ಬೆಂಗಳೂರು: ಕಾಫಿ ವಿತ್ ಕರಣ್ ಸೀಸನ್ 8ರ ಶೋನಲ್ಲಿ ಇತ್ತೀಚಿನ ಸಂಚಿಕೆಯಲ್ಲಿ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ ಅತಿಥಿಯಾಗಿ ಬಂದಿದ್ದರು. ಈ ಶೋನಲ್ಲಿ ದೀಪಿಕಾ ಮೇಲೆ ರಣವೀರ್ ಕೋಪ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಅನುಷ್ಕಾ ಮತ್ತು ರಣವೀರ್ ಅವರ ಡೇಟಿಂಗ್ ವಿಚಾರ ಮುನ್ನೆಲೆಗೆ ಬಂದಿದೆ. ಜತೆಗೆ ಅನುಷ್ಕಾ ಅವರು ರಣವೀರ್ ಜತೆಗಿನ ಡೇಟಿಂಗ್ ಬಗ್ಗೆ ಮಾತನಾಡಿರುವ ವಿಡಿಯೊ ಕೂಡ ವೈರಲ್ ಆಗುತ್ತಿದೆ.
2011ರಲ್ಲಿ ಕಾಫಿ ವಿತ್ ಕರಣ್ ಸೀಸನ್ 3ನಲ್ಲಿ ರಣವೀರ್ ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡಾಗ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿತ್ತು. ಅನುಷ್ಕಾ ಅವರು ರಣವೀರ್‌ನೊಂದಿಗೆ ಏಕೆ ಡೇಟಿಂಗ್ ಮಾಡುವುದಿಲ್ಲ ಎಂಬುದನ್ನು ವಿವರಿಸುವ ವಿಡಿಯೊ ಇದೀಗ ವೈರಲ್ ಆಗಿದೆ.
ನಾವು ತುಂಬಾ ವಿಭಿನ್ನ ವ್ಯಕ್ತಿಗಳು
ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಅನುಷ್ಕಾ ತಾನು ಎಂದಿಗೂ ರಣವೀರ್ ಜತೆ ಡೇಟಿಂಗ್ ಮಾಡಿಲ್ಲ ಎಂದು ಹೇಳಿದ್ದಾರೆ. ಕಾರಣ ಕೇಳಿದಾಗ, “ನಿಮಗೆ ರಣವೀರ್ ಮತ್ತು ನನ್ನನ್ನು ಚೆನ್ನಾಗಿ ತಿಳಿದಿದ್ದರೆ. ನಾವು ತುಂಬಾ ವಿಭಿನ್ನ ವ್ಯಕ್ತಿಗಳು ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ” ಎಂದಿದ್ದಾರೆ. “ನಾವು ಜೀವನವನ್ನು ವಿಭಿನ್ನ ರೀತಿಯಲ್ಲಿ ನೋಡುತ್ತೇವೆ. ಅವರು ತುಂಬಾ ಪ್ರ್ಯಾಕ್ಟಿಕಲ್ ವ್ಯಕ್ತಿ, ನಾನು ಹಾಗಲ್ಲʼʼ ಎಂದಿದ್ದರು. ನಾನು ರಣವೀರ್ ಅವರನ್ನು ಇಷ್ಟಪಡುತ್ತೇನೆ, ಅವನು ಆಕರ್ಷಕ ಅದೆಲ್ಲ ಹೌದು. ಆದರೆ, ನನಗೆ, ಸಂಬಂಧವು ಕ್ಷುಲ್ಲಕವಾಗಿರಲು ಸಾಧ್ಯವಿಲ್ಲʼʼಎಂದಿದ್ದರು.
ಇದರ ಜತೆ ಮತ್ತೊಂದು ವಿಡಿಯೊ ವೈರಲ್ ಆಗುತ್ತಿದೆ. 2012ರಲ್ಲಿ ಮೊದಲ ಬಾರಿ ದೀಪಿಕಾ ಅವರನ್ನು ನೋಡಿದಾಗ ಹೇಗೆ ಅನಿಸಿತು ಎಂಬುದನ್ನು ರಣವೀರ್ ಸಿಂಗ್ ವಿವರಿಸಿದ್ದರು. ಇದೇ ಸ್ಟೋರಿಯನ್ನು ಅವರು ಅನುಷ್ಕಾ ಶರ್ಮಾ ಭೇಟಿ ಬಗ್ಗೆ ವಿವರಿಸುವಾಗಲೂ ಹೇಳಿದ್ದರು.
ಇದನ್ನೂ ಓದಿ: Ranveer Singh: ರಣವೀರ್ ಸಿಂಗ್ ಬೆತ್ತಲೆ ಫೋಟೊ ಇದೀಗ ಅಮೆರಿಕನ್ ಖ್ಯಾತ ಗಾಯಕನ ಆಲ್ಬಂ ಸಾಂಗ್‌ನಲ್ಲಿ!
Ranveer Singh angry on Deepika Padukone??#CoffeeWithKaran #DeepikaPadukone pic.twitter.com/gLlUyBYZGo
— Billi Pop (@Billi_Pop) October 27, 2023
ಕರಣ್ ಜೋಹರ್ ಶೋನಲ್ಲಿ ರಣವೀರ್ ಸಿಂಗ್ ಅವರು ದೀಪಿಕಾ ಬಗ್ಗೆ ಮಾತನಾಡಿದ್ದರು. ‘ನಾನು ಟೇಬಲ್ ಮೇಲೆ ಕುಳಿತಿದ್ದೆ. ಅಲ್ಲೇ ಸಮೀಪ ಬಾಗಿಲು ಇತ್ತು. ಬಾಗಿಲು ತೆರೆದು ಬರುವಾಗ ಕೂದಲು ಹಾರುತ್ತಿತ್ತು’ ಎಂದು ರಣವೀರ್ ಸಿಂಗ್ ಅವರು ಕಾಫಿ ವಿತ್ ಕರಣ್ನಲ್ಲಿ ಹೇಳಿಕೊಂಡಿದ್ದರು. ಅನುಷ್ಕಾ ಶರ್ಮಾ ಬಗ್ಗೆಯೂ ಅವರು ಇದೇ ರೀತಿ ಹೇಳಿದ್ದರು. ಅದೂ ಕಾಫಿ ವಿತ್ ಕರಣ್ ಶೋನಲ್ಲಿ., ಇದೇ ರೀತಿಯಲ್ಲಿಯೇ ಅವರು ಅನುಷ್ಕಾ ಭೇಟಿಯನ್ನು ಹೇಳಿಕೊಂಡಿದ್ದರು. ಈ ಕಾರಣದಿಂದ ಅನೇಕರು ರಣವೀರ್ ಸಿಂಗ್ ಹೇಳಿಕೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮೂರು ವರ್ಷಗಳ ಕಾಲ ಡೇಟ್ ಮಾಡಿದ ಬಳಿಕ ರಣವೀರ್ ಅವರು ದೀಪಿಕಾ ಅವರನ್ನು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2015ರಲ್ಲಿ ದೀಪಿಕಾ ಪಡುಕೋಣೆಗೆ ರಣವೀರ್ ಸಿಂಗ್ ಪ್ರಪೋಸ್ ಮಾಡಿದ್ದರು. ಅಂತಿಮವಾಗಿ, ಅನುಷ್ಕಾ ಶರ್ಮಾ 2017ರಲ್ಲಿ ಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮದುವೆಯಾದರು. 2018ರಲ್ಲಿ ದೀಪಿಕಾ ಪಡುಕೋಣೆ ಜತೆ ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ: Ranveer Singh: ʻನನ್ನ ಮಹಿʼಎಂದು ಧೋನಿ ಕೆನ್ನೆಗೆ ಮುತ್ತಿಟ್ಟ ರಣವೀರ್ ಸಿಂಗ್!
Ranveer used same lines when he met Anushka sharma and Deepika.
— Jawad Virk (@jawadvirk19) October 27, 2023
Karan johar be like: what, no way 😎#RanveerSingh #KoffeeWithKaran
pic.twitter.com/CHxWfJv0Vp
ನನಗೆ ಕಮಿಟ್‌ಮೆಂಟ್ ಇರಲಿಲ್ಲ
ಇದೆಲ್ಲ ವಿಡಿಯೊ ವೈರಲ್ ಆಗಿರುವ ಬೆನ್ನಲ್ಲೇ ದೀಪಿಕಾ ಅವರು ತಮ್ಮ ಡೇಟಿಂಗ್ ಕುರಿತಾಗಿ ರಣವೀರ್ ಮುಂದೆಯೇ ಶೋನಲ್ಲಿ ಮಾತನಾಡಿದ್ದರು. ಅದು ರಣವೀರ್ ಕೋಪಕ್ಕೆ ಕಾರಣವಾಗಿತ್ತು. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ದರು. ಇದಕ್ಕೆ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರುವುದಕ್ಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್‌ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್‌ಮೆಂಟ್ ಇರಲಿಲ್ಲ’ ಎಂದಿದ್ದರು.
Ranveer Singh angry on Deepika Padukone??#CoffeeWithKaran #DeepikaPadukone pic.twitter.com/gLlUyBYZGo
— Billi Pop (@Billi_Pop) October 27, 2023
ಇಷ್ಟೇ ಅಲ್ಲದೇ, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆ ಎಂದರು. ಇದನ್ನು ಕೇಳಿ ರಣವೀರ್ ಕಿಡಿಕಿಡಿಯಾದರು. ಪತ್ನಿಗೆ ಬುದ್ಧಿ ಕಲಿಸಲು ಪ್ರಶ್ನೆಯೊಂದಕ್ಕೆ ನಾನು ಮೂರು ಜನರನ್ನು ಭೇಟಿಯಾಗಿ ಬರುತ್ತಿದ್ದೆ ಎಂದರು. ಆಗ ದೀಪಿಕಾ ಯಾರು ಅವರು ಎಂದು ಅಚ್ಚರಿಯಿಂದ ಕೇಳಿದಾಗ, ರಣವೀರ್, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ? ನನ್ನನ್ನೇ ಪ್ರಶ್ನೆ ಮಾಡ್ತಿಯಾ ಎಂದರು. ತಾವು ಹೇಳಿದ್ದು ನೆನಪೇ ಇಲ್ಲ ಎಂದರು ಪ್ರಿಯಾಂಕಾ. ಆಗ ರಣವೀರ್ ನನಗೆ ಚೆನ್ನಾಗಿ ನೆನಪಿದೆ ಎಂದು ಕಿಡಿಕಿಡಿಯಾಗುತ್ತಲೇ ಹೇಳಿದ್ದರು.