Site icon Vistara News

Avatar: The Way of Water | ಅವತಾರ್-2 ನೋಡಿ ಕಲಿಯಿರಿ: ಟ್ರೋಲ್‌ಗೆ ಒಳಗಾದ ʻಆದಿ ಪುರುಷ್‌ʼ ಸಿನಿಮಾ!

Avatar The Way of Water

ಬೆಂಗಳೂರು : ಅವತಾರ್‌-2 ಸಿನಿಮಾ (Avatar: The Way of Water) ಶುಕ್ರವಾರ ಡಿಸೆಂಬರ್‌ 16ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಕುರಿತು ಸಿನಿ ವಿಮರ್ಶಕರು ಹಾಡಿ ಹೊಗಳಿದ್ದಾರೆ. ಇದೀಗ ಅವತಾರ್‌-2 ಅನ್ನು ʻಆದಿಪುರುಷ್‌ʼ ಸಿನಿಮಾಗೆ ಹೋಲಿಸಿ ಟ್ರೋಲ್‌ ಮಾಡುತ್ತಿದ್ದಾರೆ ನೆಟ್ಟಿಗರು.

ಜೇಮ್ಸ್‌ ಕ್ಯಾಮರಾನ್‌ ಅವರ ಅವತಾರ್‌-ದಿ ವೇ ಆಫ್‌ ವಾಟರ್‌ ಬುಧವಾರ ಪ್ರೀಮಿಯರ್‌ ಶೋ ಅನ್ನು ಬಾಲಿವುಡ್‌ ತಾರೆಯರಿಗೆ ಹಾಗೂ ತಂತ್ರಜ್ಞರಿಗಾಗಿ ಮುಂಬೈನಲ್ಲಿ ಶೋ ಆಯೋಜಿಸಲಾಗಿತ್ತು. ಶೋ ನೋಡಲು ಬಂದ ಅಕ್ಷಯ್‌ ಕುಮಾರ್‌, ಕಾರ್ತಿಕ್‌ ಆರ್ಯನ್‌ ಸೇರಿದಂತೆ ಅನೇಕ ಬಾಲಿವುಡ್‌ ನಟರು ಸಿನಿಮಾವನ್ನು ಹೊಗಳಿದ್ದಾರೆ. ಆದಿ ಪುರುಷ್ ಚಿತ್ರದ ನಿರ್ದೇಶಕ ಓಂ ರಾವತ್ ಅವರೂ ಈ ಸಿನಿಮಾವನ್ನು ನೋಡಿ ಮೆಚ್ಚಿ, ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಓಂ ರಾವತ್‌ ಅವರು ಪ್ರಭಾಸ್‌ ಹಾಗೂ ಸೈಫ್‌ ಅಲಿಖಾನ್‌ ತಾರಾಗಣದಲ್ಲಿ ರಾಮಾಯಣ ಆಧರಿಸಿ ʻಆದಿ ಪುರುಷ್‌ʼ 3ಡಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇದೀಗ ರಾವುತ್‌ ಅವರ ಆದಿಪುರುಷ್‌ ಟೀಸರ್‌ ಟೀಕೆಗೆ ಒಳಗಾಗಿದ್ದು, ವಿಎಫ್‌ಎಕ್ಸ್‌ ಸಿನಿಮಾ ಎಂದು ಕಾರ್ಟೂನ್‌ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಟ್ರೋಲ್‌ ಆಗಿತ್ತು. ಇದೀಗ ಅವತಾರ್‌-2 ಅನ್ನು ಅದ್ಭುತವಾಗಿ ತೋರಿಸಲಾಗಿದೆ. ನೈಜ ಎನ್ನುವಂತೆ ಪರಿಶ್ರಮದಿಂದ ಸಿನಿಮಾವನ್ನು ನಿರ್ದೇಶಕರು ರೂಪಿಸಿದ್ದಾರೆ. ʻʻಈ ರೀತಿ ಸಿನಿಮಾ ಮಾಡಬೇಕು. ಇನ್ನಾದರೂ ಕಾರ್ಟೂನ್‌ಗಳಿಗೂ, ವಿಎಫ್‌ಎಕ್ಸ್‌ಗಳಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳಿ ರಾವುತ್‌ ಅವರೇʼʼ ಎಂದು ಕಮೆಂಟ್‌ ಮೂಲಕ ಕಾಲೆಳಿದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ | Avatar: The Way of Water | ಅವತಾರ್‌-2 ಸಿನಿಮಾ ವೀಕ್ಷಿಸಿ ಹಾಡಿ ಹೊಗಳಿದ ನಟ ಅಕ್ಷಯ್‌ ಕುಮಾರ್‌!

ಅವತಾರ್‌-2 ಭಾರತದಲ್ಲಿ 3000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. 4 ಡಿಎಕ್ಸ್‌ಆರ್‌ 3ಡಿ ಶೋಗಳ ಒಂದು ಟಿಕೆಟ್‌ ದರ ಮಲ್ಟಿಪ್ಲೆಕ್ಸ್‌ಗಳಲ್ಲಿ 2500 ರೂ.ವರೆಗೆ ಇದೆ. 3 ಡಿ ಶೋಗಳ ದರ 1500 ರೂ. ವರೆಗೆ ಇದೆ. ಸುಮಾರು 3 ಗಂಟೆ 12 ನಿಮಿಷ 10 ಸೆಕೆಂಡುಗಳಿಗೂ ದೀರ್ಘ ಸಿನಿಮಾವಿದೆ. ಈ ಚಿತ್ರದ ಎರಡು ಟ್ರೈಲರ್‌ಗಳು ಈಗಾಗಲೇ ಬಿಡುಗಡೆಯಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ, ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವ ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.

ಇದನ್ನೂ ಓದಿ | Adipurush Film | ಬಾಯ್ಕಾಟ್ ಎಫೆಕ್ಟ್, ಆದಿಪುರುಷ್‌ ಚಿತ್ರ ಬಿಡುಗಡೆ ಮುಂದೂಡಿಕೆ!

Exit mobile version