Site icon Vistara News

Kantara Movie | ಕಾಂತಾರ ಹಿಂದಿ ರಿಮೇಕ್‌ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ್ದೇನು?

Kantara Movie

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ದಿನದಿಂದ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚಿನ ಕಲೆಕ್ಷನ್‌ ಮಾಡುತ್ತಿದೆ. ಹಿಂದಿಯಲ್ಲಿ ಕಾಂತಾರ ಸಿನಿಮಾ ಡಬ್‌ ಆಗಿ ರಿಲೀಸ್‌ ಆಗಿದೆ. ಇದರ ಬೆನ್ನಲ್ಲೇ ಹಿಂದಿಯಲ್ಲಿ ಕಾಂತಾರ ರಿಮೇಕ್‌ ಆಗುತ್ತಿದೆಯಾ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್‌ ಮೂಲಕ ಕೇಳುತ್ತಲೇ ಇದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ರಿಷಬ್‌ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ನಟ ಅಕ್ಷಯ್‌ ಕುಮಾರ್‌ ಅಭಿನಯದ ʻರಾಮಸೇತುʼ, ʻಥ್ಯಾಂಕ್‌ ಗಾಡ್‌ʼ ಸಿನಿಮಾಗಳು ಕಾಂತರ ಸಿನಿಮಾ ಮುಂದೆ ಸೋತಿವೆ. ಹಿಂದಿಯಲ್ಲಿ ಕಾಂತಾರ ಸಿನಿಮಾ 50ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ. ಹೊರ ರಾಜ್ಯಗಳಲ್ಲಿಯೂ 100ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ ಎಂದು ತಿಳಿದುಬಂದಿದೆ. ಹಿಂದಿ ವರ್ಷನ್‌ನಲ್ಲಿ ಅಕ್ಟೋಬರ್‌ 29ರಂದು ಕಾಂತಾರ ಸಿನಿಮಾ 4 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ | Kantara Movie | ಥಿಯೇಟರ್‌ನಲ್ಲಿ ಕಾಂತಾರ ಸಿನಿಮಾ ನೋಡುವಾಗಲೇ ʼಮೈ ಮೇಲೆ ಬಂದ ದೇವರುʼ!

ಹಿಂದಿಯಲ್ಲಿ ಡಬ್‌ ಆಗಿರುವ ಕಾಂತಾರ ಸಿನಿಮಾ ಸಕ್ಸೆಸ್‌ ಕಂಡಿದೆ. ಹೀಗಿರುವಾಗ ಸಂದರ್ಶನಕಾರರೊಬ್ಬರು ಸಿನಿಮಾ ರಿಮೇಕ್‌ ಆಗುತ್ತದೆಯೇ ಎಂದು ರಿಷಬ್‌ ಅವರಿಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಬ್‌ ʻʻಕಾಂತಾರ ಸಿನಿಮಾ ಮಾಡಬೇಕು ಎಂದರೆ ಮೊದಲು ಮೂಲ ಸಂಸ್ಕೃತಿಯನ್ನು ನಂಬಬೇಕು. ಹಿಂದಿ ಚಿತ್ರರಂಗದಲ್ಲಿ ನಾನು ಮೆಚ್ಚುವ ಅನೇಕ ನಟರು ಇದ್ದಾರೆ. ಈಗಾಗಲೇ ಹಿಂದಿಯಲ್ಲಿ ಸಿನಿಮಾ ಡಬ್‌ ಆಗಿರುವದರಿಂದ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ನನಗೆ ಹಿಂದಿಯಲ್ಲಿ ಕಾಂತಾರ ಸಿನಿಮಾ ರಿಮೇಕ್‌ ಮಾಡಲು ಆಸಕ್ತಿ ಇಲ್ಲʼʼಎಂದಿದ್ದಾರೆ.

ಒಟ್ಟೂ ಕಾಂತರ ಸಿನಿಮಾ 200 ಕೋಟಿ ರೂ. ಕಲೆಕ್ಷನ್‌ ಮಾಡಿರುವ ಸುಳಿವು ಸಿಗುತ್ತಿದೆ. ತೆಲುಗು ಮತ್ತು ತಮಿಳು ವರ್ಷನ್‌ನಲ್ಲಿ 30 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌, ಪ್ರಭಾಸ್‌, ಅನುಷ್ಕಾ ಶೆಟ್ಟಿ, ರಾಮ್‌ಗೋಪಾಲ್‌ ವರ್ಮಾ ಸೇರಿ ಸಿನಿಮಾ ರಂಗದ ಹಲವು ದಿಗ್ಗಜರು ಕಾಂತಾರ ಸಿನಿಮಾವನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ | Kantara Movie | ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಕಾಂತಾರ ನಿರ್ದೇಶಕ ರಿಷಬ್‌ ಶೆಟ್ಟಿ

Exit mobile version