Site icon Vistara News

96th Academy Awards: 2024ರ ಆಸ್ಕರ್ ಪ್ರಶಸ್ತಿ ಸಮಾರಂಭ ಎಲ್ಲಿ? ವೀಕ್ಷಣೆ ಹೇಗೆ?

Where, when how to stream 95th Academy Awards in India

ಬೆಂಗಳೂರು: 96ನೇ ಸಾಲಿನ ಅಕಾಡೆಮಿ ಪ್ರಶಸ್ತಿ ( 96th Academy Awards) ಮಾರ್ಚ್ 10ರಂದು ನಡೆಯಲಿದೆ. ಹಾಲಿವುಡ್ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು 95 ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಸಜ್ಜಾಗುತ್ತಿದ್ದಾರೆ. 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಮಾರ್ಚ್ 10ರಂದು ಲಾಸ್ ಎಂಜಲೀಸ್‌ನಲ್ಲಿರುವ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಆಗಲಿದೆ.

ಡಿಸ್ನಿ+ಹಾಟ್‌ಸ್ಟಾರ್‌ 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಲೈವ್ ಆಗಿ ತೋರಿಸಲಿದೆ. ಡಿಸ್ನಿ+ಹಾಟ್‌ಸ್ಟಾರ್ ಅಧಿಕೃತವಾಗಿ ತನ್ನ ಎಕ್ಸ್‌ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಮಾರ್ಚ್ 11ನೇ ತಾರೀಕು ಈ ಒಟಿಟಿ ವೇದಿಕೆಯಲ್ಲಿ ಸಿನಿಮಾ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಮಾರಂಭ ಪ್ರಸಾರ ಆಗಲಿದೆ.

ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಆಗಲಿದೆ. ಸೋಮವಾರ (ಮಾರ್ಚ್ 11) ಬೆಳಗ್ಗೆ 4.30ಕ್ಕೆ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ವೀಕ್ಷಿಸಬಹುದು. 2024ರ ಆಸ್ಕರ್ ಪ್ರಶಸ್ತಿಗೆ ಎರಡು ಹಾಲಿವುಡ್ ಸಿನಿಮಾಗಳು ಪೈಪೋಟಿಗೆ ಇಳಿದಿವೆ. ‘ಓಪನ್‌ಹೈಮರ್’ ಸಿನಿಮಾ 13 ವಿಭಾಗದಲ್ಲಿ ನಾಮಿನೇಟ್ ಆಗಿದ್ದರೆ, ‘ಬಾರ್ಬಿ’ ಎಂಟು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

‘12th ಫೇಲ್’ ಸ್ವತಂತ್ರ ನಾಮನಿರ್ದೇಶನ

ಸ್ವತಂತ್ರವಾಗಿ ’12th ಫೇಲ್’ ಆಸ್ಕರ್‌ಗೆ ಲಗ್ಗೆ ಇಟ್ಟಿದೆ. ‘12th ಫೇಲ್’ ಸಿನಿಮಾ (12th Fail Movie) ಸೂಪರ್‌ ಹಿಟ್‌ ಆಗಿದ್ದು ಗೊತ್ತೇ ಇದೆ. ವಿಧು ವಿನೋದ್ ಚೋಪ್ರಾ ನಿರ್ದೇಶನ ಮತ್ತು ವಿಕ್ರಾಂತ್ ಮೆಸ್ಸಿ ನಾಯಕನಾಗಿ ನಟಿಸಿರುವ ಚಿತ್ರ ಇದೀಗ ಸ್ವತಂತ್ರ ನಾಮನಿರ್ದೇಶನವಾಗಿ ಆಸ್ಕರ್‌ಗೆ ಸಲ್ಲಿಸಲ್ಪಟ್ಟಿದೆ. ‘12th ಫೇಲ್’ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅಕ್ಟೋಬರ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಚಿತ್ರದಲ್ಲಿ ಮನೋಜ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ನಟಿಸಿದ್ದರು.

ಇದನ್ನೂ ಓದಿ: Rabies disease : ನನ್ನ ಅಂತ್ಯಕ್ರಿಯೆಗೆ ನೀನು ಬಾ ಎಂದು ಹೇಳುತ್ತಲೇ ಜೀವ ಬಿಟ್ಟ ಪ್ರೇಮಿ!

‘2018’ ಸಿನಿಮಾ

ಸೆಪ್ಟೆಂಬರ್ 2023ರಲ್ಲಿ (Oscars 2024), ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ʻ2018ʼ ಸಿನಿಮಾವನ್ನು ಆಸ್ಕರ್‌ ರೇಸ್‌ಗೆ ಆಯ್ಕೆ ಮಾಡಿತ್ತು. ಆಸ್ಕರ್‌ 2024ರ (Oscars 2024) ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯಲು ‘2018’ ಸಿನಿಮಾ (2018 Movie) ಸೋತಿತ್ತು. ಇಷ್ಟು ವರ್ಷ ಭಾರತದಿಂದ ಯಾವ ಸಿನಿಮಾ ಕೂಡ ಆಯ್ಕೆ ಆಗಿರಲಿಲ್ಲ. ಆದರೆ 2018 ಸಿನಿಮಾಗೆ ಆಸ್ಕರ್‌ ಸಿಗಬಹುದು ಎಂದು ಭಾರತೀಯರು ಅಂದು ಕೊಂಡಿದ್ದರು. ಕಳೆದ ವರ್ಷ ಭಾರತದ RRR ಸಿನಿಮಾದ “ನಾಟು ನಾಟು..” ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಹಾಗೇ ‘ದ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯೂಮೆಂಟರಿ ಕೂಡ ಪ್ರಶಸ್ತಿ ಗಿಟ್ಟಿಸಿಕೊಂಡಿತ್ತು.

ಅಕಾಡೆಮಿಯು ಈ ಹಿಂದೆ ಎರಡು ನಿರೂಪಕರ ಪಟ್ಟಿಯನ್ನು ಬಹಿರಂಗಪಡಿಸಿತ್ತು, ಅದರಲ್ಲಿ ಮಹೆರ್ಶಾಲಾ ಅಲಿ, ನಿಕೋಲಸ್ ಕೇಜ್, ಜೇಮೀ ಲೀ ಕರ್ಟಿಸ್, ಬ್ರೆಂಡನ್ ಫ್ರೇಸರ್, ಜೆಸ್ಸಿಕಾ ಲ್ಯಾಂಗ್, ಮ್ಯಾಥ್ಯೂ ಮೆಕ್‌ಕೊನೌಘೆ, ಲುಪಿಟಾ ನ್ಯೊಂಗೊ ಮತ್ತು ಅಲ್ ಪಸಿನೊ ಸೇರಿದ್ದಾರೆ.

ಕ್ರಿಸ್ ಹೆಮ್ಸ್‌ವರ್ತ್, ಡ್ವೇನ್ ಜಾನ್ಸನ್, ಜೆನ್ನಿಫರ್ ಲಾರೆನ್ಸ್, ಮಿಚೆಲ್ ಫೈಫರ್, ಕೆ ಹುಯ್ ಕ್ವಾನ್, ಸ್ಯಾಮ್ ರಾಕ್‌ವೆಲ್, ಮಿಚೆಲ್ ಯೋಹ್, ಝೆಂಡಯಾ, ಬ್ಯಾಡ್ ಬನ್ನಿ, ಮೈಕೆಲ್ ಕೀಟನ್, ರೆಜಿನಾ ಕಿಂಗ್, ಕೇಟ್ ಮೆಕಿನ್ನನ್, ರೀಟಾ ಮೊರೆನೊ, ಜಾನ್ ಮುಲಾನಿ, ಕ್ಯಾಥರೀನ್ ಒ’ಹರಾ, ಓ’ಹರಾ ರಮಿ ಯೂಸೆಫ್ ಕೂಡ ಈ ವರ್ಷ ಆಸ್ಕರ್ ಪ್ರಶಸ್ತಿಯನ್ನು ನೀಡಲಿದ್ದಾರೆ.

ಮಾರ್ಚ್ 10 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 96 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ಜನಪ್ರಿಯ ಟಿವಿ ನಿರೂಪಕ ಜಿಮ್ಮಿ ಕಿಮ್ಮೆಲ್ ಈ ವರ್ಷ ನಾಲ್ಕನೇ ಬಾರಿಗೆ ಸಮಾರಂಭವನ್ನು ಆಯೋಜಿಸಲಿದ್ದಾರೆ.

Exit mobile version