ಬೆಂಗಳೂರು : ಬಾಲಿವುಡ್ ಹಿರಿಯ ನಟಿ ರೇಖಾ (Actress Rekha ) ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ. ರೇಖಾ ತಮ್ಮ ಖಾಸಗಿ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸುದ್ದಿಯಲ್ಲಿದ್ದಾರೆ. ಹಲವರ ಜತೆ ರೇಖಾ ಹೆಸರು ತುಳುಕು ಹಾಕಿಕೊಂಡಿದೆ. ಅಮಿತಾಭ್ ಜತೆ ರೇಖಾ ಹೆಸರೂ ತಳುಕು ಹಾಕಿಕೊಂಡಿತ್ತು. ಇಂದಿಗೂ ರೇಖಾ ಹೆಸರು ಬಂದಾಗ ಅಮಿತಾಭ್ ಹೆಸರೂ ಬರುತ್ತದೆ. ಇಬ್ಬರ ಪ್ರೇಮಕಥೆ ಇನ್ನೂ ಚರ್ಚೆಯಲ್ಲಿದೆ. ಇದೀಗ ನಟಿಯನ್ನು ʻಅಂಜನಾ ಸಫರ್ʼ ಸಿನಿಮಾದಲ್ಲಿ ಬಿ-ಟೌನ್ ನಟ ಬಿಸ್ವಜೀತ್ ಚಟರ್ಜಿ ಬಲವಂತವಾಗಿ ಚುಂಬಿಸಿವುದರ ಬಗ್ಗೆ ಯಾಸರ್ ಉಸ್ಮಾನ್ ಬರೆದಿರುವ ʻರೇಖಾ: ದಿ ಅನ್‌ಟೋಲ್ಡ್ʼ ಸ್ಟೋರಿಯಲ್ಲಿ ಉಲ್ಲೇಖಿಸಲಾಗಿದೆ.
ರೇಖಾ ಅವರು ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ 1969ರ ಚಲನಚಿತ್ರ ʻಅಂಜಾನಾ ಸಫರ್ ಚಿತ್ರದ ಮೂಲಕʼ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಿರ್ದೇಶಕ ಕುಲ್ಜೀತ್ ಪಾಲ್ ಮತ್ತು ನಟ ಬಿಸ್ವಜೀತ್ ರೇಖಾ ಅವರಿಗೆ ತಿಳಿಸದೆಯೇ ಅವರನ್ನು ಒಳಗೊಂಡ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸಲು ಯೋಜಿಸಿದ್ದರು. ನಿರ್ದೇಶಕರು ಆ್ಯಕ್ಷನ್ ಎಂದು ಹೇಳುತ್ತಿದ್ದಂತೆ ಬಿಸ್ವಜೀತ್ ಅವರು ರೇಖಾರನ್ನು ಹತ್ತಿರಕ್ಕೆ ಎಳೆದುಕೊಂಡು ಬಲವಂತವಾಗಿ ತುಟಿಗೆ ಚುಂಬಿಸಿರುವ ಘಟನೆ ಉಲ್ಲೇಖಗೊಂಡಿದೆ. ಇಷ್ಟಾಗಿಯೂ ನಿರ್ದೇಶಕರು ಕಟ್ ಎಂದು ಹೇಳದೇ ಐದು ನಿಮಿಷಗಳ ಕಾಲ ಚುಂಬನಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಸೆಟ್‌ನಲ್ಲಿ ಇದ್ದವರು ದೃಶ್ಯವನ್ನು ವೀಕ್ಷಿಸಿ ಶಿಳ್ಳೆ ಹಾಕಿದ್ದಾರೆʼʼ ಎಂದು ಉಲ್ಲೇಖಗೊಂಡಿದೆ.
ಇದನ್ನೂ ಓದಿ | Rohit Shetty | ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು
ʻಅಂಜನಾ ಸಫರ್ʼ ಬಿಡುಗಡೆ ಸಮಯದಲ್ಲಿ ಸೆನ್ಸಾರ್‌ಶಿಪ್ ಸಮಸ್ಯೆಗೆ ಗುರಿಯಾಗಿತ್ತು. 1969ರಲ್ಲಿ ಚಿತ್ರೀಕರಿಸಲಾಗಿದ್ದರೂ, ಇದು ಹತ್ತು ವರ್ಷಗಳ ನಂತರ 1979ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕಿಸ್ ದೃಶ್ಯದ ಕುರಿತು ಸಾಕಷ್ಟು ಚರ್ಚೆಗಳು ಆದವು. ಈ ಸುದ್ದಿಯನ್ನು ಲೈಫ್ ಮ್ಯಾಗಜೀನ್‌ನ ಏಷ್ಯನ್ ಆವೃತ್ತಿಯಲ್ಲಿ ಸಹ ಪ್ರಕಟಿಸಲಾಗಿದೆ. ಸದ್ಯ ನಟಿ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರೂ, ಹಲವಾರು ಪ್ರಶಸ್ತಿ ಕಾರ್ಯಕ್ರಮ ಮತ್ತು ಇನ್ನಿತರೆ ಸಮಾರಂಭಗಳಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ವಿಶ್ವಜಿತ್, ಜೀತೇಂದ್ರ, ನವೀನ್ ನಿಶ್ಚಲ್, ಸಾಜಿದ್ ಖಾನ್, ಶತ್ರುಘ್ನ ಸಿನ್ಹಾ ಮತ್ತು ಅಕ್ಷಯ್ ಕುಮಾರ್ ಅವರ ಪ್ರೀತಿಗೆ ಸಂಬಂಧಿಸಿದಂತೆಯೂ ರೇಖಾ ಹೆಸರು ಕೇಳಿ ಬರುತ್ತಿರುತ್ತದೆ.
ಇದನ್ನೂ ಓದಿ | Suniel Shetty | ʻಬಾಲಿವುಡ್ ಬಾಯ್ಕಾಟ್ ಟ್ರೆಂಡ್ʼ ತೆಗೆದು ಹಾಕುವಂತೆ ಸಹಾಯ ಕೋರಿದ ಸುನೀಲ್ ಶೆಟ್ಟಿ