Site icon Vistara News

Satish Kaushik: ನೀನಾ ಗುಪ್ತಾ ಗರ್ಭಿಣಿಯಾದಾಗ ಮದುವೆ ಆಗಲು ಮುಂದಾಗಿದ್ದ ಸತೀಶ್ ಕೌಶಿಕ್

When Satish Kaushik offered to marry pregnant Neena Gupta

ಬೆಂಗಳೂರು: ಗುರುವಾರ ನಿಧನರಾದ ಬಾಲಿವುಡ್ ನಟ ಸತೀಶ್ ಕೌಶಿಕ್ (Satish Kaushik) ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೆಯ ವಿದ್ಯಾರ್ಥಿಯಾಗಿದ್ದರು ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸುವ ಮೊದಲು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜತೆಗೆ ನಟಿ ನೀನಾ ಗುಪ್ತಾ ಮತ್ತು ಸತೀಶ್ ಕೌಶಿಕ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ನಿರ್ದೇಶಕ ಕುಂದನ್ ಷಾ ಅವರ 1983ರ ಹಿಟ್ ಸಿನಿಮಾ ʻಜಾನೆ ಭಿ ದೋ ಯಾರೋʼ (Jaane Bhi Do Yaaro) ಸಿನಿಮಾದಲ್ಲಿ ನಾಸಿರುದ್ದೀನ್ ಶಾ, ರವಿ ಬಸ್ವಾನಿ ಮತ್ತು ನೀನಾ ಗುಪ್ತಾ ಅವರೊಂದಿಗೆ ಸತೀಶ್ ಕೌಶಿಕ್ ನಟಿಸಿದ್ದಾರೆ. ಸತೀಶ್ ಹಾಗೂ ತಮ್ಮ ನಡುವಿನ ಸ್ನೇಹದ ಕುರಿತು ನೀನಾ ಗುಪ್ತಾ ಈಗ ನೆನಪಿಸಿಕೊಂಡಿದ್ದಾರೆ.

ಒಂದೆರಡು ವರ್ಷಗಳ ಹಿಂದೆ ಪ್ರಕಟವಾದ ನೀನಾ ಗುಪ್ತಾ ಅವರ ಆತ್ಮಚರಿತ್ರೆ ʻಸಚ್ ಕಹುನ್ ತೋಹ್ʼನಲ್ಲಿ, ಕೌಶಿಕ್‌ನೊಂದಿಗಿನ ತನ್ನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟಿಗ ವಿವ್ ರಿಚರ್ಡ್ಸ್ ಜತೆ ಸಂಬಂಧ ಹೊಂದಿದ್ದ ನೀನಾ ಗರ್ಭಿಣಿಯಾಗಿದ್ದರು. ಅವಿವಾಹಿತಯಾದ ನೀನಾ ಅವರು ಗರ್ಭಿಣಿಯಾದ ಕಾರಣ ಕೌಶಿಕ್ ಆ ಸಮಯದಲ್ಲಿ ನೀನಾ ಅವರಿಗೆ ಮಗುವಿನ ಕುರಿತು ಒಂದು ಸಲಹೆ ನೀಡಿದ್ದರಂತೆ. ಅದೇನಂದರೆ, ಚಿಂತಿಸಬೇಡ, ಮಗುವಿನ ಬಣ್ಣ ಕಪ್ಪು ಇದ್ದರೆ, ಅದ ನನ್ನ ಮಗು ಎಂದು ಹೇಳು. ಆ ಮೇಲೆ ನಾವು ಮದುವೆಯಾಗೋಣ ಎಂದು ಕೌಶಿಕ್ ನೀನಾ ಅವರಿಗೆ ಹೇಳಿದ್ದರಂತೆ.

ಸಂದರ್ಶನವೊಂದರಲ್ಲಿ ಕೌಶಿಕ್ ಅವರು ಈ ಬಗ್ಗೆ ಮಾತನಾಡಿದ್ದರು. 1975ರಿಂದ ನೀನಾ ಹಾಗೂ ನಾನು ಸ್ನೇಹಿತರಾಗಿದ್ದೇವೆ. ಆಕೆ ಗರ್ಭಿಣಿಯಾಗಿದ್ದು ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ನೀನಾ ಆ ಸಮಯದಲ್ಲಿ ಒಬ್ಬಂಟಿಯಾದ ಕಾರಣ, ನಾನು ಸಹಾಯ ಮಾಡಲು ಮುಂದಾಗಿದ್ದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Neena Gupta: ನಿರ್ದೇಶಕ ಶ್ಯಾಮ್ ಬೆನಗಲ್ ಬಗ್ಗೆ ಅಸಮಾಧಾನ ಹೊರ ಹಾಕಿದ ನಟಿ ನೀನಾ ಗುಪ್ತಾ

ಬಾಂಬೆ ಟೈಮ್ಸ್‌ ಸಂದರ್ಶನದಲ್ಲಿ ಕೌಶಿಕ್ ಅವರು ನೀನಾ ಕುರಿತಾಗಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ʻʻನೀನಾ ಅವರನ್ನು ಏಕಾಂಗಿಯಾಗಿ ಬಿಡಲು ನನ್ನ ಮನಸ್ಸು ಒಪ್ಪಿರಲಿಲ್ಲ. ತುಂಬಾ ಕಾಳಜಿ ವಹಿಸಿದೆ. ಆಕೆಯನ್ನು ಮದುವೆಯಾಗುವ ನನ್ನ ಪ್ರಸ್ತಾಪ ಹೇಗಿತ್ತು ಎಂದರೆ ‘ಹಾಸ್ಯ, ಕಾಳಜಿ, ಗೌರವ ಮತ್ತು ಬೆಂಬಲದೊಂದಿಗೆ ಮಿಕ್ಸ್‌ ಅಪ್‌ ಆಗಿತ್ತು. ನಾನಿರುವಾಗ ಚಿಂತೆ ಏಕೆ ನಿನಗೆ ನೀನಾ? ಎಂದು ಅವಳಿಗೆ ಹೇಳಿದ್ದೆ. ಇದಾದ ನಂತರ ನಮ್ಮ ಸಂಬಂಧ ಗಟ್ಟಿಯಾಗುತ್ತಲೇ ಹೋಯಿತುʼʼ ಎಂದರು. ಅವರ ನಿಧನದ ಮುಂಚೆ ನಟ ಜಾವೇದ್ ಅಖ್ತರ್ ಅವರ ಮನೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಹೋಳಿ ಆಚರಿಸಿದ್ದರು.

Exit mobile version