Site icon Vistara News

Samantha | ವರ್ಕೌಟ್‌ ದಿನಗಳ ಬಗ್ಗೆ ಮತ್ತೆ ನೆನಪಿಸಿಕೊಂಡ ಸಮಂತಾ!

Samantha

ಬೆಂಗಳೂರು : ಸಮಂತಾ ರುತ್ ಪ್ರಭು (Samantha) ಅವರು ಮೈಯೋಸಿಟಿಸ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಟಿ ತಮ್ಮ ಆರೋಗ್ಯ ಸ್ಥಿತಿಯಿಂದಾಗಿ ವೈಯಕ್ತಿಕವಾಗಿ ಕಷ್ಟದ ಹಂತಗಳನ್ನು ಎದುರಿಸುತ್ತಿದ್ದಾರೆ. ಜನವರಿ 8 ರಂದು, ನಟಿಯ ಫಿಟ್‌ನೆಸ್ ತರಬೇತುದಾರ ಜುನೈದ್ ಶೇಖ್ ಅವರು ʻದಿ ಫ್ಯಾಮಿಲಿ ಮ್ಯಾನ್ ಸೀಸನ್ 2ʼರ ಸಮಂತಾ ಅವರ ರಗಡ್ ಲುಕ್‌ ಹೊಂದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ.

ಸಮಂತಾ ಫಿಟ್ನೆಸ್ ತರಬೇತುದಾರ ಜುನೈದ್ ಶೇಖ್ ಅವರುʻ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2ರʼ ಚಿತ್ರವನ್ನು ಹಂಚಿಕೊಂಡು “ನಾನು ವಿಶ್ರಾಂತಿ ತೆಗೆದುಕೊಳ್ಳಿ ಎಂದಾಗ, ಅವರು ಸಾಕು, ಸಾಕು, ಎನ್ನತ್ತಾರೆʼʼ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, “ಇಂದು ಒಳ್ಳೆಯ ದಿನ. ಸ್ವಲ್ಪ ವೀಕ್‌ ಇದ್ದರೂ ಸ್ಟ್ರಾಂಗ್‌ ಇದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Samantha | ʻಶಾಕುಂತಲಂʼ ಚಿತ್ರೀಕರಣದ ಅತ್ಯಂತ ಕಷ್ಟಕರವಾದ ಭಾಗವನ್ನು ಬಹಿರಂಗಪಡಿಸಿದ ಸಮಂತಾ!

ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾ ಟ್ರೈಲರ್‌ ಜನವರಿ 9 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಟ್ರೈಲರ್‌ಗಾಗಿ ಸಮಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ʻಶಾಕುಂತಲಂʼ 3-ಡಿ ಆವೃತ್ತಿಯನ್ನು ವೀಕ್ಷಿಸಲು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸಮಂತಾ ರುತ್ ಪ್ರಭು ನಟನೆಯ ʻಶಾಕುಂತಲಂʼ ಸಿನಿಮಾ ಫ್ರೆಬ್ರವರಿ 17ರಂದು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.

ಮಹಾಕವಿ ಕಾಳಿದಾಸನ ಅಭಿಜ್ಞಾನ ʻಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಮಂತಾ ರುತ್ ಪ್ರಭು ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿನಯದ ʻಖುಷಿʼ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.

ಇದನ್ನೂ ಓದಿ | Samantha | ಸಮಂತಾ ನಟನೆಯ ʻಶಾಕುಂತಲಂʼ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

Exit mobile version