ಬಾಲಿವುಡ್ ನಟ ವಿವೇಕ್ ಒಬೆರಾಯ್ (Vivek Oberoi) ವಂಚನೆಗೆ ಒಳಗಾಗಿದ್ದಾರೆ. ಈವೆಂಟ್ ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಲಾಭ ಕೊಡಲಾಗುವುದು ಎಂದು ಹೇಳಿ ಮೂರು ಮಂದಿ ಬರೋಬ್ಬರಿ 1.55 ಕೋಟಿ ರೂ. ವಂಚಿಸಿದ್ದಾರೆ. ಈ ಕುರಿತು ನಟ ವಿವೇಕ್ ಅವರ ಅಕೌಂಟೆಂಟ್ ಅಂಧೇರಿಯಲ್ಲಿ ಮೂವರ ವಿರುದ್ಧ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಿದ್ದೇನು?
ವಿವೇಕ್ ಒಬೆರಾಯ್ ಚಾರ್ಟೆಡ್ ಅಕೌಂಟೆಟ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ, ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಳ್ವಾ 2017ರಲ್ಲಿ ಕಂಪೆನಿಯೊಂದನ್ನು ಪ್ರಾರಂಭಿಸಿದ್ದರು. ಆದರೆ ಆ ಕಂಪನಿ ಲಾಭದಾಯಕವಾಗಿರಲಿಲ್ಲ. ಹಾಗಾಗಿ ಆ ಕಂಪನಿಗೆ ಕೆಲವು ಪಾರ್ಟ್ನರ್ಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿ ಒಬ್ಬ ಸಿನಿಮಾ ನಿರ್ಮಾಪಕ ಸೇರಿದಂತೆ ಇನ್ನೊಬ್ಬರನ್ನು ಸೇರಿಸಿಕೊಂಡರು. ಬಳಿಕ ಆ ಸಂಸ್ಥೆಯನ್ನು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನಾಗಿ ಬದಲಾಯಿಸಿದರು.
ಆ ಬಳಿಕ ವಿವೇಕ್ ಅವರ ಪಾರ್ಟ್ನರ್ಗಳು ಇವೆಂಟ್ ಒಂದರಲ್ಲಿ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯೊಂದರಲ್ಲಿ ಹಣ ತೊಡಗಿಸುವಂತೆ ಹೇಳಿದರು ಅಂತೆಯೇ ವಿವೇಕ್ 1.55 ಕೋಟಿ ಹಣವನ್ನು ತೊಡಗಿಸಿದರು. ಆದರೆ ಪಾರ್ಟ್ನರ್ಗಳು ವಿವೇಕ್ ಹೂಡಿಕೆ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದು ಸಿಎ ಗಮನಕ್ಕೆ ಬಂದು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಯುರ್‌ಕೇರ್ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ
ವಿವೇಕ್ ಒಬೆರಾಯ್ ಬಾಲಿವುಡ್ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಜತೆಗೆ ಕನ್ನಡದ ‘ರುಸ್ತುಂ’ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ವಿವೇಕ್ ನಟಿಸಿದ್ದಾರೆ. ಮೊನ್ನೆಯಷ್ಟೇ ಸಲ್ಮಾನ್ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ. ಆಡಿಷನ್ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು