Site icon Vistara News

KL Rahul- Athiya Shetty Wedding: ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ ಮದುವೆ ಸಮಾರಂಭದ ವಿಶೇಷತೆಗಳೇನು?

K.L. What are the special features of Rahul-Athiya Shetty marriage ceremony

ಬೆಂಗಳೂರು : ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ ಎಲ್ ರಾಹುಲ್‌ (KL Rahul- Athiya Shetty Wedding) ನಾಲ್ಕು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಪ್ರೇಮ ಪಕ್ಷಿಗಳು ಜನವರಿ 23ರಂದು ಸುನೀಲ್‌ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅವರ ಮದುವೆಯ ಸಿದ್ಧತೆಗಳು ಜನವರಿ 21 ರಿಂದ ಪ್ರಾರಂಭವಾಗಿದ್ದು, ವರದಿಗಳ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಮದುವೆಗೆ ಸಲ್ಮಾನ್ ಖಾನ್ ಮತ್ತು ಎಂಎಸ್ ಧೋನಿ ಸೇರಿದಂತೆ ಕೇವಲ 100 ಅತಿಥಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಅಥಿಯಾ, ಕೆಎಲ್ ರಾಹುಲ್ ಅವರ ಮದುವೆಗೆ ಕೇವಲ 100 ಅತಿಥಿಗಳು

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜನವರಿ 23 ರಂದು ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ (kl rahul athiya Shetty marriage venue) ವಿವಾಹ ಜರುಗಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮದುವೆಯಲ್ಲಿ ಸುಮಾರು 100 ಗೆಸ್ಟ್‌ಗಳು (Athiya kl rahul marriage) ಇರಲಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ನಿಯಮಗಳಂತೆ ಮೊಬೈಲ್ ಫೋನ್‌ ಸಮಾರಂಭದಲ್ಲಿ ನಿಷೇಧಿಸಲಾಗಿದೆ. ಅತಿಥಿಗಳ ಪಟ್ಟಿಯಲ್ಲಿ ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rahul And Athiya: ಜ. 23ಕ್ಕೆ ಮದುವೆ: ಅಥಿಯಾ ಜತೆಗಿನ ಸಂಬಂಧದ ಬಗ್ಗೆ ಕೆ.ಎಲ್‌. ರಾಹುಲ್‌ ಹೇಳಿಕೊಂಡ ಮೊದಲ ಪೋಸ್ಟ್‌ ಈಗ ವೈರಲ್‌

ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಮತ್ತು ಬಾಲಿವುಡ್ ಛಾಯಾಗ್ರಾಹಕ ರೋಹನ್ ಶ್ರೇಷ್ಠ ಭಾಗಿಯಾಗಲಿದ್ದಾರೆ (Athiya Shetty KL Rahul wedding guest list) ಎನ್ನಲಾಗಿದೆ. ಅಥಿಯಾ ಮತ್ತು ಕೆಎಲ್ ರಾಹುಲ್ ಸೋಮವಾರ ಜನವರಿ 23ರಂದು ಸಂಜೆ 4 ಗಂಟೆಗೆ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಿ ವಿಧಾನಗಳನ್ನು ಅನುಸರಿಸಿ, ಅವರು ಸಂಜೆ 6:30 ಕ್ಕೆ ಪಾಪರಾಜಿಗಳಿಗೆ ಪೋಸ್ ನೀಡಲಿದ್ದಾರೆ.

ಪ್ರೀ ವೆಡ್ಡಿಂಗ್‌ ಫಂಕ್ಷನ್‌

ಜನವರಿ 21 ರ ಸಂಜೆ ಆತ್ಮೀಯ ಕಾಕ್‌ಟೈಲ್ ಪಾರ್ಟಿಯೊಂದಿಗೆ (kl rahul athiya Shetty latest news) ಮದುವೆಯ ಪ್ರಿ ವೆಡ್ಡಿಂಗ್‌ ಕಾರ್ಯಗಳು ಪ್ರಾರಂಭವಾದವು ಎಂದು ವರದಿಯಾಗಿದೆ. ಇದರ ನಂತರ ಜನವರಿ 22 ರಂದು ಮೆಹಂದಿ ಮತ್ತು ಹಳದಿ ಕಾರ್ಯಕ್ರಮವು ಸುನೀಲ್‌ ಶೆಟ್ಟಿ ಅವರ ಖಂಡಾಲಾ ಮನೆಯಲ್ಲಿ ನಡೆದಿದೆ. ಎರಡೂ ಕುಟುಂಬಗಳು ಮತ್ತು ಜೋಡಿ ಮುಂಬೈ ಮತ್ತು ಬೆಂಗಳೂರಿನಲ್ಲಿ ತಮ್ಮ ಸ್ನೇಹಿತರಿಗೆ ಹಾಗೂ ಆತ್ಮೀಯರಿಗಾಗಿ ಆರತಕ್ಷತೆಯನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ. ಆದರೆ ಮದುವೆ ಬಗ್ಗೆ ರಾಹುಲ್ ಹಾಗೂ ​ಅಥಿಯಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Rahul And Athiya: ಜನವರಿ 23ಕ್ಕೆ ವಿವಾಹವಾಗಲಿದ್ದಾರೆ ಕೆ.ಎಲ್​ ರಾಹುಲ್, ಅಥಿಯಾ ಶೆಟ್ಟಿ; ವರದಿ

ಅಥಿಯಾ ಶೆಟ್ಟಿ ಕೊನೆಯದಾಗಿ 2019ರ ಚಲನಚಿತ್ರ ʻಮೋತಿಚೂರ್ ಚಕ್ನಾಚೂರ್‌ʼನಲ್ಲಿ ಕಾಣಿಸಿಕೊಂಡರು. ಅವರು ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಜತೆ ಕಾಣಿಸಿಕೊಂಡಿದ್ದರು.

Exit mobile version