ಬೆಂಗಳೂರು: ‘ಕಾಂತಾರ’ದಂತಹ ಚಿತ್ರಗಳಿಂದ ಬಾಲಿವುಡ್ ಸಂಪೂರ್ಣವಾಗಿ ನಾಶವಾಗುತ್ತಿದೆ. ಅನುಕರಣೆಯಿಂದಾಗಿ ಬಾಲಿವುಡ್ ಹೀನಾಯವಾಗಿ ಸೋತಿದೆ. ಹೊಸ ಸಿನಿಮಾಗಳು ನೆಲಕಚ್ಚುತ್ತಿವೆ ಎಂದು ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಹೇಳಿಕೆ ನೀಡಿದ್ದರು. ಈ ಹೇಳಿಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಕೆರಳಿಸಿದೆ. ಸುದ್ದಿಯ ಕ್ಲಿಪ್ ಅನ್ನು ಪೋಸ್ಟ್ ಮಾಡಿ ಟ್ವೀಟ್ ಮೂಲಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
“ಬಾಲಿವುಡ್‌ನ ಏಕೈಕ ಮಿಲಾರ್ಡ್‌ನ (ಗಣ್ಯ ಮತ್ತು ಶ್ರೀಮಂತ ವ್ಯಕ್ತಿ) ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ನೀವು ಒಪ್ಪಿಕೊಳ್ಳುತ್ತೀರಾ?” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಬಾಲಿವುಡ್ ಸೋಲಿಗೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದರು. ಅದು ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಅನ್ನು ಉದಾಹರಣೆಯಾಗಿ ನೀಡಿದ್ದರು. ಸಂವಾದವೊಂದರಲ್ಲಿ ಮಾತನಾಡಿದ ಅನುರಾಗ್, ಅನುಕರಣೆ ಮಾಡಿ ಬಾಲಿವುಡ್ ಹೀನಾಯವಾಗಿ ಸೋತಿದೆ. ಬರುತ್ತಿರುವ ಸಿನಿಮಾಗಳು ನೆಲಕಚ್ಚುತ್ತಿವೆ. ಹಾಗೆ ಮಾಡಬಾರದು ಎಂದು ಹೇಳಿದ್ದರು.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಟೀಕಿಸಿದ ʻತುಂಬಾಡ್ʼ ಸಹ ನಿರ್ಮಾಪಕ ಹೇಳಿದ್ದೇನು?
ಕಾಂತಾರ ಮತ್ತು ಪುಷ್ಪ ಸಿನಿಮಾಗಳು ತಮ್ಮ ತಮ್ಮ ನೆಲದ ಕಥೆಯನ್ನು ಹೇಳಿದವು. ಹಾಗಾಗಿ ಗೆದ್ದವು. ಆದರೆ, ಕೆಜಿಎಫ್ 2 ಹಾಗಲ್ಲ. ಅದನ್ನು ಅನುಕರಿಸಲು ಹೋದರೆ ಸೋಲು ಗ್ಯಾರಂಟಿ ಎಂದಿದ್ದರು ಕಶ್ಯಪ್. ಮರಾಠಿ ಚಿತ್ರರಂಗದ ಉದಾಹರಣೆಯನ್ನೂ ನೀಡಿದ್ದ ಅವರು, ಸೈರಾಟ್ ಸಿನಿಮಾ ಮರಾಠಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತು. ಕಡಿಮೆ ಬಜೆಟ್‌ನಲ್ಲಿ ತಗೆದ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಯಿತು. ಆ ಸಿನಿಮಾವನ್ನೇ ಮಾದರಿಯಾಗಿಟ್ಟುಕೊಂಡು ಚಿತ್ರ ಮಾಡಿದರು. ಮುಂದೆ ಏನಾಯಿತು ಎಂದು ಯೋಚಿಸಿ ಎಂದಿದ್ದರು.
ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ, ಗೋಲ್ಡನ್ ಗ್ಲೋಬ್ 2023ಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ತಮ್ಮ ನೆಚ್ಚಿನ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಅವರ ತಂದೆ ವಿಜಯೇಂದ್ರ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗಿದೆ