರ್ʼʼಎಂಬ ಉತ್ತರ ನೀಡಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಮತ್ತೆ ಜವಾನ್ ಬಗ್ಗೆಯೇ ಪ್ರಶ್ನೆ ಕೇಳಿದ ಮತ್ತೊಬ್ಬರು ವಿವೇಕ್‌ಗೆ ಜವಾನ್‌ ನೋಡುತ್ತಾರೋ ಇಲ್ಲವೋ ಎಂದು ಕೇಳಿದ್ದಾರೆ. ಇದಕ್ಕೆ ತಾವು ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿರುವುದಾಗಿ‌ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕರು ತಿಳಿಸಿದ್ದಾರೆ. “ಎಫ್‌ಡಿಎಫ್ಎಸ್. ಎಫ್‌ಡಿಎಫ್ಎಸ್. ಎಫ್‌ಡಿಎಫ್ಎಸ್ (ಮೊದಲ ದಿನ, ಮೊದಲ ಪ್ರದರ್ಶನ). ಆದರೆ ಟಿಕೆಟ್ ಎಲ್ಲಿದೆ. ದಯವಿಟ್ಟು ಶಾರುಖ್ ಖಾನ್ ಅವರನ್ನು ಕೇಳಿ ನನಗೆ ಟಿಕೆಟ್ ಕೊಡಿಸಿ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಜವಾನ್ ಮತ್ತು ಪ್ರಭಾಸ್ ಅವರ ಸಲಾರ್ ಸಿನಿಮಾವನ್ನು ಅಪಹಾಸ್ಯ ಮಾಡುವ ಮೀಮ್ ವಿವೇಕ್ ಹಂಚಿಕೊಂಡಿದ್ದರು. ಇದಾದ ಮೂರು ದಿನಗಳಲ್ಲಿಯೇ ಜವಾನ್ ಟ್ರೈಲರ್ ಮತ್ತು ಜವಾನ್ ಸಿನಿಮಾ ನೋಡುವ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Vivek Agnihotri: ಗಂಡಸೇ ಆಗಿದ್ದರೆ ʻಮಣಿಪುರ ಫೈಲ್ಸ್ʼ ಸಿನಿಮಾ ಮಾಡಿ; ವಿವೇಕ್​ ಅಗ್ನಿಹೋತ್ರಿಗೆ ಚಾಲೆಂಜ್‌!

ಇದಲ್ಲದೇ, ವಿವೇಕ್ ತಮ್ಮ ಚಿತ್ರ ʻದಿ ವ್ಯಾಕ್ಸಿನ್ ವಾರ್ʼ, ಪ್ರಚಾರಗಳ ಬಗ್ಗೆ ಚಿತ್ರದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಇದರ ಮಧ್ಯೆ ಹಲವರು ಅವರ ಸಿನಿಮಾಗಳನ್ನು ಟೀಕಿಸಿದ್ದಾರೆ. ಜತೆಗೆ ಅವರ ಚಲನಚಿತ್ರಗಳನ್ನು ಪ್ರೋಪಗಾಂಡ ಎಂದು ಕರೆದಿದ್ದಾರೆ. “ನೀವು ಸಹ ಪ್ರೊಪಗಂಡ ವ್ಯಾಕ್ಸಿನ್‌ನ ಭಾಗವಾಗಿದ್ದೀರಿ. ಇದು ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ. ಅದನ್ನು ವೀಕ್ಷಿಸಿ). ಇದಕ್ಕಾಗಿ ನಿಮ್ಮ ತಾಯಿ ನಿಮ್ಮನ್ನು ಪ್ರೀತಿಸುತ್ತಾರೆ” ಎಂದು ತಿರುಗೇಟು ಕೊಟ್ಟಿದ್ದಾರೆ.

ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಲ್ಲ

‘ನೀವು ಸರ್ಕಾರದ ಪರ ಚಲನಚಿತ್ರಗಳನ್ನು ಏಕೆ ಮಾಡುತ್ತಿದ್ದೀರಿ..? ಹಣಕ್ಕಾಗಿ ಅಥವಾ ಮುಂದಿನ ದಿನಗಳಲ್ಲಿ ರಾಜ್ಯಸಭಾ ಸ್ಥಾನಕ್ಕಾಗಿ’ ಎಂದು ಪ್ರಶ್ನಿಸಿದ ಮತ್ತೊಬ್ಬನಿಗೂ ಉತ್ತರಿಸಿದರು. ನನ್ನ ಮಹತ್ವಾಕಾಂಕ್ಷೆಯು ರಾಜ್ಯಸಭೆಗೆ ಹೊಂದಿಕೊಳ್ಳುವಷ್ಟು ಚಿಕ್ಕದಲ್ಲ. ನನಗಾಗಿ ಏನಾದರೂ ದೊಡ್ಡದಾಗಿ ಯೋಚಿಸಿ” ಎಂದು ತಾವು ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಲ್ಲ ಎಂದಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ ಎಂಬ ಬಹುನಿರೀಕ್ಷಿತ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಲನಚಿತ್ರದ ಟೀಸರ್ ಸ್ವಾತಂತ್ರ್ಯೋತ್ಸವದಂದು ಬಿಡುಗಡೆಯಾಗಿತ್ತು. ಇದೀಗ ಸಿನಿಮಾ ಸೆಪ್ಟೆಂಬರ್​ 28ರಂದು ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿದೆ. ಅದೇ ದಿನ ಪ್ರಶಾಂತ್​ ನೀಲ್​ ಹಾಗೂ ಪ್ರಭಾಸ್ ಕಾಂಬಿನೇಷನ್​ನ ಸಲಾರ್ ಸಿನಿಮಾವೂ ಬಿಡುಗಡೆಯಾಗಲಿದೆ. ಹೀಗಾಗಿ ಸಲಾರ್ ಜತೆ ದಿ ವ್ಯಾಕ್ಸಿನ್​ ವಾರ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Vivek Agnihotri: ನನ್ನ ಬದುಕು ಶೋಚನೀಯ, ಮಗಳ ಫೋಟೊವನ್ನೂ ಕದ್ದರು: ವಿವೇಕ್ ಅಗ್ನಿಹೋತ್ರಿ

ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರ್​ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

Exit mobile version