Site icon Vistara News

Vivek Agnihotri: ಆಸ್ಕರ್‌ನಿಂದ ವಿಶೇಷ ಗೌರವ ಪಡೆದ ʻದಿ ವ್ಯಾಕ್ಸಿನ್ ವಾರ್ʼ!

The Vaccine War to be included in the Oscar library

ಬೆಂಗಳೂರು: ಆಸ್ಕರ್​ ಪ್ರಶಸ್ತಿ ನೀಡುವ ‘ದಿ ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್​ ಆರ್ಟ್ಸ್​ ಆ್ಯಂಡ್​ ಸೈನ್ಸ್​’ ಸಂಸ್ಥೆಯು ಕೆಲವು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್​ಗಳನ್ನು ಸಂಗ್ರಹಿಸುತ್ತದೆ. ಇದೀಗ ಈ ಸಾಲಿಗೆ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ, ʻದಿ ವ್ಯಾಕ್ಸಿನ್ ವಾರ್ʼ ಸೇರಿದೆ. ಈ ಬಗ್ಗೆ ವೀವೇಕ್‌ ಅಗ್ನಿ ಹೋತ್ರಿ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡು ಸಂತಸ ಹೊರಹಾಕಿದ್ದಾರೆ.

ತಮ್ಮ ಸಿನಿಮಾಗೆ ಈ ರೀತಿಯ ಮನ್ನಣೆ ಸಿಕ್ಕಿದ್ದನ್ನು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡು ವಿವೇಕ್​ ಅಗ್ನಿಹೋತ್ರಿ ಸಂಭ್ರಮಿಸಿದ್ದಾರೆ. ಇಮೇಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಾ, ಅಗ್ನಿಹೋತ್ರಿ ಹಂಚಿಕೊಂಡು ʻಲೈಬ್ರರಿಯಿಂದ ಅಕಾಡೆಮಿ ಸಂಗ್ರಹಣೆಗಳಿಗೆ ಆಹ್ವಾನಿಸಲಾಗಿದೆ. ನಮ್ಮ ಸ್ಕ್ರಿಪ್ಟ್‌ ಸ್ವೀಕರಿಸಲಾಗಿದೆ ಎಂದು ನನಗೆ ಹೆಮ್ಮೆ ಇದೆ. ಈ ಬಗ್ಗೆ ನನಗೆ ಸಂತೋಷವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರ ಕೋವಿಡ್‌ ಸಮಯದಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಭಾರತೀಯ ವಿಜ್ಞಾನಿಗಳು ನಡೆಸಿದ ಹೋರಾಟ, ಎದುರಿಸಿದ ಸವಾಲನ್ನು ತೆರೆದಿಡುತ್ತದೆ. ನಾನಾ ಪಾಟೇಕರ್‌, ಸಪ್ತಮಿ ಗೌಡ, ಪಲ್ಲವಿ ಜೋಶಿ, ಅನುಪಮ್‌ ಖೇರ್‌, ರೈಮಾ ಸೇನ್‌ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಕುರಿಯಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಹೊಗಳಿದ್ದರು. ʻʻಇದು ಋಷಿಮುನಿಗಳಂತೆ ತಮ್ಮ ಪ್ರಯೋಗಾಲಯಗಳಲ್ಲಿ ಕೋವಿಡ್ ವಿರುದ್ಧ ಹೋರಾಡಲು ಹಗಲು ರಾತ್ರಿ ಕೆಲಸ ಮಾಡಿದ ನಮ್ಮ ದೇಶದ ವಿಜ್ಞಾನಿಗಳ ಅವಿರತ ಪ್ರಯತ್ನಗಳನ್ನು ಚಿತ್ರಿಸುತ್ತದೆ. ನಮ್ಮ ಮಹಿಳಾ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾ ವೀಕ್ಷಿಸಿದ ಬಳಿಕ ನಮ್ಮ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಎಷ್ಟೆಲ್ಲ ಪ್ರಯತ್ನ ಪಟ್ಟಿದ್ದಾರೆ ಎನ್ನುವುದು ತಿಳಿಯಲಿದೆʼʼ ಎಂದಿದ್ದರು.

ಇದನ್ನೂ ಓದಿ: Vivek Agnihotri: ಶಾರುಖ್‌ಗೆ ಹೇಳಿ ಟಿಕೆಟ್‌ ಕೊಡಿಸಿ ಪ್ಲೀಸ್‌; ವ್ಯಂಗ್ಯವಾಡಿದ ಮೂರೇ ದಿನಕ್ಕೆ ವಿವೇಕ್ ಅಗ್ನಿಹೋತ್ರಿ ವರಸೆ ಚೇಂಜ್‌!

ʼದಿ ವ್ಯಾಕ್ಸಿನ್‌ ವಾರ್‌ʼ ಚಿತ್ರದ ಬಗ್ಗೆ

ಕಳೆದ ವರ್ಷ ತೆರೆಕಂಡು ಸಂಚಲನ ಮೂಡಿಸಿದ್ದ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರದ ಬಳಿಕ ವಿವೇಕ್‌ ಅಗ್ನಿಹೋತ್ರಿ ಆ್ಯಕ್ಷನ್‌ ಕಟ್‌ ಹೇಳಿದ ಚಿತ್ರ ʼದಿ ವ್ಯಾಕ್ಸಿನ್‌ ವಾರ್‌ʼ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ಸೆಪ್ಟಂಬರ್‌ 28ರಂದು ತೆರೆಗೆ ಬಂದಿದೆ. ಸುಮಾರು 10 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಇದುವರೆಗೆ ಸುಮಾರು 13 ಕೋಟಿ ರೂ. ಗಳಿಸಿದೆ. ಚಿತ್ರದ ಕಳಪೆ ಪ್ರದರ್ಶನದ ಬಗ್ಗೆ ಈ ಹಿಂದೆ ಮಾತನಾಡಿದ್ದ ವಿವೇಕ್‌ ಅಗ್ನಿ ಹೋತ್ರಿ ತಮ್ಮದೇ ವ್ಯಾಖ್ಯಾನ ನೀಡಿದ್ದರು. “ಹೊಸ ಪುಸ್ತಕದಂಗಡಿಯಲ್ಲಿ ಭಗವದ್ಗೀತೆ ಮತ್ತು ಪ್ಲೇಬಾಯ್ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸುತ್ತೀರಿ ಎಂದಿಟ್ಟುಕೊಳ್ಳೋಣ. ಆಗ 1,000 ಪ್ರತಿ ಪ್ಲೇಬಾಯ್ ಪುಸ್ತಕ ಮಾರಾಟವಾದರೆ ಭಗವದ್ಗೀತೆಯ 10 ಪ್ರತಿಗಳು ಮಾತ್ರ ಮಾರಾಟವಾಗುತ್ತವೆ. ಇದರಿಂದ ಭಗವದ್ಗೀತೆಯ ಜನಪ್ರಿಯತೆ ಕಡಿಮೆಯಾಗಿದೆ ಎಂದು ನಿರ್ಧರಿಲಾಗುವುದಿಲ್ಲ ಅಲ್ಲವೆ?ʼʼ ಎಂದಿದ್ದರು.

ವಿಜ್ಞಾನಿಗಳ ಪಾತ್ರವನ್ನು ನಾನಾ, ಸಪ್ತಮಿ, ಪಲ್ಲವಿ ನಿರ್ವಹಿಸಿದರೆ, ರೈಮಾ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಿವೇದಿತಾ ಭಟ್ಟಾಚಾರ್ಯ ಮತ್ತು ಮೋಹನ್ ಕಪೂರ್ ನಟಿಸಿರುವ ಚಿತ್ರದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ.

Exit mobile version