Site icon Vistara News

Kabzaa Movie: ಕಬ್ಜ ಒಟಿಟಿ ರಿಲೀಸ್‌ ಯಾವಾಗ? ಕಬ್ಜ 2ಗೆ ತಯಾರಿ ನಡೆದಿದ್ಯಾ?

Kabzaa Movie OTT

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ (Kabzaa Movie) ಒಟಿಟಿಗೆ ಬರುತ್ತಿದೆ ಎಂಬ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ, ಉಪೇಂದ್ರ, ಸುದೀಪ್‌ ನಟನೆಯ ‘ಕಬ್ಜ’ ಚಿತ್ರ ಏ.14ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಮಾ.17ರಂದು 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಿತ್ತು. ಇದೀಗ ಕಬ್ಜ 2ಗೆ ಆರ್‌ ಚಂದ್ರು ಅವರು ತಂಡದೊಂದಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ.

ಕಬ್ಜ ಸಿನಿಮಾ ರಿಲೀಸ್‌ ಆದ ಒಂದೇ ತಿಂಗಳಿಗೆ ಒಟಿಟಿಗೆ ಬರುವ ಮೂಲಕ ಇನ್ನಷ್ಟು ಸಿನಿ ಪ್ರೇಮಿಗಳ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದ್ದಾರೆ. ಕಬ್ಜ ಮೊದಲನೇ ಭಾಗದ ಅಂತ್ಯದಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡು ಎರಡನೇ ಭಾಗ ಬರಲಿದೆ ಎಂಬ ಸೂಚನೆ ನೀಡಿದ್ದರು. ಕಬ್ಜ ಒಟಿಟಿ ರಿಲೀಸ್‌ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಕಬ್ಜ 2ಬಗ್ಗೆ ಈಗಾಗಲೇ ಚರ್ಚೆಗಳು ಆಗುತ್ತಿವೆ. ದಕ್ಷಿಣದ ಮತ್ತು ಬಾಲಿವುಡ್ ತಾರೆಯರು ಕೂಡ ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕುರಿತು ಮಾಧ್ಯಮಕ್ಕೆ ಚಂದ್ರು ಮಾತನಾಡಿ, ‘ಕಬ್ಜ 2 ಅದ್ಧೂರಿಯಾಗಿ ಮತ್ತು ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗುವುದು ಸತ್ಯ. ಕಥೆ ಮತ್ತು ಕಲಾವಿದರ ಬಗ್ಗೆ ಸದ್ಯಕ್ಕೆ ಏನೂ ಅಂದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಎಲ್ಲದರ ಕುರಿತು ಮಾತನಾಡುತ್ತೇನೆ’ ಎಂದಿದ್ದಾರೆ.

ಕತಾರ್‌ನಲ್ಲಿ 11ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ಸಿಯಾಗಿ ಪ್ರದರ್ಶನ ಕಾಣುತ್ತಿರುವ ಮೊಟ್ಟಮೊದಲ ಕನ್ನಡ ಸಿನಿಮಾ ‘ಕಬ್ಜ’ ಎನ್ನಲಾಗುತ್ತಿದೆ.

ಇದನ್ನೂ ಓದಿ: Kabzaa Movie: ಕತಾರ್‌ನಲ್ಲಿ `ಕಬ್ಜ’ ಅದ್ಧೂರಿ ಪ್ರದರ್ಶನ

ಸಿನಿಮಾ ತಂಡ

ಕೆಜಿಎಫ್, ಕಾಂತಾರ ಸಿನಿಮಾಗಳಂತೆಯೇ ಕಬ್ಜ ಕೂಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ವಿತರಣಾ ಹಕ್ಕನ್ನು ಲೈಕಾ ಪ್ರೊಡಕ್ಷನ್‌ ಸಂಸ್ಥೆ ಹಲವಾರು ಕೋಟಿ ರೂ. ಕೊಟ್ಟು ಖರೀದಿಸಿದೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

Exit mobile version