ಬೆಂಗಳೂರು : ನಟಿ ನಿವೇದಿತಾ ಗೌಡ (Niveditha Gowda) ಅವರು ಇಂಡೋನೇಷ್ಯಾದ ಬಾಲಿಯಲ್ಲಿ ಸೋಲೋ ಟ್ರಿಪ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೆ ನಟಿ ಪೋಸ್ಟ್ ಮೂಲಕ ತಮ್ಮ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದವರ ಬಗ್ಗೆ ಚಳಿ ಬಿಡಿಸಿದ್ದಾರೆ. ʻʻಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀರಾ? ಹಣ ವ್ಯರ್ಥ ಮಾಡುತ್ತಿದ್ದೀರಿʼʼ ಎಂದು ಕೆಲವರು ಕೆಟ್ಟದ್ದಾಗಿಯೇ ನಿವೇದಿತಾ ಗೌಡ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ತಮ್ಮ ಎಲ್ಲ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಅವರ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ʻʻಗಂಡನ ಹಣ ವ್ಯರ್ಥ ಮಾಡುತ್ತಿದ್ದೀರಿʼʼ ಎಂದು ಕೆಲವರು ಕೆಟ್ಟದಾಗಿಯೇ ನಿವೇದಿತಾ ಗೌಡ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ನಟಿ ನಿವೇದಿತಾ ಗೌಡ ʻʻನನಗೆ ಬಂದಿರುವ ಕಮೆಂಟ್‌ಗಳಿಗೆ ಉತ್ತರಿಸಬೇಕು ಎಂದು ನನಗೆ ಇಲ್ಲ. ಆದರೆ ಕೆಲವರು ಮನಬಂದಂತೆ ಕಮೆಂಟ್ ಮಾಡಿದ್ದೀರಿ. ಒಬ್ಬ ಹುಡುಗ ಟ್ರಿಪ್‌ಗೆ ಹೋದಾಗ ಯಾವುದೇ ಸಮಸ್ಯೆಗಳು ನಿಮಗೆ ಬರುವುದಿಲ್ಲ. ಅದೇ ಹುಡುಗಿ ಪ್ರವಾಸಕ್ಕೆ ಹೋದಾಗ ಅನೇಕ ಆರೋಪಗಳನ್ನು ಮಾಡುತ್ತೀರಿ. ನಾನು ಕೂಡ ಉದ್ಯೋಗದಲ್ಲಿದ್ದೇನೆ. ನಾನು ಸ್ವತಂತ್ರವಾಗಿ ದುಡಿಯುತ್ತಿದ್ದೇನೆ. ಹಣ ಸಂಪಾದಿಸುತ್ತಿದ್ದೇನೆ. ನನ್ನ ಅಗತ್ಯಗಳನ್ನು ನೋಡಿಕೊಳ್ಳಲು ನಾನು ಸಂಪೂರ್ಣವಾಗಿ ಸಮರ್ಥಳಾಗಿದ್ದೇನೆ . ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಹೋದರೆ ನಿಮಗೇನು ಸಮಸ್ಯೆ? ಒಬ್ಬ ಹೆಣ್ಣುಮಗಳು ತನ್ನದೇ ಆದ ಸಾಮರ್ಥ್ಯ ಹೊಂದಿದ್ದಾಳೆ. ಆದರೆ ಜನರು ಇನ್ನೂ ನಂಬದಿರುವುದು ಬೇಸರದ ಸಂಗತಿ. ನನ್ನ ಪರವಾಗಿ ಮಾತನಾಡುವ ಕೆಲವು ಜನರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆʼʼಎಂದು ಕಮೆಂಟ್ ಮಾಡುವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ | Niveditha Gowda | ಸೋಲೋ ಟ್ರಿಪ್‌ನಲ್ಲಿ ನಿವೇದಿತಾ ಗೌಡ: ಫೋಟೊ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇರುವ ನಿವೇದಿತಾ ಅವರಿಗೆ ಚಂದನ್ ಶೆಟ್ಟಿ ಎಲ್ಲಿ ಎಂದು ನೆಟ್ಟಿಗರು ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ನಿವೇದಿತಾ ಅವರ ಬಗೆ ಬಗೆಯ ಫೋಟೊ ನೋಡಿ ಎಂಜಾಯ್ ಮಾಡಿ ಎಂದು ಅವರ ಅಭಿಮಾನಿಗಳು ಕಮೆಂಟ್ ಮೂಲಕ ಹಾರೈಸಿದ್ದಾರೆ.
ಇದನ್ನೂ ಓದಿ | Golden Star Ganesh | ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡ ʻತ್ರಿಬಲ್ ರೈಡಿಂಗ್ʼ ಸಿನಿಮಾ