ಬೆಂಗಳೂರು: ನಟಿ ಐಶ್ವರ್ಯಾ ರೈ (Aishwarya Rai) ವಿದೇಶಿ ಪತ್ರಕರ್ತ ಡೇವಿಡ್ ಫ್ರಾಸ್ಟ್ ಅವರಿಗೆ ಸಮೋಸ ತಿನ್ನುವ ಬಗೆಯನ್ನು ಕಲಿಸಿಕೊಟ್ಟ ಹಳೆಯ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ಇದನ್ನು ಹಳೆಯ ನೆನಪು ಎಂದು ಕರೆದರೆ, ಇನ್ನು ಕೆಲವರು ವಿಡಿಯೊ ತಮಾಷೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
2012ರ ಕ್ಲಿಪ್‌ನಲ್ಲಿ, ಐಶ್ವರ್ಯಾ ಮುಂಬೈನ ಅದ್ಧೂರಿ ರೆಸ್ಟೋರೆಂಟ್‌ನಲ್ಲಿ ಪತ್ರಕರ್ತ ಡೇವಿಡ್ ಫ್ರಾಸ್ಟ್ ಅವರೊಂದಿಗೆ ಊಟ ಮಾಡುವಾಗ ಸಮೋಸ ಹೇಗೆ ತಿನ್ನಬೇಕು ಎಂದು ಹೇಳಿಕೊಟ್ಟರು. ನಟಿ ಸಮೋಸವನ್ನು ಕೈಯಿಂದ ಹಿಡಿದು, ಡೇವಿಡ್ ಫ್ರಾಸ್ಟ್ ಅವರಿಗೆ ʻʻಇದನ್ನು ಕೈಯಿಂದ ತಿನ್ನಬೇಕು ಮತ್ತು ಫೋರ್ಕ್ ಅಥವಾ ಚಾಕುವಿನಿಂದ ಅಲ್ಲʼʼ ಎಂದು ವಿವರಿಸುತ್ತಾರೆ. ಡೇವಿಡ್ ಫ್ರಾಸ್ಟ್ ಸಮೋಸವನ್ನು ಫೋರ್ಕ್ ಮತ್ತು ಚಾಕುವಿನಿಂದ ತಿನ್ನಲು ಪ್ರಯತ್ನಿಸಿದ್ದಾಗ ಐಶ್ವರ್ಯಾ ಅವರು ಈ ರೀತಿ ವಿವರಣೆ ನೀಡುತ್ತಾರೆ. ಇದು ಫಿಂಗರ್ ಸ್ಸ್ನಾಕ್ಸ್ ಎಂದು ನಟಿ ನಗುತ್ತ ಹೇಳುವುದನ್ನು ಕಂಡು ಅವರ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ.
ಈ ವಿಡಿಯೊ 2012ರಲ್ಲಿ ಅಲ್-ಜಜೀರಾ ನಿರೂಪಕ, ಪತ್ರಕರ್ತ, ಹಾಸ್ಯನಟ ಮತ್ತು ಬರಹಗಾರ ಡೇವಿಡ್ ಫ್ರಾಸ್ಟ್ ಅವರೊಂದಿಗೆ ಐಶ್ವರ್ಯಾ ರೈ ನೀಡಿರುವ ಸಂದರ್ಶನ ವಿಡಿಯೊ. ಅಭಿಮಾನಿಗಳು ಐಶ್ವರ್ಯಾ ಅವರ ಹಾಸ್ಯ ಪ್ರಜ್ಞೆಯನ್ನು ಇಷ್ಟಪಟ್ಟಿದ್ದಾರೆ. ನಟಿ ‘ದೇಸಿ ಶೈಲಿಯಲ್ಲಿ’ ಸಮೋಸವನ್ನು ಹೇಗೆ ತಿನ್ನಬೇಕೆಂದು ಸಂದರ್ಶಕರಿಗೆ ಕಲಿಸಿದನ್ನು ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಹಳೆಯ ವಿಡಿಯೊಗೆ ಒಬ್ಬರು “ದೇಸಿ ಭಾರತೀಯ ಶೈಲಿಯಲ್ಲಿ ಸಮೋಸ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಫೋರ್ಕ್‌ನಲ್ಲಿ ಸಮೋಸ ತಿನ್ನುವುದು ಸುಲಭವಲ್ಲ!” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Aishwarya Rai: ‘ಪೊನ್ನಿಯನ್ ಸೆಲ್ವನ್ 2’ಪ್ರಿ ರಿಲೀಸ್ ಇವೆಂಟ್‌ನಲ್ಲಿ ಕ್ಯೂಟ್ ಆಗಿ ಕಂಡ ಐಶ್ವರ್ಯಾ ರೈ
ಪೊನ್ನಿಯನ್ ಸೇಲ್ವನ್ ಸಿನಿಮಾ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಸಿನಿಮಾ. ಮೇಕಿಂಗ್, ಸ್ಟಾರ್ ಕಾಸ್ಟ್ ಮೂಲಕವೇ ಗಮನ ಸೆಳೆದ ಈ ಚಿತ್ರ ನೋಡುಗರಿಂದಲೂ ಮೆಚ್ಚುಗೆ ಪಡೆದಿದ್ದಲ್ಲದೆ, ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿಯೂ ಕಮಾಲ್ ಮಾಡಿದೆ. ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಅವರು ರಾಣಿ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರವನ್ನು ಫ್ಯಾನ್ಸ್ ಮೆಚ್ಚಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ವಿಕ್ರಮ್, ಐಶ್ವರ್ಯಾ ರೈ, ತ್ರಿಶಾ, ಕಾರ್ತಿ ಸೇರಿ ಸ್ಟಾರ್ ಕಲಾವಿದರು ನಟಿಸಿದ್ದಾರೆ.