ಬೆಂಗಳೂರು: ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ಗೆ (Weekend With Ramesh) ರಮ್ಯಾ ಅತಿಥಿಯಾಗಿ ಬರುತ್ತಿದ್ದಾರೆ. ಇದೀಗ ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾಕೆ ಇಷ್ಟ ಎಂಬುದನ್ನು ಪತ್ರದ ಮೂಲಕ ರಿವೀಲ್ ಮಾಡಿದ್ದಾರೆ. ಈಗಾಗಲೇ ರಮ್ಯಾ ಅವರ ಸಂಚಿಕೆಗೆ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಪೂಜಾ ಗಾಂಧಿ ಕನ್ನಡದಲ್ಲೇ ಪತ್ರ ಬರೆದು ರಮ್ಯಾ ಕುರಿತಾಗಿ ಹೇಳಿದ್ದು ಹೀಗೆ.
‘ರಮೇಶ್ ಸರ್, ನಿಮ್ಮ ಮತ್ತು ರಮ್ಯ ಮಧ್ಯೆ ನಡೆಯುವ ಮಾತಿನ ಜುಗಲ್ಬಂದಿ ನೋಡಲು ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ. ನನಗೆ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮ ಸಹ ಕಲಾವಿದರ ಪರವಾಗಿ ನಿಲ್ಲುತ್ತಾರೆ. ಅವರಲ್ಲಿನ ಈ ಗುಣ ಇಷ್ಟಾಗುತ್ತದೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ‘ಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿ’ ಎಂದು ರಮ್ಯಾ ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭಾವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ’ ಎಂದು ಅವರು ಶುಭಹಾರೈಸಿದ್ದಾರೆ.
ಇದನ್ನೂ ಓದಿ: Weekend With Ramesh: ಸಾಧಕರ ಸೀಟ್‌ನಲ್ಲಿ ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ಅಂದ್ರು ಫ್ಯಾನ್ಸ್!
ಪೂಜಾ ಗಾಂಧಿ ಪತ್ರ
2014ರ ಆಗಸ್ಟ್ 2ರಂದು ‘ವೀಕೆಂಡ್ ವಿತ್ ರಮೇಶ್’ ಮೊದಲ ಸೀಸನ್ ಆರಂಭ ಆಯಿತು. ಪುನೀತ್ ರಾಜ್ಕುಮಾರ್ ಅವರು ಮೊದಲ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ರಮ್ಯಾ. ಶ್ರೀನಗರ ಕಿಟ್ಟಿ ಕೂಡ ಆಗಮಿಸಿರುವ ಪ್ರೋಮೊ ವೈರಲ್ ಆಗಿದೆ.
ವೀಕೆಂಡ್ ವಿತ್ ರಮೇಶ್ ಉದ್ದೇಶ
ಇಲ್ಲಿಯವರೆಗೂ 84 ಸಾಧಕರು ಕುರ್ಚಿಯ ಮೇಲೆ ಕೂತಿದ್ದು 110 ಸಂಚಿಕೆಗಳು ಪ್ರಸಾರವಾಗಿವೆ. ʻʻಕೇವಲ ನಟ, ರಾಜಕಾರಣಿ ಅಲ್ಲ ವೈದ್ಯರು, ರೈತರು, ನರ್ಸ್, ಹೀಗೆ ಹಲವರನ್ನು ಕರೆಸಬಹುದು. ಸ್ಫೂರ್ತಿ ತುಂಬುವಂತಹ ಕೆಲಸ ಮಾಡಬೇಕು. ಅದರಿಂದ, ಕರ್ನಾಟಕದಲ್ಲಿರುವ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವವನ್ನು ಹೊರಗೆ ತೋರಬೇಕು ಎನ್ನುವುದೇ ವೀಕೆಂಡ್ ವಿತ್ ರಮೇಶ್ ಉದ್ದೇಶʼʼ ಅಂದರು ನಟ ರಮೇಶ್ ಅರವಿಂದ್.