ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಕೆಜಿಎಫ್ ಸಿನಿಮಾ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಯಶ್ ತಮ್ಮ 19ನೇ ಸಿನಿಮಾವನ್ನು ನರ್ತನ್ ಮಾಡಲಿದ್ದಾರೆ ಎಂಬ ಉಹಾಪೋಹಗಳು ಹಬ್ಬಿತ್ತು. ಆದರೀಗ ನರ್ತನ್ ವಿಸ್ತಾರ ನ್ಯೂಸ್‌ನೊಂದಿಗೆ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.
ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ನರ್ತನ್ ಅವರು ಯಶ್ 19 ಬಗ್ಗೆಯೂ ಮಾತನಾಡಿದ್ದಾರೆ. ನರ್ತನ್ ಈ ಬಗ್ಗೆ ಮಾತನಾಡಿ ʻʻಯಶ್ 19 ಅಥವಾ ಯಶ್ 20 ಸಿನಿಮಾ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳುವುದಂತೂ ಖಂಡಿತ. ಯಶ್ ನನ್ನ ಸಿನಿಮಾದಲ್ಲಿ ಯಾವ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ನೀವು ಕಾದು ನೋಡಬೇಕುʼʼ ಎಂದರು.
ಮಫ್ತಿ ಸಿನಿಮಾದ ಮೂಲಕ ಚಂದನವನದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ನರ್ತನ್ ಅವರು ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಭಾರಿ ಸಂಚಲನ ಸೃಷ್ಟಿಸಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್‌ಗಾಗಿ ನಿರ್ದೇಶಕ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.
ಸೆಟ್ಟೇರಿದ ಭೈರತಿ ರಣಗಲ್
ʻಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ (Bhairathi Ranagal) ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವರಾಜ್‌ಕುಮಾರ್. ವೇದ ಸಿನಿಮಾ ಬಳಿಕ ‘ಗೀತಾ ಪಿಕ್ಚರ್ಸ್’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ. ಈ ಚಿತ್ರಕ್ಕೆ ಮೇ 26ರಂದು ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ನಿರ್ದೇಶಕ ನರ್ತನ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Actor Yash: ‘ಯಶ್ 19’ ಸಿನಿಮಾ ಸೆಟ್‌ನ ಫೋಟೊ ಲೀಕ್? ಹೊಸ ಅವತಾರದಲ್ಲಿ ರಾಕಿ ಭಾಯ್!
ಭೈರತಿ ರಣಗಲ್ʼ ಸಿನಿಮಾ ಮಫ್ತಿ ಚಿತ್ರದ ಪ್ರಿಕ್ವೆಲ್ ಆಗಿದೆ. ನಿರ್ದೇಶಕ ನರ್ತನ್ ಈ ಬಗ್ಗೆ ಮಾತನಾಡಿ ʻʻಮಫ್ತಿ ಸಿನಿಮಾದಿಂದ ನನ್ನ ಹೆಸರು ಚಿತ್ರರಂಗದಲ್ಲಿ ಗುರುತಿಸಿಕೊಂಕೊಂಡಿದೆ. ಈ ಸಿನಿಮಾದಲ್ಲಿ ಶಿವಣ್ಣ ಲುಕ್ ಚೇಂಜ್ ಆಗಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಜತೆ ಬೇರೆ ಯಾವ ಸ್ಟಾರ್ ಸ್ಕ್ರೀನ್ ಶೇರ್ ಮಾಡುವುದಿಲ್ಲʼʼಎಂದರು.