Site icon Vistara News

Kantara Movie | ಕಾಂತಾರ ಸಿನಿಮಾ ನೋಡಿ ಭಾವುಕರಾದ ಸುನೀಲ್‌ ಶೆಟ್ಟಿ: ನಟ ಹೇಳಿದ್ದೇನು?

Kantara Movie (sunil shetty)

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ಬಗ್ಗೆ ಪ್ರೇಕ್ಷಕರು ಹಾಗೂ ಸಿನಿ ತಾರೆಯರು ಹಾಡಿ ಹೊಗಳಿದ್ದಾರೆ. ಈಗಾಗಲೇ ಸಿನಿಮಾ 400 ಕೋಟಿ ರೂ. ಕ್ಲಬ್‌ ಸೇರುವತ್ತ ಸಿನಿಮಾ ದಾಪುಗಾಲು ಇಟ್ಟಿದೆ. ಇದೀಗ ಸಿನಿಮಾ ಕುರಿತು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಕಾಂತಾರ ಸಿನಿಮಾ ಕುರಿತು ಭಾವುಕರಾಗಿದ್ದಾರೆ. ತಮ್ಮ ಮುಂದಿನ ವೆಬ್‌ ಸರಣಿ ʻಧಾರಾವಿ ಬ್ಯಾಂಕ್‌ʼ ಕುರಿತಾಗಿ ಇದ್ದ ಸಂದರ್ಶನವೊಂದರಲ್ಲಿ ಕಾಂತಾರ ಸಿನಿಮಾ ಕುರಿತು ಹೇಳಿಕೊಂಡಿದ್ದಾರೆ.

ʻಕಳೆದ ರಾತ್ರಿಯಷ್ಟೇ ನನ್ನ ಕುಟುಂಬದವರೊಂದಿಗೆ ಕಾಂತಾರ ಸಿನಿಮಾ ವೀಕ್ಷಿಸಿದೆ. ಆ ಶೋ ಕೂಡ 60%ಕ್ಕೂ ಹೆಚ್ಚು ಪ್ರೇಕ್ಷಕರಿಂದ ಕೂಡಿತ್ತು. ಅದು ಕೂಡ ಪಿವಿಆರ್‌ ಚಿತ್ರಮಂದಿರದಲ್ಲಿ. ಸಿನಿಮಾದಲ್ಲಿ ಕೊನೆಯ 20ರಿಂದ 25ನಿಮಿಷ ರೋಮಾಂಚನವಾಯಿತು. ಕಣ್ಣಲ್ಲಿ ನೀರು ಬಂತು. ಏಕೆಂದರೆ ನಾನು ಆ ಜಾಗದಿಂದ ಬಂದವನು. ನಾನು ಪ್ರತಿ ವರ್ಷ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುತ್ತೇನೆ. ಅದೇ ರೀತಿ ರಿಷಬ್‌ ಅವರು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Kantara Movie | ಕನ್ನಡದ ʻಕಾಂತಾರʼ ಫ್ರಂಟ್‌ಲೈನ್‌ ಮ್ಯಾಗಜಿನ್‌ನ ಕವರ್‌ ಫೋಟೊ!

ಕರ್ನಾಟಕದಲ್ಲಿಯೇ 150 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಚಿತ್ರ. ಹಿಂದಿಯಲ್ಲಿ 100 ಕೋಟಿ ರೂ. ಕ್ಲಬ್‌ ಸೇರಲಿದೆ ಎನ್ನಲಾಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲಿ ಗಳಿಕೆ ಕಂಡಿದೆ. ಮಲಯಾಳನಲ್ಲಿ 20ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ.

ಇದನ್ನೂ ಓದಿ | Kantara Movie | ರಜನಿಕಾಂತ್‌ ಭೇಟಿ ವೇಳೆ ರಿಷಬ್‌ ಶೆಟ್ಟಿ ಪಂಚೆ ಬದಲು ಜೀನ್ಸ್‌ ಧರಿಸಿದ್ಯಾಕೆ? ನಟ ಹೇಳಿದ್ದೇನು?

Exit mobile version