Site icon Vistara News

Waltair Veerayya : ಒಟಿಟಿಗೆ ಬರಲಿದೆ ಚಿರಂಜೀವಿಯ ʼವಾಲ್ತೇರ್‌ ವೀರಯ್ಯʼ; ಯಾವಾಗ? ಯಾವುದರಲ್ಲಿ?

#image_title

ಹೈದರಾಬಾದ್‌: ಈ ವರ್ಷದಲ್ಲಿ ಬಿಡುಗಡೆಗೊಂಡು ಹಿಟ್‌ ಆದ ಚಿತ್ರಗಳಲ್ಲಿ ಚಿರಂಜೀವಿ ನಟನೆಯ ʼವಾಲ್ತೇರ್ ವೀರಯ್ಯʼ (Waltair Veerayya) ಸಿನಿಮಾ ಕೂಡ ಒಂದು. ರವಿತೇಜಾ ಕೂಡ ಕಾಣಿಸಿಕೊಂಡಿರುವ ಈ ಸಿನಿಮಾ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಈಗಾಗಲೇ ತೆರೆ ಮೇಲೆ ಮಿಂಚಿರುವ ಈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.

ಇದನ್ನೂ ಓದಿ: Chiranjeevi | ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻವಾಲ್ತೇರ್‌ ವೀರಯ್ಯʼ ಮೊದಲ ದಿನದ ಕಲೆಕ್ಷನ್‌ ಎಷ್ಟು?
ವಾಲ್ತೇರ್‌ ವೀರಯ್ಯ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದೇ ತಿಂಗಳ 27ನೇ ತಾರೀಖಿನಂದು ಸಿನಿಮಾವನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ನೆಟ್‌ಫ್ಲಿಕ್ಸ್‌ ಹೇಳಿಕೊಂಡಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ನ ದಕ್ಷಿಣ ಭಾರತದ ಟ್ವಿಟರ್‌ ಖಾತೆಯಿಂದ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ. “ಮೆಗಾ ಫೋರ್ಸ್‌ ಉತ್ಸವ ಮುಂದಿದೆ. ವಾಲ್ತೇರ್ ವೀರಯ್ಯ ಫೆ.27ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.


ಈ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿರಂಜೀವಿ ಅವರು, “ಈ ಕಥೆಯನ್ನು ಮೊದಲನೇ ಬಾರಿ ಕೇಳಿದಾಗಲೇ ನಾನು ಉತ್ಸುಕನಾಗಿ ಸಿನಿಮಾಕ್ಕೆ ಒಪ್ಪಿಕೊಂಡೆ. ಸಿನಿಮಾದ ನಿರ್ದೇಶಕರಾಗಿರುವ ಬಾಬಿ ನಿಜಕ್ಕೂ ಒಳ್ಳೆಯ ಕಥೆಗಾರ, ಬರಹಗಾರ ಮತ್ತು ನಿರ್ದೇಶಕ. ನಾನು ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: Chiranjeevi | ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻವಾಲ್ತೇರ್‌ ವೀರಯ್ಯʼ ಬಿಡುಗಡೆ
ನವೀನ್‌ ಯೆರ್ನೇನಿ ಹಾಗೂ ವೈ.ರವಿ ಶಂಕರ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೈತ್ರಿ ಮೂವಿಸ್‌ ಮೇಕರ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಈ ಸಿನಿಮಾಕ್ಕೆ ಬಾಬಿ ಕೊಲ್ಲಿ ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಸಿನಿಮಾದಲ್ಲಿ ಚಿರಂಜೀವಿ, ರವಿ ತೇಜಾ ಜತೆಯಲ್ಲಿ ಶೃತಿ ಹಾಸನ್‌ ಹಾಗೂ ಕ್ಯಾಥರೀನ್ ಟ್ರೇಸಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹಿಂದಿಗೂ ಕೂಡ ಡಬ್‌ ಆಗಿದ್ದು, ಅದೂ ಕೂಡ ಫೆ.27ರಂದೇ ಬಿಡುಗಡೆಯಾಗಲಿದೆ.

Exit mobile version