Site icon Vistara News

Priyanka Chopra : ಸಿಟಾಡೆಲ್‌ ಪ್ರೀಮಿಯರ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಅಭಿಮಾನಿಗಳು ನೀಡಿದ ಗಿಫ್ಟ್‌ ಏನು?

what Fans Gifted Priyanka Chopra in Citadel premiere

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಟ ರಿಚರ್ಡ್ ಮ್ಯಾಡೆನ್ ಲಂಡನ್‌ನಲ್ಲಿ ನಡೆದ ತಮ್ಮ ಸ್ಪೈ ಥ್ರಿಲ್ಲರ್ ಸಿಟಾಡೆಲ್‌ ಸೀರೀಸ್‌ ಪ್ರೀಮಿಯರ್‌ನಲ್ಲಿ ಹಾಜರಾಗಿದ್ದರು. ಈ ಪ್ರೀಮಿಯರ್‌ಗೆ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಾಸ್ ಹಾಗೂ ಅವರ ತಾಯಿ ಮಧು ಕೂಡ ಬಾಗಿಯಾಗಿದ್ದರು. ಈ ವೇಳೆ ಪ್ರಿಯಾಂಕಾ ಸ್ಟನ್ನಿಂಗ್‌ ಲುಕ್‌ನಲ್ಲಿ ಇವೆಂಟ್‌ ವೇಳೆ ಗಮನ ಸೆಳೆದಿದ್ದಾರೆ. ಪಿಗ್ಗಿ ಅಭಿಮಾನಿಗಳು ನಟಿಗೋಸ್ಕರ ಹಾಡನ್ನೂ ಹಾಡಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಿಟಾಡೆಲ್ ಪ್ರೀಮಿಯರ್ ನಂತರ, ತಂಡ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿಸಿತ್ತು. ಗುಂಪಿನಲ್ಲಿದ್ದ ಅಭಿಮಾನಿಯೊಬ್ಬರು ʻದೇಸಿ ಗರ್ಲ್ʼ ಎಂದು ಹಾಡಲು ಪ್ರಾರಂಭಿಸಿದರು. ಇದು ಪ್ರಿಯಾಂಕ ಅವರಿಗೆ ಖುಷಿ ತಂದುಕೊಟ್ಟಿದೆ. ಅಭಿಮಾನಿಗೆ ಧನ್ಯವಾದವನ್ನು ನಟಿ ಹೇಳಿದರು.

ಇದಾದ ಬಳಿಕ ಕೆಲವು ಅಭಿಮಾನಿಗಳು ಶುಭಾಶಯ ಕೋರುವಾಗ ನಟಿಗೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಲಂಡನ್ ಪ್ರೀಮಿಯರ್‌ಗೆ ಮುಂಚಿತವಾಗಿ ನಟಿ ಭಾರತಕ್ಕೆ ಆಗಮಿಸಿದ್ದಾಗ ಮಾವಿನ ಹಣ್ಣುಗಳನ್ನು ತಿನ್ನುತ್ತಿರುವ ಫೋಟೊ ಫೋಸ್ಟ್‌ ಮಾಡಿದ್ದರು. ನಟಿಗೆ ಹಣ್ಣಿನ ಮೇಲಿನ ಪ್ರೀತಿಯನ್ನು ನೋಡಿ, ಅವರ ಅಭಿಮಾನಿಯೊಬ್ಬರು ಪ್ರೀಮಿಯರ್‌ನಲ್ಲಿ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದರು. ಹೀಗೆ ಇವೆಂಟ್‌ನ ಹಲವಾರು ವೀಡಿಯೊಗಳು ವೈರಲ್ ಆಗಿವೆ.

ಇದನ್ನೂ ಓದಿ: Citadel Trailer : ಬಿಡುಗಡೆಯಾಯ್ತು ಪ್ರಿಯಾಂಕಾ ಅಭಿನಯದ ʼಸಿಟಾಡೆಲ್‌ʼ ಟ್ರೈಲರ್; ಹೇಗಿದೆ ನೋಡಿ ಇಲ್ಲಿ!

ಈವೆಂಟ್‌ನಲ್ಲಿ ಪ್ರಿಯಾಂಕ ಚೋಪ್ರಾ

ರಿಚರ್ಡ್ ಮ್ಯಾಡೆನ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ಸಿರೀಸ್‌ ಆ್ಯಕ್ಷನ್-ಪ್ಯಾಕ್ಡ್ ಸ್ಪೈ ಸರಣಿಯಾಗಿದೆ. ಈ ವೆಬ್ ಸರಣಿಯನ್ನು ಅವೇಂಜರ್ಸ್, ಕ್ಯಾಪ್ಟನ್ ಅಮೆರಿಕ ಖ್ಯಾತಿಯ ನಿರ್ದೇಶಕರಾದ ರುಸ್ಸೋ ಬ್ರದರ್ಸ್ ನಿರ್ಮಾಣ ಮಾಡಿದ್ದಾರೆ. ಜೋಶ್ ಅಫೆಲ್​ಬ್ಯಾಮ್ ಹಾಗೂ ಬ್ರ್ಯಾನ್ ಓಹ್ ಈ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28ರಂದು ಬಿಡುಗಡೆ ಆಗಲಿದೆ. ಇದೇ ಹೆಸರಿನ ವೆಬ್ ಸರಣಿ ಹಿಂದಿಯಲ್ಲಿಯೂ ಬರಲಿದ್ದು, ಇಂಗ್ಲೀಷ್​ನಲ್ಲಿ ಪ್ರಿಯಾಂಕಾ ಚೋಪ್ರಾ, ರಿಚರ್ಡ್ ನಟಿಸಿದ್ದ ಪಾತ್ರಗಳಲ್ಲಿ ಸಮಂತಾ ಹಾಗೂ ವರುಣ್ ಧವನ್ ನಟಿಸುತ್ತಿದ್ದಾರೆ. ಭಾರತೀಯ ಸರಣಿಯನ್ನು ದಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ನಿರ್ದೇಶಿಸುತ್ತಿದ್ದಾರೆ.

Exit mobile version